ಹೊಸದಿಲ್ಲಿ : ಯುಪಿಐ ಪೇಮೆಂಟ್‌ನಲ್ಲಿ ಆ.1 ರಿಂದ ಕೆಲ ಪ್ರಮುಖ ಬದಲಾವಣೆಯಾಗಲಿದೆ. ಇದರಿಂದ ಬಳಕೆದಾರರಿಗೆ ಕೊಂಚ ಅನೂನುಕೂಲ ಉಂಟಾಗುವ ಸಾಧ್ಯತೆಯೂ ಇದೆ.
ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳ ಜಾರಿಗೆ ತರಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಮುಂದಾಗಿದೆ. ಈ ಹೊಸ ಮಾರ್ಗಸೂಚಿಗಳು ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂನಂತಹ ಡಿಜಿಟಲ್ ಪಾವತಿ ಆಪ್‌ಗಳಿಗೆ ಅನ್ವಯವಾಗಲಿವೆ. ಈ ಬದಲಾವಣೆಗಳು ಬಳಕೆದಾರರ ದೈನಂದಿನ ವಹಿವಾಟುಗಳ ಮೇಲೆ ಅಂತಹ ಬದಲಾವಣೆಗಳನ್ನೇನೂ ತರುವುದಿಲ್ಲವಾದರೂ, ಬ್ಯಾಲೆನ್ಸ್ ಚೆಕ್ ಮತ್ತು ಆಟೋ ಡೆಬಿಟ್‌ಗಳಂತಹ ಕೆಲವು ಕಾರ್ಯಗಳಿಗೆ ಮಿತಿಗಳನ್ನು ಹೇರಲಿದೆ.
ಹೊಸ ನಿಯಮಗಳ ಪ್ರಕಾರ, ಬಳಕೆದಾರರು ಪ್ರತಿ ಯುಪಿಐ ಅಪ್ಲಿಕೇಶನ್‌ನಲ್ಲಿ ದಿನಕ್ಕೆ ಗರಿಷ್ಟ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಲು ಅವಕಾಶ ಇರಲಿದೆ. ಅದಲ್ಲದೇ ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ದಿನಕ್ಕೆ 25 ಬಾರಿ ಮಾತ್ರ ಪಡೆಯಲು ಅವಕಾಶವಿರಲಿದೆ.
ಇನ್ನೂ ಬ್ಯಾಲೆನ್ಸ್ ಚೆಕ್ ಮಾಡುವುದರ ಜೊತೆಗೆ ಓಟಿಟಿ ಸೇರಿದಂತೆ ಮೊಬೈಲ್ ರಿಚಾರ್ಜ್‌ಗಳ ಆಟೋ ಪೇಗೆ ಸಮಯ ನಿಗದಿಯಾಗಿದ್ದು, ಆ ಸಮಯ ಸಂಧರ್ಭದಲ್ಲಿ ಮಾತ್ರ ಪಾವತಿಗೆ ಅವಕಾಶ ಇರಲಿದೆ. ಮೂರು ನಿರ್ದಿಷ್ಟ ಸಮಯದ ಸ್ಲಾಟ್‌ಗಳನ್ನು ನಿಗದಿಪಡಿಸಲಾಗಿದೆ. ಪೀಕ್ ಅವರ್‌ಗಳಲ್ಲಿ ಸರ್ವರ್‌ಗಳ ಮೇಲಿನ ಒತ್ತಡ ಕಡಿಮೆ ಮಾಡಲು ಈ ಪಾವತಿಗಳನ್ನು ಬೆಳಗ್ಗೆ 10 ಗಂಟೆಗೂ ಮುನ್ನ, ಮಧ್ಯಾಹ್ನ 1 ರಿಂದ ಸಂಜೆ 5 ಗಂಟೆಯ ನಡುವೆ, ಮತ್ತು ರಾತ್ರಿ 9.30ರ ನಂತರ ಮಾತ್ರ ಆಟೋ ಪೇ ಪ್ರಕ್ರಿಯೆ ನಡೆಯಲಿದೆ.
ಇಷ್ಟೇ ಅಲ್ಲ ವಹಿವಾಟು ಬಾಕಿ ಉಳಿದಿರೋದನ್ನು ಪರಿಶೀಲನೆ ಮಿತಿಯನ್ನು ಮೂರು ಬಾರಿಗೆ ಮಾತ್ರ ಪರಿಶೀಲಿಸಲು ಅವಕಾಶ ನೀಡಲಾಗಿದೆ. ಪ್ರತಿ ಪ್ರಯತ್ನದ ನಡುವೆ ಕಡ್ಡಾಯವಾಗಿ 90 ಸೆಕೆಂಡ್ ಅಂತರ ಇರಲೇಬೇಕು. ಇದರಿಂದ ಬಳಕೆದಾರರು ಕೊಂಚ ಪರಿತಪಿಸಬೇಕಾಗುತ್ತದೆ.
ನವೀನ್ ಡಿಸೋಜ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳ ಸಾಧನೆ ಜಿಲ್ಲೆಯಾದ್ಯಂತ ನಿರಂತರ ವ್ಯಾಪಕ ತಪಾಸಣಾ ಕ್ರಮ ಮಡಿಕೇರಿ: ಪ್ರಾದೇಶಿಕ…
ನಾಗರಹೊಳೆ ಅರಣ್ಯದ ಮಧ್ಯಭಾಗದಲ್ಲಿರುವ ದೇವಸ್ಥಾನಕ್ಕೆ ವಿವಿಧೆಡೆಯಿಂದ ಸಾವಿರಾರು ಮಂದಿ ಭೇಟಿ ಪಿರಿಯಾಪಟ್ಟಣ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ಮೀಸಲು…
ಎಂ.ಗೂಳೀಪುರ ನಂದೀಶ್ ಕೆಸ್ತೂರು ಪ್ರೌಢಶಾಲೆಯ ಸುತ್ತುಗೋಡೆಯಲ್ಲಿ ಕನ್ನಡ ಸಾಹಿತಿಗಳ, ಸಾಧಕರ ಸೊಗಸಾದ ಚಿತ್ರಗಳ ಚಿತ್ತಾರ ಯಳಂದೂರು: ಶಾಲೆಯ ಸುತ್ತುಗೋಡೆಯಲ್ಲಿ ರಾರಾಜಿಸುತ್ತಿರುವ…
ಎಂ.ಬಿ.ರಂಗಸ್ವಾಮಿ ಮೂಗೂರಿನ ತ್ರಿಪುರ ಸುಂದರಿ ದೇಗುಲದ ನೂತನ ಕಲ್ಯಾಣಿಯಲ್ಲಿ ೪ ವರ್ಷಗಳಿಂದ ನಡೆಯದ ತೆಪ್ಪೋತ್ಸವ ಮೂಗೂರು: ಐತಿಹಾಸಿಕ ಹಿನ್ನೆಲೆಯುಳ್ಳ ಧಾರ್ಮಿಕ…
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…