ಆಂಧ್ರಪ್ರದೇಶ: ತಿರುಮಲ ವೆಂಕಟೇಶ್ವರ ದೇವಸ್ಥಾನ ಹಾಗೂ ಸಂಯೋಜಿತ ದೇವಸ್ಥಾನಗಳಲ್ಲಿ ಸ್ಥಾಪಿಸಲಾದ ಹುಂಡಿಗಳಿಗೆ ಹಾಕಿರುವ ವಾಚ್‌ಗಳು ಮತ್ತು ಮೊಬೈಲ್ ಫೋನ್‌ಗಳನ್ನು ತಿರುಮಲ ತಿರುಪತಿ ದೇವಸ್ಥಾನವು ಹರಾಜು ಮಾಡಲು ಮುಂದಾಗಿದೆ.
ಕಲಿಯುಗದ ಪ್ರತ್ಯಕ್ಷ ದೈವ ತಿರುಪತಿಯ ವೆಂಕಟೇಶ್ವರ ಸ್ವಾಮಿಯನ್ನು ಪ್ರತಿನಿತ್ಯ ಸಾವಿರಾರು ಮಂದಿ ದರ್ಶನ ಪಡೆದುಕೊಳ್ಳುತ್ತಾರೆ. ಕೆಲವರು ಕಾಲ್ನಡಿಗೆ ಮೂಲಕ ದರ್ಶನಕ್ಕೆ ಆಗಮಿಸಿದರೆ, ಮತ್ತೆ ಕೆಲವರು ತಮ್ಮ ಸ್ವಂತ ವಾಹನದ ಮೂಲಕ ತಿರುಪತಿಗೆ ಬಂದು ವೆಂಕಟೇಶ್ವರನ ದರ್ಶನ ಮಾಡುತ್ತಾರೆ.
ತಿರುಪತಿಗೆ ಆಗಮಿಸುವ ಸಾವಿರಾರು ಮಂದಿ ದೇವಾಲಯದ ಹುಂಡಿಗೆ ಕಾಣಿಕೆ ಜೊತೆ ಜೊತೆಗೆ ವಾಚ್ ಹಾಗೂ ಸ್ಮಾರ್ಟ್‌ಫೋನ್ ಹಾಕಿ ಹರಕೆ ತೀರಿಸುತ್ತಾರೆ. ಭಕ್ತರು ಕಾಣಿಕೆಗಳ ರೂಪದಲ್ಲಿ ಹಾಕಿರುವ ವಾಚ್ ಹಾಗೂ ಸ್ಮಾರ್ಟ್‌ಫೋನ್‌ಗಳನ್ನು ಈಗ ಟಿಟಿಡಿ ಹರಾಜು ಹಾಕುತ್ತಿದೆ. ಈ ಮೂಲಕ ಇವುಗಳನ್ನು ಖರೀದಿ ಮಾಡಬೇಕು ಎನ್ನುವವರಿಗೆ ಸುವರ್ಣಾವಕಾಶ ಸಿಕ್ಕಿದೆ.
14 ಹೊಸ ಹಾಗೂ ಬಳಸಿದ ವಾಚ್‌ಗಳ ಲಾಟ್‌ಗಳ ಜೊತೆಗೆ 24 ಸೆಲ್‌ಫೋನ್‌ಗ ಲಾಟ್‌ಗಳನ್ನು ಹರಾಜಿಗೆ ಇಡಲಾಗಿದೆ. ಆಸಕ್ತರು ಈ ಹರಾಜಿನಲ್ಲಿ ಭಾಗವಹಿಸಿ ಇವುಗಳನ್ನು ಕೊಂಡುಕೊಳ್ಳಬಹುದು ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹರಾಜು ಪ್ರಕ್ರಿಯೆ ಜೂನ್ 24ರಂದು ನಡೆಯಲಿದ್ದು, ನೀವು ಕೂಡ ತಿರುಪತಿಗೆ ಹೋಗಿ ಸೂಕ್ತ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಹಾಗೂ ವಾಚ್‌ಗಳನ್ನು ಖರೀದಿ ಮಾಡಬಹುದಾಗಿದೆ.
ನ್ಯೂಯಾರ್ಕ್ : ಭಾರತದೊಂದಿಗಿನ ವ್ಯಾಪಾರ ಒಪ್ಪಂದವನ್ನು ಐತಿಹಾಸಿಕ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ಅಮೆರಿಕವು ದೇಶಕ್ಕೆ ಮತ್ತು…
ಬೆಂಗಳೂರು : ರೌಡಿ ಶೀಟರ್ ಬಿಕ್ಲು ಶಿವ (ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ) ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಆರ್.ಪುರಂ ಕ್ಷೇತ್ರದ…
ಮೈಸೂರು : ಲೋಕಾಯುಕ್ತ ಅಧಿಕಾರಿಗಳು ಮೈಸೂರು, ದಾವಣಗೆರೆ, ಬೆಂಗಳೂರು, ಧಾರವಾಡ, ಶಿವಮೊಗ್ಗ ಸೇರಿ ರಾಜ್ಯದ ಹಲವೆಡೆ ಏಕಕಾಲದಲ್ಲಿ ಮಿಂಚಿನ ದಾಳಿ…
ಹೊಸದಿಲ್ಲಿ : ಕೇಂದ್ರ ಸರ್ಕಾರದ ಕಾರ್ಮಿಕ, ರೈತ ಮತ್ತು ’ಕಾರ್ಪೊರೇಟ್ ಪರ’ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಗಳ ಜಂಟಿ…
ಬೆಂಗಳೂರು : ಕನ್ನಡದ ಜನಪ್ರಿಯ ನಟ, ಸಂಗೀತ ನಿರ್ದೇಶಕ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿರುವ ಸಾಧು ಕೋಕಿಲಾ ಹಾಗೂ…
ಮೈಸೂರು: ಎಂಎಲ್‌ಸಿ ಯತಿಂದ್ರ ಸಿದ್ದರಾಮಯ್ಯ ವಿರುದ್ಧ ಅವಹೇಳನ ಪೋಸ್ಟ್ ಮಾಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಐಟಿ…