ನವದೆಹಲಿ : 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಶುಭ ಗಳಿಗೆಯ ಪ್ರಯುಕ್ತ ದೇಶದಲ್ಲಿರುವ ಒಟ್ಟು 150 ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಲಾಗುವುದು ಎಂದು ಭಾರತೀಯ ಪುರಾತತ್ವ ಇಲಾಖೆ ಮಾಹಿತಿ ನೀಡಿದೆ.
150 ಸಂರಕ್ಷಿತ ಸ್ಮಾರಕಗಳು ತ್ರಿವರ್ಣಗಳಿಂದ ಕಂಗೊಳಿಸುವಂತೆ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ. ಇದರ ಜೊತೆಗೆ ದೇಶದಾದ್ಯಂತ 750 ಸ್ಮಾರಕಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಕೂಡ ಆರಂಭಿಸಲಾಗಿದೆ.
ಮನೆಗಳಲ್ಲೂ ಧ್ವಜಾರೋಹಣ
75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಜನತೆಗೆ ಕರೆ ನೀಡಿದ್ದಾರೆ.
‘ಹರ್ ಘರ್ ತಿರಂಗ’ ಆಂದೋಲನವನ್ನು ಬಲಪಡಿಸಲು ಆಗಸ್ಟ್ ೧೩-೧೫ರ ನಡುವೆ ರಾಷ್ಟ್ರಧ್ವಜವನ್ನು ಮನೆಯಲ್ಲಿ ಆರೋಹಣ ಅಥವಾ ಪ್ರದರ್ಶನ ಮಾಡಬೇಕು ಎಂದಿದ್ದಾರೆ.