ಮುಂಬೈ: ಇತ್ತೀಚೆಗೆ ಕೇರಳಕ್ಕೆ ಸ್ಥಳಾಂತರಗೊಂಡಿರುವ ಮುಂಬೈನ ದಂಪತಿ ತಮ್ಮ 16 ತಿಂಗಳ ಮಗುವಿನ ಚಿಕಿತ್ಸೆಗಾಗಿ ಜೀವರಕ್ಷಕ ಔಷಧವನ್ನು ಖರೀದಿಸಲು ದೇಣಿಗೆ ಸಂಗ್ರಹಿಸುತ್ತಿದ್ದು, ಅನಾಮಧೇಯ ದಾನಿಯೊಬ್ಬರು 15.31 ಕೋಟಿ ರೂ. ನೆರವು ನೀಡಿ ಅಚ್ಚರಿ ಮೂಡಿಸಿದ್ದಾರೆ.
ಮೆರೈನ್ ಇಂಜಿನಿಯರ್ ಸಾರಂಗ್ ಮೆನನ್ ಮತ್ತು ಅದಿತಿ ನಾಯರ್ ಅವರ ಪುತ್ರ ನಿರ್ಮಾಣ್, ಸ್ಷೈನಲ್ ಮಸ್ಕ್ಯುಲರ್ ಅಟ್ರೋಫಿ ರೋಗದಿಂದ ಬಳಲುತ್ತಿದ್ದಾನೆ. ಇದು ಮೆದುಳಿನ ಅಪರೂಪದ ಕಾಯಿಲೆಯಾಗಿದ್ದು, ಇದರ ಚಿಕಿತ್ಸೆಯ ಪ್ರಮುಖ ಔಷಧದ ಬೆಲೆ ಸುಮಾರು 17.3 ಕೋಟಿ ರೂ. ಹೀಗಾಗಿ ದಂಪತಿ ಸಾಮಾಜಿಕ ಮಾಧ್ಯಮದಲ್ಲಿನ ಕ್ರೌಡ್ಫಂಡಿಂಗ್ ವೇದಿಕೆ ಮಿಲಾಪ್ನಲ್ಲಿ ನೆರವು ಕೋರಿದ್ದರು.
ಸಾಕಷ್ಟು ನೆರವು ಹರಿದು ಬಂದಿದೆ. ಅನಾಮಧೇಯರೊಬ್ಬರು 1.4 ಶತಕೋಟಿ ಡಾಲರ್ ನೆರವು ನೀಡಿದ್ದಾರೆ. ಇಷ್ಟು ದೊಡ್ಡ ಮೊತ್ತ ನೀಡಿದ ವ್ಯಕ್ತಿಯ ಪರಿಚಯವಿಲ್ಲ ಎಂದು ಅದಿತಿ ನಾಯರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕ್ರೌಡ್ಫಂಡಿಂಗ್ ಪುಟ ಪ್ರಾರಂಭಿಸಿದಾಗ ಮೆನನ್ ನಿಗದಿಪಡಿಸಿದ ಗುರಿ 17.50 ಕೋಟಿ ರೂ. ‘ಈ ಬೃಹತ್ ದೇಣಿಗೆಯು ನಮ್ಮನ್ನು ಗುರಿಯ ಹತ್ತಿರಕ್ಕೆ ಕೊಂಡೊಯ್ದಿದೆ ಎಂದು ಹೇಳಲು ಖುಷಿಯಾಗುತ್ತಿದೆ. ಉಳಿದ ಮೊತ್ತವನ್ನು ನಾವು ಸಂಬಂಧಿಕರು ಮತ್ತು ಸ್ನೇಹಿತರ ಮೂಲಕ ಸಂಗ್ರಹಿಸುತ್ತೇವೆ’ ಎಂದು ಅವರು ಹೇಳಿದರು.
‘ಆದಾಗ್ಯೂ, ಕೆಲವು ಕಡ್ಡಾಯ ಪರೀಕ್ಷೆಗಳು ಮತ್ತು ಅಮೆರಿಕದಿಂದ ಮುಂಬೈಗೆ ಔಷಧ ಬರಲು ಸಮಯ ಬೇಕು. ಹೀಗಾಗಿ ಮಗುವಿನ ಚಿಕಿತ್ಸೆಗೆ ಕನಿಷ್ಠ 2-3 ವಾರಗಳು ಬೇಕಾಗುತ್ತದೆ’ ಎಂದು ನಾಯರ್ ಮಾಹಿತಿ ನೀಡಿದರು.
ಔಷಧ ತರಿಸಿಕೊಳ್ಳಲು ಅಗತ್ಯ ಅನುಮತಿಗಾಗಿ ನಾಯರ್ ಕುಟುಂಬವು ಈಗಾಗಲೇ ಕೇಂದ್ರ ಹಣಕಾಸು ಸಚಿವಾಲಯ ಮತ್ತು ಆಮದು-ರಫ್ತು ಇಲಾಖೆಯನ್ನು ಸಂಪರ್ಕಿಸಿದೆ. ಹಿಂದೂಜಾ ಆಸ್ಪತ್ರೆಯ ಮಕ್ಕಳ ನರರೋಗ ತಜ್ಞ ಡಾ.ನೀಲು ದೇಸಾಯಿ ಅವರು ನಿರ್ಮಾಣ್ ಗೆ ಚಿಕಿತ್ಸೆ ನೀಡಲಿದ್ದಾರೆ.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.
ಮಗುವಿನ ಚಿಕಿತ್ಸೆಗೆ ಕ್ರೌಡ್ ಫಂಡಿಂಗ್ : ಅನಾಮಧೇಯನಿಂದ 15.31 ಕೋಟಿ ರೂ. ನೆರವು
Previous Article1.26 ಲಕ್ಷ ರೂ. ಮೌಲ್ಯದ ಮದ್ಯ ನಾಶ
Next Article ಕಾಲೇಜು ವಿದ್ಯಾರ್ಥಿ ನೇಣಿಗೆ ಶರಣು