ದೇಶ- ವಿದೇಶ

ಕೇಂದ್ರ ಸಚಿವ ಜಾರ್ಜ್ ಕುರಿಯನ್ ರಾಜೀನಾಮೆ

ಹೊಸದಿಲ್ಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ರಾಜೀನಾಮೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಂಗೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯ ಸಚಿವ ಸಂಪುಟದಲ್ಲಿ ಕುರಿಯನ್ ಅವರ ಅಧಿಕಾರಾವಧಿಯು ಅಂತ್ಯಗೊಂಡಿದೆ.. ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಮತ್ತು ಸಚಿವ ಸ್ಥಾನದ ಅಧಿಕಾರಾವಧಿ ಜೂನ್ 21, 2026ರಂದು ಕೊನೆಗೊಂಡಿತ್ತು.

ಪ್ರಧಾನ ಮಂತ್ರಿಯವರ ಸಲಹೆಯ ಮೇರೆಗೆ ಕುರಿಯನ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿಗಳು ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ‘ಪ್ರಧಾನ ಮಂತ್ರಿಯವರ ಸಲಹೆಯಂತೆ ಭಾರತದ ರಾಷ್ಟ್ರಪತಿಗಳು, ಸಂವಿಧಾನದ 75ನೇ ವಿಧಿಯ ಷರತ್ತು (2) ರ ಅಡಿಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕೇಂದ್ರ ಸಚಿವ ಸಂಪುಟಕ್ಕೆ ಜಾರ್ಜ್ ಕುರಿಯನ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ‘ ಎಂದು ಹೇಳಿಕೆ ತಿಳಿಸಿದೆ.

ರಾಜ್ಯಸಭಾ ಸದಸ್ಯತ್ವದ ಅವಧಿ ಮುಗಿದ ನಂತರ ಅವರು ರಾಜೀನಾಮೆ ನೀಡಿರುವುದರಿಂದ, ಸಂಸತ್ತಿಗೆ ಮರು ಆಯ್ಕೆಯಾಗದೆ ಅಥವಾ ಮರುನಾಮನಿರ್ದೇಶನಗೊಳ್ಳದೆ ಅವರು ಸಚಿವ ಸ್ಥಾನದಲ್ಲಿ ಮುಂದುವರಿಯುವುದು ಸಾಧ್ಯವಾಗುವುದಿಲ್ಲ.

 

ಆಂದೋಲನ ಡೆಸ್ಕ್

Recent Posts

ಭರದಿಂದ ಸಾಗಿದ ದಸರಾ ಕಾಮಗಾರಿ

೫.೯೬ ಕೋಟಿ ರೂ.ವೆಚ್ಚದಲ್ಲಿ ಪೇಂಟಿಂಗ್, ಫುಟ್‌ಪಾತ್ ಅಂಚುಗಳಿಗೆ ಬಣ್ಣ, ವೃತ್ತಗಳ ದುರಸ್ತಿ ಸೆ.೩೦ರೊಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ತಾಕೀತು ಮೈಸೂರು:…

3 hours ago

ಮಣ್ಣಾದ ಸತ್ಯಕ್ಕೆ ಮರುಜೀವ

ಸೌಜನ್ಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ನ್ಯಾಯಾದೀಪ’ ರಾಜ್ಯದ ಜನಮಾನಸವನ್ನು ತೀವ್ರವಾಗಿ ಕಾಡುತ್ತಿರುವ ಹಾಗೂ ಇಡೀ ವ್ಯವಸ್ಥೆಯ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿರುವ ಧರ್ಮಸ್ಥಳದ…

3 hours ago

ಓದುಗರ ಪತ್ರ: ವಿವೇಕವಿದ್ದರೆ ಮಾರಕವೂ ಪೂರಕ!

ಸಮಾಜಕ್ಕೆ ವಿeನಿಗಳು ನೀಡಿರುವ, ನೀಡುತ್ತಿರುವ ಅಪಾರವಾದ ಕೊಡುಗೆಯಿಂದಾಗಿ ತಂತ್ರeನದ ಕ್ರಾಂತಿಯ ಜೊತೆಗೆ ನಾನಾ ಕ್ಷೇತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದಾಗಿ ಜಗತ್ತಿನ ಅಭಿವೃದ್ಧಿ…

3 hours ago

ಓದುಗರ ಪತ್ರ: ವಿದ್ಯುತ್: ಸರ್ಕಾರ ಭರವಸೆ ಈಡೇರಿಸಲಿ

ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ದಿನಕ್ಕೆ ೯ ತಾಸು ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ಅದನ್ನು ೫ ತಾಸಿಗೆ…

3 hours ago

ಓದುಗರ ಪತ್ರ: ಕೇಂದ್ರ ಗೃಹ ಸಚಿವರು ಈ ರೀತಿ ಹೇಳಬಹುದೇ?

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಹೋರಾಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ಬಿಜೆಪಿ ನಾಯಕರಿಗೆ…

3 hours ago

ಓದುಗರ ಪತ್ರ: ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ದೊರೆಯುವುದೇ?

೧೪ ವರ್ಷಗಳಿಂದ ಪೊಲೀಸ್ ತನಿಖೆ ನ್ಯಾಯಾಲಯ / ಸಿಬಿಐ / ತನಿಖಾ ಸಂಸ್ಥೆಗಳಲ್ಲಿ ‘ಅಲೆದಾಟ’ನಡೆಸುತ್ತಿರುವ ಸೌಜನ್ಯಾ ಪ್ರಕರಣದಲ್ಲಿ ನಿಜಕ್ಕೂ ನ್ಯಾಯ…

3 hours ago