ದೆಹಲಿ: ಇಡಿ ವಶದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪರ ಅವರ ಪತ್ನಿ ಸುನೀತಾ ಶುಕ್ರವಾರ ವಾಟ್ಸಾಪ್ ಮೂಲಕ ಕೇಜ್ರಿವಾಲ್ ಕೋ ಆಶೀರ್ವಾದ್(ಕೇಜ್ರಿವಾಲ್ ಅವರನ್ನು ಆಶೀರ್ವದಿಸಿ) ಎನ್ನುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ದೇಶದಲ್ಲಿರುವ ದುಷ್ಟಶಕ್ತಿ ಹಾಗೂ ಸಾರ್ವಾಧಿಕಾರಿ ಶಕ್ತಿಗಳ ವಿರುದ್ಧ ಕೇಜ್ರಿವಾಲ್ ಹೋರಾಡುತ್ತಿದ್ದಾರೆ. ಹಾಗಾಗಿ ಸಾರ್ವಜನಿಕರು ತಮ್ಮ ಆಶೀರ್ವಾದ ಮತ್ತು ಪಾರ್ಥನೆಯ ಮೂಲಕ ಕೇಜ್ರಿವಾಲ್ ಅವರನ್ನು ಬೆಂಬಲಿಸುವಂತೆ ಸುನೀತಾ ಕೇಜ್ರಿವಾಲ್ ಕೋರಿದ್ದಾರೆ.
ನನಗೆ ಅನೇಕ ಕರೆಗಳು ಬಂದವು ಅನೇಕ ಜನರು ಅರವಿಂದ್ ಕೇಜ್ರಿವಾಲ್‌ಗಾಗಿ ಉಪವಾಸ ಮಾಡುತ್ತಿದ್ದರು. ೮೨೯೭೩೨೪೬೨೪ ಈ ವಾಟ್ಸಾಪ್ ಸಂಖ್ಯೆ ಮೂಲಕ ನಿಮ್ಮ ಪ್ರೀತಿಯ ಸಂದೇಶ ಬರೆದು ಕಳುಹಿಸಿ. ನಿಮ್ಮ ಸಂದೇಶಗಳನ್ನು ಓದುವಾಗ ಅವರಿಗೆ ಖುಷಿಯಾಗುತ್ತದೆ.
ಜೈಲಿನಲ್ಲಿರುವ ಅವರಿಗೆ ಎಲ್ಲ ಸಂದೇಶಗಳನ್ನು ತಲುಪಿಸುತ್ತೇನೆ ಎಂದು ಸುನೀತಾ ಹೇಳಿದ್ದಾರೆ. ಕೇಜ್ರಿವಾಲ್ ಅವರಿಗೆ ಸಂದೇಶ ಕಳುಹಿಸಲು ನೀವು ಎಎಪಿ ಕಾರ್ಯಕರ್ತರಾಗಿರಬೇಕಿಲ್ಲ. ನೀವು ಯಾವ ಪಕ್ಷದಲ್ಲಿದ್ದರೂ ಅರವಿಂದ್ ಕೇಜ್ರಿವಾಲ್ ಅವರಿಗೆ ಸಂದೇಶಗಳನ್ನು ಕಳುಹಿಸಿ ಎಂದು ಸುನೀತಾ ಮನವಿ ಮಾಡಿದ್ದಾರೆ.
ಹೊಸದಿಲ್ಲಿ : ದೇಶಾದ್ಯಂತ ಗಣರಾಜ್ಯೋತ್ಸವ ದಿನದ ಸಂಭ್ರಮ ಮನೆ ಮಾಡಿದೆ. 77ನೇ ಗಣರಾಜ್ಯೋತ್ಸವವನ್ನು ಭಾರತಿಯರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಎಲ್ಲಾ ಶಾಲೆಗಳು,…
ಶತಮಾನದ ಶಾಲೆಗೆ ಹಳೆಯ ವಿದ್ಯಾರ್ಥಿಗಳು, ದಾನಿಗಳ ಆಸರೆ ಲೇಖಕ : ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು:…
ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ…
ಹೊಸದಿಲ್ಲಿ : ಹಿರಿಯ ನಟ ಧರ್ಮೇಂದ್ರ, ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ, ಬಂಗಾಳಿ…
ಹೊಸದಿಲ್ಲಿ : ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, ‘ಆಂತರಿಕ ವ್ಯವಸ್ಥೆ’ಯಿಂದಲೇ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್…