ಪುರಿ: ದೇಗುಲಗಳ ಸಪ್ತ ಸಂಪತ್ತಿನ ಸುತ್ತ ಸುತ್ತಿಕೊಂಡಿರುವ ಹಾವುಗಳ ಚರ್ಚೆ ಹಿಂದೂ ಮತ್ತು ಬೌದ್ಧ ಸಂಪ್ರದಾಯಗಳಲ್ಲಿ ಬಹಳ ಹಿಂದಿನಿಂದಲೂ ಸಾಮಾನ್ಯವಾಗಿದೆ. ಪೌರಾಣಿಕ ಕಥೆಗಳು ಮತ್ತು ಅನೇಕ ಚಲನಚಿತ್ರಗಳು ಕೂಡ ಅಂತಹ ನಿದರ್ಶನಗಳಿಂದ ತುಂಬಿವೆ. ಅದಕ್ಕೆ ಒಡಿಶಾದ ಪುರಿ ಜಗನ್ನಾಥ ದೇವಾಲಯ ಕೂಡ ಹೊರತಾಗಿಲ್ಲ. ಜಗನ್ನಾಥ ದೇವಾಲಯದ ರತ್ನ ಭಂಡಾರದ ಬಗ್ಗೆ ಹಲವು ಕಥೆಗಳಿವೆ.
ಭಗವಾನ್ ಜಗನ್ನಾಥ ಮತ್ತು ಪುರಿಯಲ್ಲಿರುವ ದೇವಾಲಯದ ಇತರೆ ದೇವತೆಗಳ ಬೆಲೆಬಾಳುವ ವಸ್ತುಗಳನ್ನು ಸರ್ಪಗಳ ಗುಂಪು ಬಹಳ ನಿಷ್ಠೆಯಿಂದ ಕಾಪಾಡುತ್ತವೆ ಎಂಬ ದಂತಕಥೆಯಿದೆ. 6 ವರ್ಷಗಳ ಹಿಂದೆ 2018ರಲ್ಲಿ ಒಡಿಶಾ ಹೈಕೋರ್ಟ್‌ನ ಆದೇಶದ ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಜಂಟಿ ತಂಡ ಮತ್ತು ಪುರಿಯ ಜಗನ್ನಾಥ ದೇವಾಲಯದ ಅಧಿಕಾರಿಗಳು ಅದರ ರಚನಾತ್ಮಕ ಸ್ಥಿತಿಯನ್ನು ಪರಿಶೀಲಿಸಲು ರತ್ನ ಭಂಡಾರಕ್ಕೆ ತೆರಳಿದರು.
ಆ ದೇಗುಲದ ಹೊರಗೆ ಭಕ್ತರು ಮತ್ತು ರಕ್ಷಣಾ ಸಿಬ್ಬಂದಿಗಳ ಗುಂಪಿನೊಂದಿಗೆ ಭುವನೇಶ್ವರದಿಂದ ವಿಶೇಷವಾಗಿ ಕರೆಸಲ್ಪಟ್ಟ ಇಬ್ಬರು ಪರಿಣಿತ ಹಾವು ಹಿಡಿಯುವವರು ಕೂಡ ಸಹಾಯ ಮಾಡಲು ಸಿದ್ಧರಾಗಿ ನಿಂತರು. ಆದರೆ ಹಳೆಯ ಭಂಡಾರದಲ್ಲಿ ಬೀಗದ ಕೊರತೆಯಿದ್ದ ಪರಿಣಾಮ ಅದನ್ನು ತೆಗೆಯಲು ಆಗಲಿಲ್ಲ. ಈಗ ನಾಳೆ ಜಗನ್ನಾಥ ದೇವಾಲಯದ ರತ್ನ ಭಂಡಾರದ ಒಳಗಿನ ಕೋಣೆಯನ್ನು ತೆರೆಯಲಾಗುವುದು. ಇನ್ನೂ ಈ ದೇವಾಲಯದ ಸಮಿತಿಯು ಎಲ್ಲಾ ಗಾತ್ರದ ಸರೀಸೃಪಗಳಿಂದ ಬೆದರಿಕೆಗೆ ಹೆದರುತ್ತಿದೆ. ಹಾವಿನ ಭೀತಿಯ ಜೊತೆಗೆ ಶಾಪದ ಭೀತಿಯೂ ಅವರನ್ನು ಕಾಡುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ.
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…