ನವದೆಹಲಿ: ತಮ್ಮ ಪುತ್ರಿಯ ಮಾನಹಾನಿಯಾಗಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಲ್ಲಿಸಿರುವ ಅರ್ಜಿ ಸಂಬಂಧ
ಕಾಂಗ್ರೆಸ್ ನಾಯಕರಿಗೆ ದೆಹಲಿ ಹೈಕೋರ್ಟ್ ಸಮನ್ಸ್ ಜಾರಿ ಮಾಡಿದೆ.
ತಮ್ಮ ಪುತ್ರಿ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಪವನ್ ಖೇರಾ ವಿರುದ್ಧ 2 ಕೋಟಿ ರೂಪಾಯಿ ಮಾನಹಾನಿ ಪ್ರಕರಣವನ್ನು ಸ್ಮೃತಿ ಇರಾನಿ ದಾಖಲಿಸಿದ್ದಾರೆ. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಿನಿ ಪುಷ್ಕರ್ಣ ಅವರಿದ್ದ ಪೀಠ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಮಾನಹಾನಿಕರ ವಿಚಾರಗಳನ್ನು 24 ಗಂಟೆಗಳ ಒಳಗೆ ಕಾಂಗ್ರೆಸ್ ನಾಯಕರು ತೆಗೆಯಬೇಕು. ಇಲ್ಲವಾದಲ್ಲಿ ಸಾಮಾಜಿಕ ಜಾಲತಾಣ ಕಂಪನಿ ತೆಗೆಯಲಿವೆ ಎಂದು ಸೂಚಿಸಿ ಇಬ್ಬರು ನಾಯಕರಿಗೆ ಸಮನ್ಸ್ ಜಾರಿ ಮಾಡಿದೆ.