ನವದೆಹಲಿ : ಚಂದ್ರಯಾನ 3 ಬಳಿಕ ಇಸ್ರೋದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆ ಆದಿತ್ಯ ಎಲ್-1 ಎಲ್ಲರ ಭರವಸೆ ನೆಟ್ಟಿದ್ದು, ನಿರೀಕ್ಷೆಯಂತೆಯೇ ಆದಿತ್ಯ ಎಲ್-1 ಭೂಮಿಯ 5 ಕಕ್ಷೆಗಳನ್ನು ಬದಲಿಸಿ ಇದೀಗ ಭೂಮಿಯಿಂದ ಹೊರಗೆ ಬಂದಿದೆ, ಭೂಮಿಯ ಕಕ್ಷೆಯಿಂದ ಹೊರಬಂದಿರುವ ಆದಿತ್ಯ ಎಲ್-1 ಭೂಮಿಯ ಸುತ್ತಲಿನ ದತ್ತಾಂಶಗಳ ಸಂಗ್ರಹ ಕಾರ್ಯವನ್ನು ಆರಂಭಿಸಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಈ ಬಗ್ಗೆ ಇಸ್ರೋ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಸತತ 5ನೇ ಬಾರಿಗೆ ಪಥದಲ್ಲಿರುವ ನೌಕೆಯನ್ನು ಮತ್ತೊಂದು ಆಕಾಶಕಾಯ ಅಥವಾ ಬಾಹ್ಯಾಕಾಶದಲ್ಲಿರುವ ಸ್ಥಳಕ್ಕೆ ಯಶಸ್ವಿಯಾಗಿ ವರ್ಗಾಯಿಸಿದೆ. ಇದನ್ನು ಸುಮಾರು 110 ದಿನಗಳ ನಂತರ ವಿವಿಧ ಪ್ರಕ್ರಿಯೆಗಳ ಮೂಲಕ ಎಲ್1 ಸುತ್ತ ಕಕ್ಷೆಗೆ ಸೇರಿಸಲಾಗುತ್ತದೆ ಎಂದು ಹೇಳಿದೆ.