ಭಾರತದ 100 ಶ್ರೀಮಂತರ ಫೋರ್ಬ್ಸ್ ಪಟ್ಟಿಯಲ್ಲಿ 6 ವನಿತೆಯರು

ಹೊಸದಿಲ್ಲಿ: ಫೋರ್ಬ್ಸ್ ನಿಯತಕಾಲಿಕ ಪ್ರಕಟಿಸಿರುವ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಆರು ಮಹಿಳಾ ಉದ್ಯಮಿಗಳೂ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜೂಮ್ದಾರ್ ಶಾ ಅವರೂ ಪಟ್ಟಿಯಲ್ಲಿದ್ದಾರೆ.

ವನಿತಾ ಉದ್ಯಮಿಗಳ ಪಟ್ಟಿಯಲ್ಲಿ ಓಪಿ ಜಿಂದಾಲ್ ಗ್ರೂಪ್‌ನ ಸಾವಿತ್ರಿ ಜಿಂದಾಲ್ ಅಂಗ್ರ ಸ್ಥಾನದಲ್ಲಿದ್ದಾರೆ. ಇವರ ಒಟ್ಟು ಸಂಪತ್ತು 18 ಶತಕೋಟಿ ಡಾಲರ್‌ಗಳು (13.46 ಲಕ್ಷ ಕೋಟಿ ರೂ.ಗಳು). ಕಳೆದ ವರ್ಷ ಇವರ ಆಸ್ತಿ 13 ಶತಕೋಟಿ ಡಾಲರ್‌ಗಳಷ್ಟಿತ್ತು (9.72 ಲಕ್ಷ ಕೋಟಿ ರೂ.ಗಳು). ಕೇವಲ ಒಂದು ವರ್ಷದಲ್ಲೇ ಇವರ ಸಂಪತ್ತು ಏರಿಕೆಯಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ. 71 ವರ್ಷದ ಸಾವಿತ್ರಿ ಜಿಂದಾಲ್ ಫೋರ್ಬ್ಸ್ ಪಟ್ಟಿಯಲ್ಲಿ ಏಳನೇ ಶ್ರೇಯಾಂಕದಲ್ಲಿದ್ದಾರೆ.

ದೇಶದ ಎರಡನೇ ಅತ್ಯಂತ ಶ್ರೀಮಂತ ಉದ್ಯಮಿ ಹವೇಲ್ಸ್ ಇಂಡಿಯಾದ ವಿನೋದಾ ರಾಯ್ ಗುಪ್ತಾ (76 ವರ್ಷ). ಪಟ್ಟಿಯಲ್ಲಿ 24ನೇ ಕ್ರಮಾಂಕದಲ್ಲಿರುವ ಇವರ ಒಟ್ಟು ಸಂಪತ್ತು 7.6 ಶತಕೋಟಿ ಡಾಲರ್ (5.68 ಲಕ್ಷ ಕೋಟಿ ರೂ.ಗಳು). ಕೇವಲ ಒಂದೇ ವರ್ಷದಲ್ಲಿ ಇವರ ಆಸ್ತಿ ಎರಡು ಪಟ್ಟಿ ಹೆಚ್ಚಾಗಿದೆ.

ಮುಂಬೈನ ಬಯೋಟೆಕ್ನಾಲಜಿ ಸಂಸ್ಥೆ ಯುಎಸ್‌ವಿ ಪ್ರೈವೇಟ್ ಲಿಮಿಟೆಸ್‌ನ 43 ವರ್ಷದ ಲೀನಾ ತಿವಾರಿ 43 ನೇ ರ‍್ಯಾಂಕ್‌ನಲ್ಲಿದ್ದು, ಇವರ ಒಟ್ಟು ಸಂಪತ್ತು 4.4 ಶತಕೋಟಿ ಡಾಲರ್ (3.28 ಲಕ್ಷ ಕೋಟಿ ರೂ).

ಬೆಂಗಳೂರಿನ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜೂಮ್ದಾರ್ ಶಾ(68) ಅವರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅವರ ಆಸ್ತಿಯ ನಿವ್ವಳ ಮೌಲ್ಯ 3.9 ಲಕ್ಷ ಶತಕೋಟಿ ಡಾಲರ್ (2.91 ಲಕ್ಷ ಕೋಟಿ ರೂ.)

ಟ್ರ್ಯಾಕ್ಟರ್ಸ್‌ ಅಂಡ್ ಫಾರ್ಮ್ ಎಕ್ವಿಪ್‌ಮೆಂಟ್(ಟಾಫೆ) ಮಾಲೀಕರಾದ ಮಲ್ಲಿಕಾ ಶ್ರೀನಿವಾಸನ್ 2.89 ಶತಕೋಟಿ ಡಾಲರ್ (2.16 ಲಕ್ಷ ಕೋಟಿ ರೂ.ಗಳು) ಒಟ್ಟು ಸಂಪತ್ತಿನೊಂದಿಗೆ 73ನೇ ಸ್ಥಾನದಲ್ಲಿದ್ಧಾರೆ.

ಜೈಜುಸ್ ಸಹ ಸ್ಥಾಪಕಿ ದಿವ್ಯ ಗೋಕುಲ್‌ನಾಥ್ (35 ವರ್ಷ) ಭಾರತದ ಸಿರಿವಂತರ ಪಟ್ಟಿಯಲ್ಲಿ 47ನೇ ಶ್ರೇಣಿಯಲ್ಲಿದ್ದಾರೆ. ಇವರ ಸಂಪತ್ತು 1 ಶತಕೋಟಿ ಡಾಲರ್ (7,477 ಕೋಟಿ ರೂ.ಗಳು).

× Chat with us