ರಾಷ್ಟ್ರೀಯ

ಬಿಜೆಪಿ ಧರ್ಮದ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸಲು ಯತ್ನಿಸುತ್ತಿದೆ: ಸಚಿನ್ ಪೈಲಟ್

ನಗೌರ್  : ಭಾರತೀಯ ಜನತಾ ಪಕ್ಷ(ಬಿಜೆಪಿ)ವು ಧರ್ಮದ ಹೆಸರಿನಲ್ಲಿ ಸಂಘರ್ಷ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ರಾಜಸ್ಥಾನ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಶನಿವಾರ ಆರೋಪಿಸಿದ್ದಾರೆ ಮತ್ತು ಜನ ಎಚ್ಚರಿಕೆಯಿಂದ ಇರುವಂತೆ ಕೇಳಿಕೊಂಡಿದ್ದಾರೆ.

ರಾಜಸ್ಥಾನದ ನಗೌರ್ ಜಿಲ್ಲೆಯ ಲಾಡ್ನೂನ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುಖೇಶ್ ಭಾಕರ್ ಅವರ ಪರವಾಗಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪೈಲಟ್, “ಬಿಜೆಪಿ ಧರ್ಮದ ಹೆಸರಿನಲ್ಲಿ ಜನರ ನಡುವೆ ಒಡಕು ಮತ್ತು ಸಂಘರ್ಷವನ್ನು ಸೃಷ್ಟಿಸಲು ಪ್ರಯತ್ನಿಸತ್ತದೆ. ಆದರೆ ನಾವು ಜಾಗರೂಕರಾಗಿರಬೇಕು ಎಂದರು.

ಪರ್ಬತ್ಸರ್‌ನ ಕಾಂಗ್ರೆಸ್ ಅಭ್ಯರ್ಥಿ ರಾಮ್ನಿವಾಸ್ ಗವಾಡಿಯಾ ಅವರನ್ನು ಬೆಂಬಲಿಸಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಪೈಲಟ್ ಕೂಡ ಭಾಗವಹಿಸಿದ್ದರು.

200 ಸ್ಥಾನಗಳ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

andolanait

Recent Posts

ಓದುಗರ ಪತ್ರ:  ನೀರಿನ ಪೈಪ್ ದುರಸ್ತಿ ಮಾಡಿ

ಮೈಸೂರಿನ ಲಷ್ಕರ್ ಮೊಹಲ್ಲಾದ ವೀರನಗೆರೆ ಮಾರಿಗುಡಿ ಸ್ಥಳದಲ್ಲಿ ಕುಡಿಯುವ ನೀರಿನ ಪೈಪು ಒಡೆದಿದ್ದು, ದುರಸ್ತಿ ಮಾಡಿದರೂ ಕಳಪೆ ಕಾಮಗಾರಿಯಿಂದಾಗಿ ಮತ್ತೆ…

38 seconds ago

ಓದುಗರ ಪತ್ರ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಕ್ರಮ ಅಗತ್ಯ

ಕಳೆದ ೧೫ ವರ್ಷಗಳಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ೧೭ ಲಕ್ಷ ದಷ್ಟು(ಶೇ.೩೦) ಕಡಿಮೆಯಾಗಿರುವುದರ ಬಗ್ಗೆ ವಿಧಾನ…

3 mins ago

ಓದುಗರ ಪತ್ರ:  ಮತದಾರರ ಪಟ್ಟಿ ಮ್ಯಾಪಿಂಗ್; ಅಧಿಕಾರಿಗಳ ನಿರ್ಲಕ್ಷ್ಯ ಸರಿಯಲ್ಲ

ಡಿ.13, 14 ರಂದು ಮೈಸೂರಿನಲ್ಲಿ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವುದಾಗಿ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಮತದಾರರ ಪಟ್ಟಿಯ ಪರಿಶೀಲನೆಗಾಗಿ…

8 mins ago

ಓದುಗರ ಪತ್ರ: ಫ್ರಾಂಚೈಸಿ ವಂಚನೆ; ಜಾಗೃತಿ ಅಗತ್ಯ

ಇತ್ತೀಚೆಗೆ ಫ್ರಾಂಚೈಸಿ ವ್ಯವಹಾರದ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಗಳು ಹೆಚ್ಚುತ್ತಿವೆ. ನಕಲಿ ಕಂಪೆನಿಗಳು ದೊಡ್ಡ ಬ್ರಾಂಡ್‌ಗಳ ಹೆಸರನ್ನು ಬಳಸಿಕೊಂಡು ಜನರನ್ನು ಮೋಸ…

36 mins ago

ಪ್ರೊ.ಆರ್.ಎಂ.ಚಿಂತಾಮಣಿ ಅವರ ವಾರದ ಅಂಕಣ: ವಿಮಾ ವಲಯದಲ್ಲಿ ಹೊಸ ಗಾಳಿ ಬೀಸುತ್ತಿದೆ

ಕೇಂದ್ರ ಸರ್ಕಾರ ಕಳೆದ ವಾರ ಅಧಿಕೃತ ಪ್ರಕಟಣೆಯನ್ನು ಹೊರಡಿಸಿ ಜೀವ ವಿಮೆಯೂ ಸೇರಿ ವಿಮಾ ರಂಗದಲ್ಲಿ ಇನ್ನು ಮುಂದೆ ಶೇ.೧೦೦ರಷ್ಟು…

43 mins ago

ಶೀಘ್ರದಲ್ಲಿಯೇ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಕಿಮೋಥೆರಪಿ ಆರಂಭ

ಮಡಿಕೇರಿಯಲ್ಲಿಯೇ ಕ್ಯಾನ್ಸರ್ ರೋಗಿಗಳಿಗೆ ಪ್ರಾಥಮಿಕ ಹಂತದ ಚಿಕಿತ್ಸೆ; ವೈದ್ಯರ ನೇಮಕಕ್ಕೆ ಸರ್ಕಾರಕ್ಕೆ ಪತ್ರ ಮಡಿಕೇರಿ: ಕೊಡಗಿನಲ್ಲಿ ಡೇಕೇರ್ ಕಿಮೊಥೆರಪಿ ಕೇಂದ್ರ…

1 hour ago