ಉತ್ತರ ಪ್ರದೇಶ: ಲಖನೌ-ಬಹ್ರ್ತ್ಯಚ್ ಹೆದ್ದಾರಿ ಬಳಿ ಲಖನೌ ಡಿಪೋ ಬಸ್ಗೆ ವೇಗವಾಗಿ ಬಂದ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾಗಿ, ೧೫ ಮಂದಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ಮುಂಜಾನೆ ೪.೩೦ರ ಸುಮಾರಿಗೆ ಈ ಘಟನೆ ನಡೆದಿದ್ದು, ೧೫ ಮಂದಿ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಬಸ್ ಲಖನೌದಿಂದ ರುಪೈದೀಹಾಗೆ ಹೋಗುತ್ತಿದ್ದು, ಟ್ರಕ್ ಬಹ್ರ್ತ್ಯಚ್ನಿಂದ ಲಖನೌಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಘಟನೆ ಬಳಿಕ ಟ್ರಕ್ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.