ದೇಶ- ವಿದೇಶ

ಇಂದಿರಾಗಾಂಧಿ ತ್ಯಾಗದ ಮುಂದೆ ನಮ್ಮದೇನು ಇಲ್ಲ : ಖರ್ಗೆ ಭಾವುಕ ನುಡಿ

ಹೊಸದಿಲ್ಲಿ : ಇಂದು ನನ್ನ ಮಗನಿಗೆ ಎಂಟು ಗಂಟೆಯ ಆಪರೇಷನ್‌ ಇತ್ತು. ಪತ್ನಿ, ಮಗಳು ಎಲ್ಲರೂ ಫೋನ್‌ ಮಾಡಿ ಬಹಳ ಮುಖ್ಯವಾದ ಆಪರೇಷನ್‌, ಬರಲೇಬೇಕು ಅಂತ ಹೇಳಿದ್ದಾರೆ. . ನಾನು ಅದಕ್ಕೆ ಗಡಿಯಲ್ಲಿ ಸೈನಿಕರು ಜೀವ ಬಲಿ ಕೊಡ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ರು. ಅವರ ತ್ಯಾಗದ ಮುಂದೆ ನಮ್ಮದೇನು? ಅಂತ ಹೇಳಿ ದೇಶಕ್ಕಾಗಿ ನಾನು ಇಲ್ಲಿಯೇ ಉಳಿದೆ.. ʻವೋಟ್‌ ಚೋರಿʼ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಡಿದ ಭಾವುಕ ನುಡಿಗಳಿವು.

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶ ಬೃಹತ್‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಮಗನಿಗೆ ಏನಾದ್ರೂ ಪರ್ವಾಗಿಲ್ಲ ಅಂತ, ದೇಶದ 140 ಕೋಟಿ ಜನರಿಗಾಗಿ ನಾನು ಇಲ್ಲೇ ಉಳಿಯಲು ನಿರ್ಧರಿಸಿದೆ ಎಂದರು.

ಮೋದಿ ಸೋತ್ರೆ ಅವರ ಹೆಸರು ಎಲ್ಲೂ ಇರಲ್ಲ
ಮುಂದುವರಿದು ಮಾತನಾಡಿದ ಅವರು, ನಾವು ಸೋತಿದ್ದೇವೆ, ಆದ್ರೆ ನಮ್ಮ ಸಿದ್ಧಾಂತ ಬದುಕಿದೆ. ಮೋದಿ ಒಮ್ಮೆ ಸೋತರೆ ಅವರ ಹೆಸರೂ ಎಲ್ಲೂ ಇರಲ್ಲ. ನಾವು 10 ಬಾರಿ ಸೋತರೂ ಬದುಕಿದ್ದೇವೆ, ಹೋರಾಟಕ್ಕೆ ಸಿದ್ಧರಿದ್ದೇವೆ. ವಂದೇ ಮಾತರಂ ಕೂಡ ನಮ್ಮಿಂದ ಕದ್ದಿದ್ದಾರೆ. ಆ ಕಳ್ಳರ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಕಿವಿಮಾತು ಹೇಳಿದರು.

ಆಂದೋಲನ ಡೆಸ್ಕ್

Recent Posts

ಈ ದಿನ ಮೈಸೂರು ಅರಮನೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧ

ಮೈಸೂರು : ಸಾಂಸ್ಕೃತಿಕ ನಗರಿಯ ಅರಮನೆಗೆ ಡಿ.20ರಂದು ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮೈಸೂರು ಅರಮನೆ ಮಂಡಳಿಯ ಕಾರ್ಯನಿರ್ವಾಹಕ ಅಧಿಕಾರಿಗಳ…

5 mins ago

ಹೈಕಮಾಂಡ್‌ ನನ್ನ ಪರವಾಗಿದೆ : ಸಿಎಂ ಸಿದ್ದರಾಮಯ್ಯ

ಬೆಳಗಾವಿ : ಎರಡುವರೆ ವರ್ಷಗಳಿಗೆ ಮಾತ್ರ ಮುಖ್ಯಮಂತ್ರಿ ಹುದ್ದೆ ಎಂದು ತೀರ್ಮಾನವಾಗಿಲ್ಲ. ಕಾಂಗ್ರೆಸ್ ಪಕ್ಷದ ವರಿಷ್ಠರು ತೀರ್ಮಾನ ಮಾಡಿದರೆ ಮುಂದೆಯೂ…

27 mins ago

ಹೆಮ್ಮಿಗೆಯಲ್ಲಿ ಹುಲಿ ದಾಳಿಗೆ ಹಸು ಬಲಿ: ರೈತರಲ್ಲಿ ಆತಂಕ

ಹುಣಸೂರು : ತಾಲೂಕಿನ ಹನಗೋಡು ಹೋಬಳಿಯ ಹೆಮ್ಮಿಗೆ ಬಳಿಯ ಜಮೀನಿನಲ್ಲಿ ಹಗಲು ವೇಳೆಯೇ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು…

1 hour ago

ಬೋನಿಗೆ ಬಿದ್ದ ಚಿರತೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ಟಿ.ನರಸೀಪುರ : ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದ ಘಟನೆ ಟಿ.ನರಸೀಪುರ ತಾಲ್ಲೂಕಿನ ಶ್ರೀರಂಗರಾಜಪುರ ಗ್ರಾಮದಲ್ಲಿ ನಡೆದಿದೆ. ಕಳೆದ…

3 hours ago

ನನಗೂ ಎಂಎಲ್‌ಸಿ ಸ್ಥಾನ ಕೊಡಿ : ರಕ್ತದಲ್ಲಿ ಸಹಿ ಹಾಕಿ ವರಿಷ್ಠರಿಗೆ ಪತ್ರ ಬರೆದ ಕಾಂಗ್ರೆಸ್ ಕಾರ್ಯಕರ್ತ

ಮೈಸೂರು: ಎಂಎಲ್‌ಸಿ ಸ್ಥಾನಕ್ಕಾಗಿ ರಕ್ತದಲ್ಲಿ ಸಹಿ ಮಾಡಿ ಮನವಿ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತನೊಬ್ಬರು ತಮ್ಮ…

3 hours ago

ಓದುಗರ ಪತ್ರ:  ದೇವಾಲಯಗಳ ಬಳಿ ಪೊಲೀಸ್ ಗಸ್ತು ಹೆಚ್ಚಿಸಿ

ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…

6 hours ago