ವಾಷಿಂಗ್ಟನ್: ಹೊಸ ನಿಷೇಧದ ಭಾಗವಾಗಿ ಭೂತಾನ್, ಪಾಕಿಸ್ತಾನ ಸೇರಿದಂತೆ ವಿಶ್ವದ 41 ರಾಷ್ಟ್ರ ಪ್ರಜೆಗಳಿಗೆ ಅಮೆರಿಕಾದ ಪ್ರಯಾಣ ನಿರ್ಬಂಧ ವಿಧಿಸಲು ಡೊನಾಲ್ಡ್ ಟ್ರಂಪ್ ಸರ್ಕಾರ ತೀರ್ಮಾನಿಸಿದೆ.
ಅಮೆರಿಕಾವೂ 41 ರಾಷ್ಟ್ರಗಳನ್ನು ಮೂರು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಿದ್ದು, ಆ ದೇಶಗಳಿಗೆ ಅಮೆರಿಕಾ ಸರ್ಕಾರ ಜ್ಞಾಪನ ಪತ್ರವನ್ನು ಹೊರಡಿಸಿದೆ.
ಅಮೆರಿಕಾ ಪ್ರಯಾಣಕ್ಕೆ ನಿರ್ಬಂಧಿಸಿರುವ ದೇಶಗಳು ಯಾವ್ಯಾವು?
ಮೊದಲ ಗುಂಪಿನಲ್ಲಿ ಬರುವ ಅಫ್ಘಾನಿಸ್ತಾನ, ಕ್ಯೂಬಾ, ಇರಾನ್, ಸಿರಿಯಾ ಹಾಗೂ ಉತ್ತರ ಕೊರಿಯಾ ಸೇರಿದಂತೆ 10 ದೇಶಗಳ ಪೂರ್ಣ ವೀಸಾ ಅಮಾನತುಗೊಳಿಸಲಾಗುವುದು ಎಂದು ಹೇಳಿದೆ.
ಎರಡನೇ ಗುಂಪಿನಲ್ಲಿರುವ ಹೈಟಿ, ಲಾವೋಸ್, ಎರಿಟ್ರಿಯಾ, ಮಯನ್ಮಾರ್, ಹಾಗೂ ದಕ್ಷಿಣ ಸುಡಾನ್ ದೇಶಗಳು ಕೂಡ ಅಮಾನತುಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಯುಸ್‌ನ ಈ ನಿರ್ಧಾರದಿಂದ ಕೆಲ ವಿನಾಯಿತಿಗಳೊಂದಿಗೆ ಪ್ರವಾಸಿಗಳು, ವಿದ್ಯಾರ್ಥಿ ವೀಸಾಗಳು ಹಾಗೂ ಇನ್ನಿತರ ವಲಸೆ ವೀಸಾಗಳ್ಳುಳ್ಳ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತದೆ.
ಇನ್ನು ಮೂರನೇ ಗುಂಪಿನಲ್ಲಿರುವ ಭೂತಾನ್, ಪಾಕಿಸ್ತಾನ ಹಾಗೂ ಮಯನ್ಮಾರ್ ಸೇರಿದಂತೆ ಒಟ್ಟು 26 ದೇಶಗಳ ಸರ್ಕಾರಗಳು 60 ದಿನಗಳಲ್ಲಿ ನ್ಯೂನತೆಗಳನ್ನು ಆದಷ್ಟು ಬೇಗ ಪರಿಹರಿಸಬೇಕು. ಇಲ್ಲವಾದರೆ ಅಮೆರಿಕಾದ ವೀಸಾ ವಿತರಣೆಯನ್ನು ಭಾಗಶಃವಾಗಿ ಸ್ಥಗಿತಗೊಳಿಸುವುದನ್ನು ಪರಿಗಣಿಸಲಾಗುವುದು ಎಂದು ತಿಳಿಸಿದೆ.
ಹೊಸದಿಲ್ಲಿ : ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಸಿಖ್ ಫಾರ್ ಜಸ್ಟೀಸ್ ನಿಯೋಜಿತ ಭಯೋತ್ಪಾದಕ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಪಿ.ದೊಡ್ಡಿ ಗ್ರಾಮದಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟು ಕಬ್ಬಿನ ಬೆಳೆ ಫಸಲನ್ನು ನಾಶಗೊಳಿಸಿರುವ ಘಟನೆ…
ಮಡಿಕೇರಿ : ಮೈಸೂರು-ಗೋಣಿಕೊಪ್ಪ ಹೆದ್ದಾರಿಯ ದಕ್ಷಿಣ ಕೊಡಗಿನ ತಿತಿಮತಿ ವ್ಯಾಪ್ತಿಯಲ್ಲಿ ಹುಲಿಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದು, ಹುಲಿ ಸೆರೆಗೆ ಶಾಸಕ…
ನಂಜನಗೂಡು : ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳನ್ನು ಸಹ ನಾಚಿಸುವಂತಹ ಆಧುನಿಕ ಸೌಲಭ್ಯಗಳನ್ನು…
ಬೃಹತ್ ಕೈಗಾರಿಕೆ ಸಚಿವಾಲಯ ಅಧೀನದ ಎಆರ್‌ಎಐ ಘಟಕ ಸ್ಥಾಪನೆಗೆ ಪರಿಶೀಲನೆ ನಡೆಯುತ್ತಿದೆ : ಕುಮಾರಸ್ವಾಮಿ ಮಂಡ್ಯ : ಜಿಲ್ಲೆಯಲ್ಲಿ ಕೈಗಾರಿಕೆ…
ಮಂಡ್ಯ : ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ನನ್ನ ಸ್ಪರ್ಧೆ ಮಾಡುತ್ತೇನೆ ಎನ್ನುವ…