ಮುಂಬೈ: ಭಾರತೀಯ ನೌಕಾಪಡೆಯ ಅತ್ಯಾಧುನಿಕ ಲಘು ಹೆಲಿಕಾಪ್ಟರ್(ಎಎಲ್ಎಚ್) ‘ಧ್ರುವ್’ ದೈನಂದಿನ ಕಣ್ಗಾವಲು ಕಾರ್ಯಾಚರಣೆ ವೇಳೆ ಮುಂಬೈ ಕರಾವಳಿಯಲ್ಲಿ ನೀರಿನ ಮೇಲೆ ಇಳಿದಿದೆ. ಕೂಡಲೇ ಕಾರ್ಯಪ್ರವೃತ್ತರಾದ ನೌಕಾ ಗಸ್ತು ಪಡೆ ಸಿಬ್ಬಂದಿ, ಶೋಧ ನಡೆಸಿ ಹೆಲಿಕಾಪ್ಟರ್ನಲ್ಲಿದ್ದ ಮೂವರನ್ನೂ ರಕ್ಷಣೆ ಮಾಡಿದೆ.
‘ದೈನಂದಿನ ಕಣ್ಗಾವಲು ಕಾರ್ಯಾಚರಣೆಯಲ್ಲಿ ನಿರತವಾಗಿದ್ದ ಎಎಲ್ಎಚ್ ಮುಂಬೈ ಕರಾವಳಿಯ ಸ್ವಲ್ಪ ದೂರದಲ್ಲಿ ತುರ್ತು ಲ್ಯಾಂಡ್ ಆಗಿದೆ’ ಎಂದು ಪಶ್ಚಿಮ ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಲಿಕಾಪ್ಟರ್ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಈ ತುರ್ತು ಲ್ಯಾಂಡಿಂಗ್ ನಡೆದಿರಬಹುದು ಎಂದು ತಿಳಿದುಬಂದಿದ್ದು, ತನಿಖೆಗೆ ಆದೇಶಿಸಲಾಗಿದೆ.