ಕಳೆದ ಎರಡು ಮೂರು ದಿನಗಳಿಂದ ಕೇರಳ ರಾಜ್ಯದಲ್ಲಿ ಕೊವಿಡ್ ಮತ್ತೆ ಉಲ್ಬಣಗೊಳ್ಳುತ್ತಿರುವ ಸುದ್ದಿ ಕೇರಳ ಮಾತ್ರವಲ್ಲದೇ ಇಡೀ ದೇಶ ಜನತೆಯಲ್ಲಿ ಚಿಂತೆಯನ್ನುಂಟುಮಾಡಿದೆ. ಕೇರಳದಲ್ಲಿ ಈಗಾಗಲೇ ಸಕ್ರಿಯ ಕೊವಿಡ್ ಸೋಂಕಿತರ ಸಂಖ್ಯೆ 1000 ಗಡಿ ದಾಟಿದ್ದು, ಇದರ ಜತೆಗೆ ಕೊವಿಡ್‌ನ ಮತ್ತೊಂದು ತಳಿ ಜೆಎನ್ 1ನ ಒಂದು ಕೇಸ್ ಸಹ ಕೇರಳದಲ್ಲಿ ಪತ್ತೆಯಾಗಿದೆ. ದಿನವೊಂದಕ್ಕೆ ಕೇರಳದಲ್ಲಿ 300ಕ್ಕೂ ಹೆಚ್ಚು ಹೊಸ ಕೊವಿಡ್ ಕೇಸ್‌ಗಳು ವರದಿಯಾಗಲು ಆರಂಭಿಸಿದ್ದು, ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.
ಕೇರಳದಲ್ಲಿ ಈ ಕೊವಿಡ್ ಹಾಗೂ ಜೆಎನ್ 1 ಜತೆಗೆ ಈ ಹಿಂದೆ ಮಹಾಮಾರಿಯಾಗಿ ಕಾಡಿದ್ದ ನಿಫಾ ವೈರಸ್ ಸಹ ಮರುಜೀವ ಪಡೆದುಕೊಂಡಿದೆ ಇಂದಿಗೂ ಕೆಲ ಸಕ್ರಿಯ ಪ್ರಕರಣಗಳಿವೆ. ಹೀಗೆ ರಾಜ್ಯದಲ್ಲಿ ಒಟ್ಟು ಮೂರು ಮೂರು ವೈರಸ್‌ಗಳು ಕಂಟಕವಾಗಿ ಪರಿಣಮಿಸಿವೆ.
ಇದು ಕೇರಳದ ಕಥೆಯಾದರೆ ಕೇರಳದ ಜತೆ ಗಡಿಯನ್ನು ಹಂಚಿಕೊಂಡಿರುವ ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಈಗಾಗಲೇ ಈ ಕುರಿತು ಆತಂಕ ಮನೆ ಮಾಡಿದೆ. ಅಲ್ಲದೇ ಈ ಜಿಲ್ಲೆಗಳಲ್ಲಿ ಬೆಕ್ಕುಗಳ ರೋಗ ಹಾಗೂ ಕಾಲುಬಾಯಿ ರೋಗಗಳು ಈಗಾಗಲೇ ಜನರಿಗೆ ತಲೆನೋವಾಗಿದೆ. ಕರಾವಳಿ ಭಾಗದ ದನ ಕರುಗಳಲ್ಲಿ ಈಗಲೂ ಕಾಲುಬಾಯಿ ರೋಗಗಳು ಪತ್ತೆಯಾಗುತ್ತಿದ್ದು, ಇತ್ತೀಚಿನ ಕೆಲ ದಿನಗಳಿಂದ ಬೆಕ್ಕು ರೋಗವೂ ಹೆಚ್ಚಾಗಿದೆ. ಸಂಪಾಜೆ ಗ್ರಾಮದ ಸುತ್ತಮುತ್ತ ಬೆಕ್ಕಿನ ಜ್ವರಕ್ಕೆ ಹಲವಾರು ಬೆಕ್ಕುಗಳು ಬಲಿಯಾಗಿವೆ. ಒಟ್ಟಿನಲ್ಲಿ ಕೊರೊನಾ ಮಹಾಮಾರಿ ಜತೆಗೆ ಪ್ರಾಣಿಗಳ ಸಾಂಕ್ರಾಮಿಕ ರೋಗಗಳೂ ಸಹ ಉಲ್ಬಣಗೊಳ್ಳುತ್ತಿರುವ ಕಾರಣ ಜನರು ಈ ಕುರಿತು ತುಸು ಹೆಚ್ಚು ಎಚ್ಚರಿಕೆ ವಹಿಸಬೇಕಿದೆ.
ನವದೆಹಲಿ: ಮದರ್ ಆಫ್ ಆಲ್ ಡೀಲ್ಸ್ ಎಂದೇ ಕರೆಯಲ್ಪಡುವ ಭಾರತ-ಯುರೋಪ್ ಒಕ್ಕೂಟವು ಮುಕಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು ಅಧಿಕೃತವಾಗಿ ಸಹಿ…
ಬೆಂಗಳೂರು: ಶಿಡ್ಲಘಟ್ಟದಲ್ಲಿ ಪೌರಾಯುಕ್ತಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡನನ್ನು ಸರ್ಕಾರ ರಕ್ಷಣೆ ಮಾಡಲ್ಲ. ಕಾನೂನು ಪ್ರಕಾರ ಶಿಕ್ಷೆ…
ಪಿರಿಯಾಪಟ್ಟಣ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪ-ಪಿರಿಯಾಪಟ್ಟಣ ರಸ್ತೆಯಲ್ಲಿ ನಡೆದಿದೆ. ತಾಲ್ಲೂಕಿನ…
ಮೈಸೂರು: ಮೈಸೂರಿನ ಸಮತಾ ಅಧ್ಯಯನ ಕೇಂದ್ರ(ರಿ)ವು ಸಂಸ್ಥಾಪಕ ಅಧ್ಯಕ್ಷೆ, ಖ್ಯಾತ ಸ್ತ್ರೀವಾದಿ ವಿಮರ್ಶಕಿ ಹಾಗೂ ಲೇಖಕಿ ಡಾ.ವಿಜಯಾ ದಬ್ಬೆ ಅವರ ಹೆಸರಿನಲ್ಲಿ 2022…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ದೊರೆ ಎಂಬುವವರ ವಾಸದ ಮನೆಗೆ ನುಗ್ಗಿದ ಕಡವೆಯನ್ನು…
ಮಂಡ್ಯ: ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸಮುದಾಯಗಳು ಮುಖ್ಯ ವಾಹಿನಿಗೆ ಬರಲು ಶಿಕ್ಷಣದಿಂದ ಮಾತ್ರ ಸಾಧ್ಯ…