ನವದೆಹಲಿ (ಪಿಟಿಐ) : ಛತ್ತೀಸ್‍ಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಅಕ್ರಮ ಬೆಟ್ಟಿಂಗ್ ದಂಧೆಯಿಂದ ಬಂದಿರುವ 500 ಕೋಟಿ ರೂಪಾಯಿ ಹವಾಲಾ ಹಣವನ್ನು ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ನಮ್ಮ ಚುನಾವಣಾ ಇತಿಹಾಸದಲ್ಲಿ ಹಿಂದೆಂದೂ ಜನರು ಇಂತಹ ಅಕ್ರಮಗಳನ್ನು ಕಂಡಿಲ್ಲ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದ್ದಾರೆ. ಬಘೇ ಲ್ ಅವರು ಜನರ ಬೆಂಬಲದಿಂದ ಚುನಾವಣೆಯನ್ನು ಎದುರಿಸುತ್ತಿದ್ದಾರೆ ಹೊರತು ಹವಾಲಾ ಮತ್ತು ಬೆಟ್ಟಿಂಗ್ ಆಪರೇಟರ್‍ಗಳ ಬೆಂಬಲದಿಂದಲ್ಲ ಎಂದು ಅವರು ಆರೋಪಿಸಿದರು.
ನವೆಂಬರ್ 7 ಮತ್ತು 17 ರಂದು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತನ್ನನ್ನು ಗುರಿಯಾಗಿಸಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂಬ ಬಘೇಲೆ ಅವರ ಆರೋಪಕ್ಕೆ ತಿರುಗೇಟು ನೀಡಿದ ಇರಾನಿ ಅವರು ಜಾರಿ ನಿರ್ದೇಶನಾಲಯದ ತನಿಖೆಯು ಛತ್ತೀಸ್‍ಗಢ ಮತ್ತು ಆಂಧ್ರಪ್ರದೇಶದ ಪೊಲೀಸರ ತನಿಖೆಯ ವಿವರಗಳನ್ನು ಆಧರಿಸಿದೆ ಎಂದಿದ್ದಾರೆ.
ತನಿಖೆಯನ್ನು ಉಲ್ಲೇಖಿಸಿ, ಅಕ್ರಮ ಬೆಟ್ಟಿಂಗ್ ಆಪರೇಟರ್‍ಗಳಿಂದ 64 ಕೋಟಿ ರೂ.ಗೂ ಹೆಚ್ಚು ರಕ್ಷಣೆ ಹಣವನ್ನು ಅಧಿಕಾರಿಗಳಿಗೆ ನೀಡಲಾಗಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್‍ನ ಪ್ರಚಾರಕ್ಕೆ ಹಣಕ್ಕಾಗಿ ಬೆಟ್ಟಿಂಗ್ ಹಣದ ಬಳಕೆ ಮತ್ತು ಬಘೇಲ್‍ಗೆ ನೀಡಿದ ಕಿಕ್‍ಬ್ಯಾಕ್‍ಗಳ ಬಗ್ಗೆ ಆರೋಪಿಗಳ ಧ್ವನಿ ಸಂದೇಶಗಳು ಮತ್ತು ಹೇಳಿಕೆಗಳಿವೆ ಎಂದು ಅವರು ಹೇಳಿದ್ದಾರೆ.
ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರು ಛತ್ತೀಸ್‍ಗಢದ ಮುಖ್ಯಮಂತ್ರಿಗೆ ಇದುವರೆಗೆ ಸುಮಾರು 508 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ ಎಂಬ ಫೋರೆನ್ಸಿಕ್ ವಿಶ್ಲೇಷಣೆ ಮತ್ತು ಕ್ಯಾಶ್ ಕೊರಿಯರ್ ನೀಡಿದ ಹೇಳಿಕೆಯು ಆಘಾತಕಾರಿ ಆರೋಪಗಳಿಗೆ ಕಾರಣವಾಗಿದೆ ಎಂದು ಇಡಿ ಶುಕ್ರವಾರ ಹೇಳಿಕೊಂಡಿದೆ.
ತಿ.ನರಸೀಪುರ : ಮುಡುಕುತೊರೆಯು ಪ್ರಸಿದ್ಧ ಧಾರ್ಮಿಕ ಸ್ಥಳವಾಗಿದ್ದು, ಪ್ರವಾಸೋದ್ಯಮ ಕೇಂದ್ರವೂ ಆಗಿದೆ. ಈ ಹಿನ್ನೆಲೆಯಲ್ಲಿ ಈ ಭಾಗವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು…
ಮೈಸೂರು : ರಂಗಾಯಣದ ಪ್ರತಿಷ್ಠಿತ ಉತ್ಸವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಜನವರಿ 11 ರಿಂದ 18 ರವರೆಗೆ ನಡೆಯಲಿದೆ ಎಂದು…
ಬೆಂಗಳೂರು : ಹೊಸ ವರ್ಷಾಚರಣೆ ವೇಳೆ ಬೆಂಗಳೂರು ನಗರದಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ…
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಸ್ಥಾನದಿಂದಲೇ ಅನರ್ಹಗೊಂಡು ನ್ಯಾಯಾಲಯದ ತಡೆಯಾಜ್ಞೆಯಿಂದ ಬಚಾವ್ ಆಗಿದ್ದ ಮಾಜಿ ಸಚಿವ ಹಾಗೂ ಶಾಸಕ…
ನವದೆಹಲಿ: ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಉಚ್ಚಾಟಿತ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ…
ಬೆಂಗಳೂರು: ಮಹಾರಾಷ್ಟ್ರ ಪೊಲೀಸರಿಂದ ಬೆಂಗಳೂರಿನಲ್ಲಿ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್ ಸೀಜ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ…