ನವೆಹಲಿ: ಪಂಜಾಬ್ ಫರೀದ್ಯೋಟ್ ನ ಕೋಟ್ಯಪುರದ ಕೇಂದ್ರವೊಂದರಲ್ಲಿ ಜನವರಿ 7ರಂದು ನಡೆದ ಮಲ್ಟಿ-ಪರ್ಪಸ್ ಆರೋಗ್ಯ ಕಾರ್ಯಕರ್ತರ ನೇಮಕಾತಿ ಪರೀಕ್ಷೆಗಾಗಿ ತನ್ನ ಪ್ರಿಯತಮೆಯ ವೇಷ ಧರಿಸಿ ಆಕೆಯ ಪರ ಪರೀಕ್ಷೆ ಬರೆಯಲು ಆಗಮಿಸಿ ಯುವಕನೊಬ್ಬ ಸಿಕ್ಕಿಬಿದ್ದಿರುವ ಘಟನೆ ನಡದಿದೆ.
ಬಾಬಾ ಫರೀದ್ಯೋಟ್ ಯುನಿವರ್ಸಿಟಿ ಆಫ್ ಹೆಲ್ತ್ ಸಾಯನ್ಸಸ್ ನಡೆಸಿದ ಪರೀಕ್ಷೆ ಕೋಟ್ಕಪುರದ ಡಿಎವಿ ಪಬ್ಲಿಕ್ ಸ್ಕೂಲಿನಲ್ಲಿ ಪಡೆದಿತ್ತು. ತನ್ನ ಪ್ರಿಯತಮೆ ಪರಂಜೀತ್ ಕೌರ್‌ಗೆ ಸಹಾಯ ಮಾಡಲೆಂದು ಆಕೆಯ ವೇಷ ಧರಿಸಿ ಫಝಿಲ್ಕಾ ಎಂಬಲ್ಲಿನ ಅಂಗ್ರೇಜ್ ಸಿಂಗ್ ಪರೀಕ್ಷಾ ಕೇಂದ್ರಕ್ಕೆ ಮಹಿಳೆಯರು ಉಡುಪು, ಕೆಂಪು ಬಳೆ, ಬಿಂದಿ, ಲಿಪ್ಪಿಕ್ ಧರಿಸಿ ಬಂದಿದ್ದ. ತಾನು ಪರಂಜೀತ್ ಕೌರ್ ಎಂದು ತೋರಿಸಿಕೊಳ್ಳಲು ನಕಲಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಅನ್ನು ತಯಾರಿಸಿದ್ದ. ಇನ್ನೇನು ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಸಿಕ್ಕಿತೆಂಬಷ್ಟರಲ್ಲಿ ಬಯೋಮೆಟ್ರಿಕ್ ಸಾಧನದಲ್ಲಿ ಬೆರಳಚ್ಚು ಮ್ಯಾಚ್ ಆಗದೇ ಆತ ಸಿಕ್ಕಿ ಬಿದ್ದಿದ್ದಾನೆ.
ಘಟನೆಯ ನಂತರ ಪರಂಜೀತ್ ಕೌರ್ ಅರ್ಜಿಯನ್ನು ತಿರಸ್ಕರಿಸಲಾಯಿತು ಹಾಗೂ ಅಂಗ್ರೇಜ್ ಸಿಂಗ್ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಆಡಳಿತ ಮುಂದಾಗಿದೆ.
ಪರಿಸರಕ್ಕೆ ಪೂರಕವಾದ ವಸ್ತುಗಳನ್ನು ನೀಡಲು ಸಲಹೆ; ಸ್ಮರಣಿಕೆ, ಟ್ರೋಫಿ ಬದಲು ಸಸಿ, ಪುಸ್ತಕ ವಿತರಿಸಲು ಸುತ್ತೋಲೆ ಮೈಸೂರು: ರಾಜ್ಯ ಸರ್ಕಾರ…
ಪುನೀತ್ ಕೊಡವ ಹಾಕಿ ಅಕಾಡೆಮಿ ಆಶ್ರಯದಲ್ಲಿ ಆಯೋಜನೆ; ವಿಜೇತ ತಂಡಕ್ಕೆ ೨ ಲಕ್ಷ ರೂ. ಬಹುಮಾನ ಮಡಿಕೇರಿ: ಕೊಡವ ಹಾಕಿ…
ಪ್ರತಿದಿನ ರಾತ್ರಿ ಅರಮನೆಗೆ ದೀಪಾಲಂಕಾರ ಹೂವಿನಿಂದ ಶೃಂಗೇರಿ ದೇವಸ್ಥಾನದ ಮಾದರಿ ನಿರ್ಮಾಣ ಪುಷ್ಪ ಪ್ರಿಯರ ಕಣ್ಮನ ಸೆಳೆಯಲಿರುವ ವಿವಿಧ ಮಾದರಿಗಳು…
ಎಸ್.ಎಸ್.ಭಟ್ ಹಾಗಂತ ಇಲ್ಲಿ ಫಲಕ ಹಾಕಿಲ್ಲ, ವಾಹನ ನಿಲ್ಲುವುದು ತಪ್ಪುತ್ತಿಲ್ಲ; ಇದು ನಂಜನಗೂಡಿನ ತಾಯಿ-ಮಕ್ಕಳ ಆಸ್ಪತ್ರೆ ಆವರಣದ ಸ್ಥಿತಿ ನಂಜನಗೂಡು:…
ಮೈಸೂರು: ಕೇಂದ್ರದ ಯುಪಿಎ ಸರ್ಕಾರ ೨೦೦೫ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆಯಡಿ ಗ್ರಾಮೀಣ ಕುಟುಂಬಗಳಲ್ಲಿ ಜೀವನೋಪಾಯಕ್ಕೆ ಭದ್ರತೆ…