ದೇಶ- ವಿದೇಶ

ಜಗತ್ತಿನ ಹಿರಿಯ ಡಿಸ್ಕೋ ಜಾಕಿ ಅಂಕಲ್ ರೇ ಇನ್ನಿಲ್ಲ

ಹಾಂಗ್‌ಕಾಂಗ್: ಜಗತ್ತಿನ ಅತೀ ಹಿರಿಯ ಡಿಜೆ (ಡಿಸ್ಕೋ ಜಾಕಿ) ಎಂದು ಖ್ಯಾತಿಯಾಗಿದ್ದ ಹಾಂಗ್‌ಕಾಂಗ್‌ನ ಮರಿಯಾ ಕೊರಡಿರೋ ಅವರು ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅಭಿಮಾನಿಗಳಿಂದ ‘ಅಂಕಲ್ ರೇ’ ಎಂದು ಜನಪ್ರಿಯರಾಗಿದ್ದ ಮರಿಯಾ ಕೊರಡಿರೋ ಜಗತ್ತಿನಲ್ಲಿ ಅತೀ ಹೆಚ್ಚು ಹಿರಿಯ ಹಾಗೂ ದೀರ್ಘಕಾಲದ ಡಿಸ್ಕೋ ಜಾಕಿ ಎಂದು ಗಿನ್ನಿಸ್ ದಾಖಲೆ ಸೇರಿದ್ದರು.

2021ರಲ್ಲಿ ತಮ್ಮ 96 ನೇ ವಯಸ್ಸಿನಲ್ಲಿ ಡಿಸ್ಕೋ ಜಾಕಿ ಕೆಲಸಕ್ಕೆ ನಿವೃತ್ತಿ ತೆಗೆದುಕೊಂಡಿದ್ದ ಅವರು ಇತ್ತೀಚೆಗೆ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕುಟುಂಬದವರ ಸಮ್ಮುಖದಲ್ಲೇ ಸಂಗೀತದ ಬೀಳ್ಕೊಡುಗೆಯೊಂದಿಗೆ ಅಂಕಲ್ ರೇ ನಿಧನರಾದರು.

ಪೋರ್ಚುಗಲ್‌ನಿಂದ ಬಂದಿದ್ದ ವಲಸೆ ಕುಟುಂಬದಲ್ಲಿ ಅಂಕಲ್ ರೇ 1924 ರಲ್ಲಿ ಹಾಂಗ್‌ಕಾಂಗ್‌ನಲ್ಲಿ ಜನಿಸಿದ್ದರು. ವೃತ್ತಿಯ ಆರಂಭದಲ್ಲಿ ಕೆಲ ವರ್ಷ ಜೈಲು ವಾರ್ಡನ್ ಹಾಗೂ ಬ್ಯಾಂಕ್‌ ಕ್ಲರ್ಕ್ ಆಗಿ ಕೆಲಸ ಮಾಡಿದರು. ಸಂಗೀತದ ಮೇಲೆ ವಿಪರೀತ ಮೋಹ ಹೊಂದಿದ್ದ ಅವರು 1949ರಲ್ಲಿ ಹಾಂಗ್‌ಕಾಂಗ್ ರೇಡಿಯೊ ಸ್ಟೇಷನ್ (RTHK) ಸೇರಿದ್ದರು. ಅಲ್ಲಿಂದ 7 ದಶಕ ಹಾಂಗ್‌ಕಾಂಗ್ ಜನತೆಗೆ ಸಂಗೀತದ ರಸದೌತಣವನ್ನು ಉಣಬಡಿಸಿದ್ದರು.

‘ತಮ್ಮ ಪ್ರೊಗ್ರೆಸಿವ್ ಜಾಜ್’, ‘ಆಲ್ ದಿ ವೇ ವಿತ್ ರೇ’ ಎಂಬ ಕಾರ್ಯಕ್ರಮಗಳ ಮೂಲಕ ಅಂಕಲ್ ರೇ ಅವರು ಹಾಂಗ್‌ಕಾಂಗ್‌ನಲ್ಲಿ ಮನೆಮಾತಾಗಿದ್ದರು. ಯುವಕ ಯುವತಿಯರು ಇವರ ಡಿಜೆ ಕಾರ್ಯಕ್ರಮಗಳನ್ನು ಮುಗಿಬಿದ್ದು ಆನಂದಿಸುತ್ತಿದ್ದರು. ಆಲ್ ದಿ ವೇ ವಿತ್ ರೇ ಕಾರ್ಯಕ್ರಮ 51 ವರ್ಷ 3 ತಿಂಗಳು ಪ್ರಸಾರವಾಗಿತ್ತು

andolanait

Recent Posts

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

1 hour ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

1 hour ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

1 hour ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

4 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

4 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ:  ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ…

4 hours ago