ಅಹಮದಾಬಾದ್ : ಭಾನುವಾರ ಅಹಮದಾಬಾದ್ನಲ್ಲಿ ಎಡಬಿಡದೆ ಮಳೆ ಸುರಿದ ಕಾರಣ ಚೆನ್ನೈ ಸೂಪರ್ಕಿಂಗ್ಸ್ ಹಾಗು ಗುಜರಾತ್ ಟೈಟಾನ್ಸ್ ನಡುವಿನ ಫೈನಲ್ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿತ್ತು.
ಒಂದು ಲಕ್ಷದ ಮೂವತ್ತು ಸಾವಿರ ಆಸನ ಸಾಮರ್ಥ್ಯ ಹೊಂದಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪ್ರೇಮಿಗಳು ಫೈನಲ್ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಮಳೆಯ ಕಾರಣಕ್ಕೆ ಒಂದು ಎಸೆತ ಕಾಣದೆ ಪಂದ್ಯ ಮೀಸಲು ದಿನಕ್ಕೆ ಮುಂದೂಡಿದ ಕಾರಣಕ್ಕೆ ಟಿಕೆಟ್ ಪಡೆದಿರುವವರು ಮಾರನೆಯ ದಿನ ಪಂದ್ಯವನ್ನು ಹಳೆಯ ರಶೀದಿ ತೋರಿಸಿ ವೀಕ್ಷಿಸಬಹುದು ಎಂದು ಬಿಸಿಸಿಐ ತಿಳಿಸಿತ್ತು.
ತಮ್ಮ ನೆಚ್ಚಿನ ಆಟಗಾರರನನ್ನು ನೋಡಲು ದೂರದ ಊರುಗಳಿಂದ ಬಂದಿದ್ದ ಕ್ರೀಡಾಭಿಮಾನಿಗಳಿಗೆ ಮಳೆರಾಯ ನಿರಾಸೆ ಉಂಟುಮಾಡಿದ್ದ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದೆ.
ಸಿಎಸ್ಕೆ ತಂಡದ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ ಧೋನಿಯನ್ನು ನೋಡಲು ಬಂದಿದ್ದರು ಆದರೆ ಪಂದ್ಯ ನಡೆಯದ ಕಾರಣ ಅಭಿಮಾನಿಗಳು ಸ್ಟೇಡಿಯಂ ಹಾಗೂ ಹತ್ತಿರದ ರೈಲ್ವೇ ಸ್ಟೇಷನ್ಗಳಲ್ಲಿ ರಾತ್ರಿ ಕಳೆದಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ಪಂದ್ಯ ವೀಕ್ಷಿಸಲು ಬಂದಿದ್ದ ಜನತೆ ಮಳೆಯಿಂದ ರಕ್ಷಣೆ ಪಡೆಯಲು ಸ್ಟೇಡಿಯಂ ಹೊರಗೆ ಹಾಕಲಾಗಿದ್ದ ವಿರಾಟ್ ಕೊಹ್ಲಿ ಅವರ ಬ್ಯಾನರ್ಅನ್ನು ತೆಗೆದು ಅದರಲ್ಲಿ ಕೆಳಗೆ ನಿಲ್ಲುತ್ತಿರುವ ವಿಡಿಯೋವನ್ನು ಸಹ ವೈರಲ್ ಆಗಿದೆ.