ಮೈಸೂರು: ಉತ್ತರ ಪ್ರದೇಶದಲ್ಲಿ ಸಜ್ಜಾಗಿರುವ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಮುಂದಿನ ವರ್ಷ ಉದ್ಘಾಟನೆ ಆಗಲಿರುವ ರಾಮ ಮಂದಿರದಲ್ಲಿ ಪ್ರತಿಷ್ಟಾಪನೆಗೊಳಿಸಲು ಬಾಲ ಶ್ರೀರಾಮನ ಮೂರ್ತಿಯನ್ನು ಕೆತ್ತನೆ ಮಾಡಿ ಕಳುಹಿಸಿರುವುದು ಮೈಸೂರಿನ ಕೃಷ್ಣ ಶಿಲೆ ಎಂಬ ವೀಶೇಷ ಸಂಗತಿಯೊಂದು ಬೆಳಕಿಗೆ ಬಂದಿದೆ.
ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ಜಮೀನಿನಲ್ಲಿ 6 ತಿಂಗಳ ಹಿಂದೆ ಸಿಕ್ಕ ಬೃಹತ್ ಕೃಷ್ಣಶಿಲೆಯಿಂದಲೇ ಬಾಲ ರಾಮನ ಮೂರ್ತಿಯನ್ನು ನಿರ್ಮಿಸಲಾಗಿದೆ. ಅಯೋಧ್ಯೆಯ ಟ್ರಸ್ಟಿಗಳು ಈ ಸ್ಥಳಕ್ಕೆ ಬಂದು ಕಲ್ಲು ಪರೀಕ್ಷೆ ಮಾಡಿ ಕಲ್ಲನ್ನು ತೆಗೆದುಕೊಂಡು ಹೋಗಿದ್ದಾರೆ. ಇಲ್ಲಿನ ಮಣ್ಣನ್ನು ಕೂಡ ಕುಂಭದಲ್ಲಿ ತೆಗೆದು ಕೊಂಡು ಹೋಗಿ ರಾಮ ಮಂದಿರದ ಗರ್ಭಗುಡಿಯ ಒಳಗಿಟ್ಟಿದ್ದಾರೆ ಎಂದು ಕೃಷ್ಣಶಿಲೆ ಅರ್ಪಿಸಿದ ಗುತ್ತಿಗೆದಾರ ಶ್ರೀನಿವಾಸ್ ತಿಳಿಸಿದ್ದಾರೆ.
ಈ ಸಂಬಂಧ ಖಾಸಗಿ ವಾಹಿನಿ ಜೊತೆಗೆ ಮಾತನಾಡಿರುವ ಅವರು, ಹಾರೋಹಳ್ಳಿಯಲ್ಲಿ ಜಮೀನು ಹದಗೊಳಿಸುತ್ತಿದ್ದ ವೇಳೆ ಆಕಾಶ ನೀಲಿ ಬಣ್ಣದ ಬೃಹತ್ ಬಂಡೆಯೊಂದು ಕಂಡಿತು. ರಾಮಮಂದಿರ ಗುರುಗಳೊಂದಿಗೆ ಸಂಪರ್ಕದಲ್ಲಿದ್ದ ವಿಶ್ವಕರ್ಮ ಸಮುದಾಯದ ಸುರೇಂದ್ರ ಎಂಬವರು ಶ್ರೀರಾಮನ ಮೂರ್ತಿಗೆ ಪರಿಶುದ್ಧ ಶಿಲೆ ಸಿಕ್ಕರೆ ಕೊಡುವಂತೆ ತಿಳಿಸಿದ್ದರು. ಪತ್ತೆಯಾದ ಕಲ್ಲನ್ನು ಮೂರು ಭಾಗ ಮಾಡಿ ಮತ್ತೊಂದು ಸ್ಥಳದಲ್ಲಿ ಇರಿಸಲಾಯಿತು. ನಂತರ ಸುರೇಂದ್ರ ವಿಶ್ವಕರ್ಮ ಎಂಬವರು ಅದನ್ನು ಇಷ್ಟಪಟ್ಟು, ವೈಜ್ಞಾನಿಕ ಪರೀಕ್ಷೆ ಮಾಡಿಸಿದ ಬಳಿಕ ಮೂರ್ತಿ ನಿರ್ಮಾಣಕ್ಕೆ ಶಿಲೆಯನ್ನು ಅಯೋಧ್ಯೆಗೆ ಕಳುಹಿಸಿಕೊಟ್ಟರು.
ಶ್ರೀರಾಮ-ಸೀತಾ ಮಾತೆ ಬಳಿಕ, ಲಕ್ಷ್ಮಣ, ಭರತ, ಶತ್ರುಜ್ಞ ವಿಗ್ರಹಗಳ ಕೆತ್ತನೆಗಳಿಗೂ ಕೃಷ್ಣಶಿಲೆಯನ್ನು ಕಳುಹಿಸಿಕೊಡಲಾಯಿತು. ಇದೆಲ್ಲ ನಮ್ಮ ಪೂರ್ವಜರ ಪುಣ್ಯವೆಂದೇ ನಾವು ಭಾವಿಸುತ್ತೇವೆ ಎಂದು ಶ್ರೀನಿವಾಸ್ ನೆನೆದರು.
ಜನವರಿ 22ರಂದು ಶ್ರೀರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಶುಕ್ರವಾರ (ಇಂದು) ಬಾಲ ಶ್ರೀರಾಮ ಮೂರ್ತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಒಟ್ಟು ಆಯ್ಕೆಗೆ ಮೂರು ಮೂರ್ತಿಗಳನ್ನು ಕೆತ್ತಲಾಗಿದ್ದು, ರಾಮ ಮಂದಿರ ಟ್ರಸ್ಟ್ ಸಭೆಯ ಬಳಿಕ ಮೂರ್ತಿಯನ್ನ ಆಯ್ಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಇಬ್ಬರು ಕರ್ನಾಟಕ ಶಿಲ್ಪಿಗಳು, ಓರ್ವ ರಾಜಸ್ಥಾನ ಮೂಲದ ಶಿಲ್ಪಿಯಿಂದ ನಿರ್ಮಾಣಗೊಂಡಿರುವ ಕರ್ನಾಟಕ ಮೂಲದ ಬಾಲರಾಮನ ಮೂರ್ತಿ ಸಹ ಇದೆ. ಈ ಮೂರ್ತಿ ಪ್ರತಿಷ್ಟಾಪನೆಗೆ ಆಯ್ಕೆಯಾಗುವ ಮೂಲಕ ಅಯೋಧ್ಯೆ ರಾಮ ಮಂದಿರದಲ್ಲಿ ಕರ್ನಾಟಕದ ನಂಟು ಉಳಿಯುತ್ತಾ? ಎಂಬುದನ್ನು ಕಾದುನೋಡಬೇಕಿದೆ.
ಬೆಂಗಳೂರು: ಅರಬ್ಬಿ ಸಮುದ್ರದ ಮೇಲೆ ತೇವಾಂಶ ಭರಿತ ಮೋಡಗಳು ಹಾದು ಹೋಗಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಸೋಮವಾರ ಮಳೆಯಾಗಿದೆ. ರಾಜಧಾನಿ…
ದಾವಣಗೆರೆ: 2028ಕ್ಕೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಜಮೀರ್ ಅಹಮ್ಮದ್ ಖಾನ್ ವ್ಯಂಗ್ಯವಾಡಿದ್ದಾರೆ. ಈ ಕುರಿತು…
ಗದಗ: ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವ ವೇಳೆ ಚಿನ್ನದ ನಿಧಿ ಪತ್ತೆಹಚ್ಚಿ ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ…
ಉಡುಪಿ: ಅರಬ್ಬಿ ಸಮುದ್ರದಲ್ಲಿ ಟೂರಿಸ್ಟ್ ಬೋಟ್ ಮುಳುಗಿ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು…
ಬೆಂಗಳೂರು: ಬ್ಯಾಂಕಿಂಗ್ ಕ್ಷೇತ್ರದ ನೌಕರರಿಗೆ ವಾರಕ್ಕೆ ಐದು ದಿನ ಮಾತ್ರ ಕೆಲಸದ ದಿನವಾಗಿಸಬೇಕೆಂಬುದು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ…
ಉಡುಪಿ: ಇಲ್ಲಿನ ಮಲ್ಪೆ ಕೋಡಿಬೆಂಗ್ರೆ ಬೀಷಚ್ ಸಮೀಪ ಪ್ರವಾಸಿ ದೋಣಿ ಮುಗುಚಿದ ಪರಿಣಾಮ ತೀವ್ರ ಅಸ್ವಸ್ಥಗೊಂಡಿದ್ದ ಮೈಸೂರಿನ ಇಬ್ಬರು ಮೃತಪಟ್ಟಿರುವ…