ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ 55 ವರ್ಷದ ಮಹಿಳೆಯಲ್ಲಿ ಝೀಕಾ ವೈರಸ್ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಪ್ರಕರಣಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೋಮವಾರದವರೆಗೆ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 28 ಹಾಗೂ 35 ವರ್ಷದ ಇಬ್ಬರು ಗರ್ಭಿಣಿಯರಲ್ಲಿ ಸೋಂಕು ಇರುವುದು ದೃಢವಾಗಿತ್ತು.
ಇಂದು ಪತ್ತೆಯಾದ ಪ್ರಕರಣದಲ್ಲಿ ದಹಾನುಕಲ್ ಕಾಲೋನಿಯ ಮಹಿಳೆಯು ತುರಿಕೆ ಹಾಗೂ ಸಂಧಿ ನೋವು ಸಮಸ್ಯೆಯಿಂದ ಬಳಲುತ್ತಿದ್ದರು. ತಪಾಸಣೆ ನಡೆಸಿದ ನಂತರ ಇವರಲ್ಲಿ ಝೀಕಾ ವೈರಾಣು ಇರುವುದು ಖಚಿತವಾಗಿದೆ. ಮಹಿಳೆ ಆರೋಗ್ಯವಾಗಿದ್ದಾರೆ. ಆಸ್ಪತ್ರೆ ದಾಖಲಾತಿಯ ಅಗತ್ಯವಿಲ್ಲ ಎಂದು ಪುಣೆ ಮಹಾನಗರ ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗರ್ಭಿಣಿಯರಲ್ಲಿ ಝೀಕಾ ವೈರಾಣುವಿನ ಸೋಂಕು ಉಲ್ಬಣಿಸಿದ್ದಲ್ಲಿ ಮೈಕ್ರೊಸೆಫಲಿ ಸಮಸ್ಯೆ ಎದುರಾಗುವ ಅಪಾಯವಿದೆ. ಇದರಲ್ಲಿ ಭ್ರೂಣದ ತಲೆಯ ಗಾತ್ರ ಚಿಕ್ಕದಾಗಿ ಮೆದುಳು ಬೆಳವಣಿಗೆಯಾಗದಿರುವ ಅಪಾಯವೂ ಇದೆ ಎಂದು ತಜ್ಞರು ಹೇಳಿದ್ದಾರೆ.
ಝೀಕಾ ವೈರಸ್ ಹರಡಲು ಏಡಿಸ್ ಸೊಳ್ಳೆಯು ವಾಹಕದಂತೆ ಕೆಲಸ ಮಾಡುತ್ತದೆ. ಸೋಂಕು ಇರುವ ವ್ಯಕ್ತಿಗೆ ಕಚ್ಚಿ ರಕ್ತ ಹೀರುವ ಇವುಗಳು, ಆರೋಗ್ಯವಂತ ವ್ಯಕ್ತಿಗೂ ಕಚ್ಚಿದರೆ ಅವರಿಗೂ ಸೋಂಕು ತಗುಲುವ ಅಪಾಯವಿದೆ. ಡೆಂಗ್ಯೂ ಹಾಗೂ ಚಿಕನ್‌ಗುನ್ಯದಂತೆಯೇ ಝೀಕಾ ಕೂಡಾ ಒಬ್ಬರಿಗೆ ಹರಡುತ್ತದೆ.
ಝೀಕಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪುಣೆಯ ಮಹಾನಗರ ಪಾಲಿಕೆ ಮನೆ ಮನೆ ಸಮೀಕ್ಷೆ ಆರಂಭಿಸಿದೆ. ಬಡಾವಣೆಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸಲು ರಾಸಾಯನಿಕ ಸಿಂಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಾವಣಗೆರೆ : ಕೇಂದ್ರ ಸರ್ಕಾರ ರೈಲ್ವೆ ಪ್ರಯಾಣ ದರ ಏರಿಕೆ ಮಾಡಿದೆ. ಜನಸಾಮಾನ್ಯರ ಮೇಲೆ ದರ ಏರಿಕೆ ಹೊರೆಯಾಗುತ್ತಿರುವ ಬಗ್ಗೆ…
ಹುಬ್ಬಳ್ಳಿ : ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಮೇಲ್ಜಾತಿ ಗರ್ಭಿಣಿ ಪುತ್ರಿ ಮಾನ್ಯಳನ್ನು ತಂದೆಯೇ ಕೊಚ್ಚಿ ಕೊಂದಿದ್ದಾನೆ. ಈ ಮರ್ಯಾದೆ…
ಬೆಂಗಳೂರು : ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುಂದುವರೆಯಲಿದ್ದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಾಣಿಕೆ ಕಷ್ಟವಾಗುತ್ತದೆ ಎಂದು ಮಾಜಿ…
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಹೃದಯಭಾಗವಾದ ಅರಮನೆಯ ಮುಂಭಾಗ ಕ್ರಿಸ್‍ಮಸ್ ರಜೆಯ ಸಂಭ್ರಮದ ನಡುವೆಯೇ ಗುರುವಾರ ರಾತ್ರಿ ನಡೆದ…
ಹೊಸದಿಲ್ಲಿ : ಇಂದಿನಿಂದಲೇ ದೇಶದದ್ಯಾಂತ ಜಾರಿಯಾಗುವಂತೆ ರೈಲು ಪ್ರಯಾಣ ದರ ಏರಿಕೆಯಾಗಿದೆ. ಕಳೆದ ವಾರ ರೈಲ್ವೆ ಇಲಾಖೆ ಪ್ರಯಾಣ ದರವನ್ನು…
ಚಿತ್ರದುರ್ಗಾ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಲಾರಿ ಡಿಕ್ಕಿಯಾಗಿ ಖಾಸಗಿ ಬಸ್ ಹೊತ್ತಿ ಉರಿದ…