ಭಾರತದಲ್ಲಿ ಇನ್ನೆರಡು ಕೊವಿಡ್ 19 ಲಸಿಕೆಗಳು, ಒಂದು ಔಷಧಿಯ ತುರ್ತು ಬಳಕೆಗೆ ಅನುಮೋದನೆ; ಆರೋಗ್ಯ ಸಚಿವರಿಂದ ಟ್ವೀಟ್​

ಭಾರತದಲ್ಲಿ ಕೋವಿಡ್ 19 ವಿರುದ್ಧ ಹೋರಾಟವನ್ನು ಇನ್ನಷ್ಟು ಬಲಪಡಿಸಲು ಇನ್ನೆರಡು ಕೊರೋನಾ ಲಸಿಕೆಗಳ ತುರ್ತು ಬಳಕೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮೋದನೆ ನೀಡಿದೆ.

ಇದೀಗ ಹೊಸದಾಗಿ ಕಾರ್ಬೆವ್ಯಾಕ್ಸ್​, ಕೊವಾವ್ಯಾಕ್ಸ್ ಕೊರೊನಾ ಲಸಿಕೆಗಳು ಮತ್ತು ಮೊಲ್ನುಪಿರವಿರ್ ಆ್ಯಂಟಿ ವೈರಲ್​ ಔಷಧಿಗಳ ತುರ್ತು ಮತ್ತು ನಿಯಂತ್ರಿತ ಬಳಕೆಗಾಗಿ ಆರೋಗ್ಯ ಸಚಿವಾಲಯ ಅನುಮೋದನೆ ಕೊಟ್ಟಿದೆ. ಅಂದಹಾಗೆ ಇದು 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮಾತ್ರ ಬಳಸಲಾಗುವ ಲಸಿಕೆಗಳು ಮತ್ತು ಔಷಧವಾಗಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಟ್ವೀಟ್ ಮಾಡಿ ತಿಳಿಸಿದ್ದಾರೆ.   ಅಂದಹಾಗೆ, ಎರಡು ಲಸಿಕೆಗಳು ಮತ್ತು ಒಂದು ಔಷಧಿಯ ತುರ್ತು ಬಳಕೆಗೆ ಒಂದೇ ದಿನ ಅನುಮೋದನೆ ನೀಡಿದ್ದು ವಿಶೇಷವಾಗಿದೆ.

× Chat with us