ದೇಶ- ವಿದೇಶ

ವಿರೋಧದ ನಡುವೆಯೂ ವಕ್ಫ್‌ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ

ನವದೆಹಲಿ: ಜಂಟಿ ಸಂಸದೀಯ ಸಮಿತಿ ನೀಡಿದ ವರದಿ ಮೇರೆಗೆ ವಕ್ಫ್‌ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಒಪ್ಪಿಗೆ ಸೂಚಿಸಿದೆ.

ಇದೇ ಫೆಬ್ರವರಿ.13ರಂದು ಸಂಸತ್ತಿನಲ್ಲಿ ಮಂಡಿಸಲಾದ ಜಂಟಿ ಸಂಸದೀಯ ಸಮಿತಿ ವರಧಿ ಆಧರಿಸಿ ಫೆಬ್ರವರಿ.19ರ ಸಭೆಯಲ್ಲಿ ಸಂಪುಟ ತಿದ್ದುಪಡಿಗಳನ್ನು ಅಂಗೀಕರಿಸಿದ ಬಳಿಕ ಒಪ್ಪಿಗೆ ಸೂಚಿಸಿದೆ ಎನ್ನಲಾಗುತ್ತಿದೆ.

ಇನ್ನು ಲೋಕಸಭೆಯಲ್ಲಿ ಈ ವರ್ಷದ ಮೊದಲ ಬಜೆಟ್‌ ಅಧಿವೇಶನದಲ್ಲೇ ಪ್ರತಿಪಕ್ಷಗಳ ಗದ್ದಲ ಕೋಲಾಹಲದ ನಡುವೆ ವರದಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿಪಕ್ಷಗಳು ಸದನದಲ್ಲಿ ಗದ್ದಲ ಕೋಲಾಹಲ ಎಬ್ಬಿಸಿದ್ದವು.

ಕಳೆದ ವಾರ ಮಸೂದೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು. ಈ ಮೂಲಕ ಮಾರ್ಚ್.‌10ರಂದು ಪ್ರಾರಂಭವಾಗಲಿರುವ ಬಜೆಟ್‌ ಅಧಿವೇಶನದ ದ್ವಿತೀಯಾರ್ಧದಲ್ಲಿ ವಕ್ಫ್‌ ಆಸ್ತಿಗಳ ನೋಂದಣಿಯನ್ನು ಸುಗಮಗೊಳಿಸುವ ಗುರಿ ಹೊಂದಿತ್ತು ಎಂದು ಹೇಳಲಾಗುತ್ತಿದೆ.

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಯುದ್ಧದ ಖರ್ಚು ನಿಭಾಯಿಸಲು ಹೊಸ ದಾರಿ ಹುಡುಕಿದ ಇರಾನ್: ವ್ಯಾಪಾರಿ ಹಡಗುಗಳಿಗೆ ಶುಲ್ಕ

ಟೆಹರಾನ್:‌ ಯುದ್ಧದ ಖರ್ಚು ನಿಭಾಯಿಸಲು ಸಂಚಾರ ಮಾಡುವ ವ್ಯಾಪಾರಿ ಹಡಗುಗಳಿಗೆ ಶುಲ್ಕ ವಿಧಿಸಲು ಇರಾನ್ ನಿರ್ಧರಿಸಿದೆ. ಹಾರ್ಮುಜ್ ಜಲಸಂಧಿ ಮೂಲಕ…

4 mins ago

ಅಕಾಲಿಕ ಮಳೆಯಿಂದ ಬೆಳೆನಷ್ಟ: ಪರಿಹಾರ ನೀಡಲು ರೈತ ಸಂಘಟನೆಗಳ ಒತ್ತಾಯ

ಚಾಮರಾಜನಗರ: ಅಕಾಲಿಕ ಮಳೆಯಿಂದ ಬೆಳೆ ನಷ್ಟವಾಗಿರುವ ಹಿನ್ನೆಲೆಯಲ್ಲಿ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ…

9 mins ago

ಮಧ್ಯಪ್ರಾಚ್ಯ ಸಂಘರ್ಷ: ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಲು ಪ್ರಧಾನಿ ಮೋದಿ ಸಲಹೆ

ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದ ವೇಳೆ ದೇಶದ ಮೇಲಾಗುವ ಪ್ರತಿಕೂಲ ಪರಿಣಾಮಗಳ ಬಗ್ಗೆ ಕೇಂದ್ರ ಸರ್ಕಾರ ಸತತ ನಿಗಾ ವಹಿಸುತ್ತಿದ್ದು,…

21 mins ago

ಮಾರ್ಚ್.‌25ರಂದು ಸಾಲಿಗ್ರಾಮದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಸಾಲಿಗ್ರಾಮ: ಮೈಸೂರು ಜಿಲ್ಲೆಯ ಸಾಲಿಗ್ರಾಮ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾರ್ಚ್.25ರಂದು ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ…

35 mins ago

ಭಾರತದ ಯೂರಿಯಾ ಘಟಕಗಳು ಅರ್ಧದಷ್ಟು ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ: ಮೂಲಗಳಿಂದ ಮಾಹಿತಿ

ಹೊಸದಿಲ್ಲಿ: ಭಾರತದ ಯೂರಿಯಾ ಘಟಕಗಳು ಅರ್ಧದಷ್ಟು ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಮೂಲಗಳು ಹೇಳಿವೆ. ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ಹೊರ್ಮುಜ್‌…

47 mins ago

ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡಿದರೆ, ಹೊರ್ಮುಜ್‌ ಸಂಪೂರ್ಣ ಮುಚ್ಚುತ್ತೇವೆ : ಅಮೆರಿಕಗೆ ಇರಾನ್‌ ಎಚ್ಚರಿಕೆ

ಟೆಹ್ರಾನ್ : ಪಶ್ಚಿಮ ಏಷ್ಯಾದಲ್ಲಿನ ಯುದ್ಧಕ್ಕೆ ಶೀಘ್ರವೇ ಅಂತ್ಯ ಹಾಡುವುದಾಗಿ ಶನಿವಾರವಷ್ಟೆ ಹೇಳಿದ್ದ ಟ್ರಂಪ್‌, ಈಗ ಇರಾನ್‌ ಮೇಲಿನ ದಾಳಿಗಳನ್ನು…

1 hour ago