ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತು ಅವಹೇಳನಕಾರಿ ಮತ್ತು ಕೀಳುಮಟ್ಟದ ಹೇಳಿಕೆ ನೀಡಿದ ಆರೋಪದಲ್ಲಿ ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರಿಗೆ ನೋಟಿಸ್ ನೀಡಲು ರಾಷ್ಟ್ರೀಯ ಮಹಿಳಾ ಆಯೋಗ ನಿರ್ಧರಿಸಿದೆ. ದ್ರೌಪದಿ ಮುರ್ಮು ಅವರದು ‘ಅತಿರೇಕದ ಚಮಚಾಗಿರಿ’ ಎಂದು ಹೇಳಿರುವ ಉದಿತ್ ರಾಜ್ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಭಾರತದ ಮೊದಲ ಆದಿವಾಸಿ ರಾಷ್ಟ್ರಪತಿಯಾಗಿರುವ ಮುರ್ಮು ಅವರಿಗೆ ಅವಮಾನ ಮಾಡಿರುವುದಕ್ಕೆ ಉದಿತ್ ರಾಜ್ ಮತ್ತು ಕಾಂಗ್ರೆಸ್ ಕ್ಷಮೆ ಕೋರಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಉದಿತ್ ರಾಜ್ ಅವರು ಈ ಹಿಂದೆ ಬಿಜೆಪಿಯ ಸದಸ್ಯರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್ನಲ್ಲಿ ಇತ್ತೀಚೆಗೆ ಮಾತನಾಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು, “ದೇಶದ ಒಟ್ಟು ಉಪ್ಪಿನಲ್ಲಿ ಶೇ 76ರಷ್ಟನ್ನು ಗುಜರಾತ್ ಉತ್ಪಾದಿಸುತ್ತದೆ; ಹೀಗಾಗಿ ದೇಶದ ಎಲ್ಲ ಜನತೆ ಗುಜರಾತ್ನ ಉಪ್ಪು ತಿನ್ನುತ್ತಾರೆ ಎಂದು ಹೇಳಬಹುದು” ಎಂದಿದ್ದರು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.