ಮೇಘಾಲಯ: ನದಿಗೆ ಉರುಳಿದ ಬಸ್‌, ಚಾಲಕ ಸೇರಿ 6 ಮಂದಿ ದುರ್ಮರಣ

(ಚಿತ್ರ ಕೃಪೆ: ಎನ್‌ಡಿಟಿವಿ)

ಶಿಲ್ಲಾಂಗ್: ಮೇಘಾಲಯದಲ್ಲಿ ಬಸ್‌ ನದಿಗೆ ಉರುಳಿ 6 ಮಂದಿ ಸಾವಿಗೀಡಾಗಿರುವ ಘಟನೆ ನಡೆದಿದೆ.

ಬುಧವಾರ ಮಧ್ಯರಾತ್ರಿ 21 ಪ್ರಯಾಣಿಕರಿದ್ದ ಬಸ್‌ ಇಲ್ಲಿನ ರಿಂಗಡಿ ನದಿಗೆ ಉರುಳಿದೆ. ಈ ವೇಳೆ 6 ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ತಂಡ ಹಾಗೂ ತುರ್ತು ಕಾರ್ಯಪಡೆ ಸಂತ್ರಸ್ತರ ರಕ್ಷಣಾ ಕಾರ್ಯ ನಡೆಸುತ್ತಿದೆ.

ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೆರಡು ದೇಹಗಳು ಬಸ್‌ನಡಿ ಸಿಲುಕಿವೆ ಎಂದು ಎನ್‌ಡಿಟಿವಿ ಸುದ್ದಿಸಂಸ್ಥೆ ತಿಳಿಸಿದೆ.

16 ಪ್ರಯಾಣಿಕರನ್ನು ರಕ್ಷಿಸಿ ಹತ್ತಿರದ ಪೊಲೀಸ್‌ ಠಾಣೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಯಾಣಿಸುತ್ತಿದ್ದ ವೇಳೆ ಬಸ್‌ ಮುಂಭಾಗ ಸೇತುವೆಗೆ ಗುದ್ದಿದೆ. ನಂತರ ನದಿಗೆ ಉರುಳಿದೆ ಎಂದು ಮೂಲಗಳು ಹೇಳಿವೆ.

ಮೃತರಲ್ಲಿ ಬಸ್‌ ಚಾಲಕ ಕೂಡ ಒಬ್ಬರಾಗಿದ್ದಾರೆ.

× Chat with us