ನವದೆಹಲಿ: ಶಾಲೆಗಳಲ್ಲಿ ಗಲಭೆ, ಧ್ವಂಸಗಳ ಕುರಿತು ಬೋಧಿಸುವ ಅಗತ್ಯವಿಲ್ಲ. ಆದರೆ ಪಠ್ಯಪುಸ್ತಕ ತಿದ್ದುಪಡಿ ಜಾಗತಿಕ ಬದಲಾವಣೆ, ಪರಿಷ್ಕರಣೆಯನ್ನು ಕೇಸರೀಕರಣ ಎಂದು ಕರೆಯಲಾಗದು ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ(ಎನ್‌ಸಿಈಆರ್‌ಟಿ) ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಹೇಳಿದ್ದಾರೆ.
ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಶಾಲಾ ಪಠ್ಯಕ್ರಮದಲ್ಲಿ ಕೇಸರಿಕರಣದ ಆರೋಪಗಳನ್ನು ತಳ್ಳಿಹಾಕಿ, ಗುಜರಾತ್ ಗಲಭೆಗಳು ಹಾಗೂ ಬಾಬ್ರಿ ಮಸೀದಿ ಧ್ವಂಸ ವಿಷಯಗಳನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಮಾರ್ಪಡಿಸಲಾಗಿದೆ ಎಂದರು.
ಹನ್ನೆರಡನೇ ತರಗತಿಯ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕದಲ್ಲಿ ಬಾಬ್ರಿ ಮಸೀದಿಯನ್ನು ಮೂರು ಗೋಪುರದ ಕಟ್ಟಡವೆಂದು ವರ್ಣಿಸಲಾಗಿದೆ. ಅಯೋಧ್ಯೆಯ ಪಾಠವಿದೆ. ಎಲ್.ಕೆ ಅಡ್ವಾನಿಯವರ ನೇತೃತ್ವದಲ್ಲಿ ನಡೆದ ಬಿಜೆಪಿ ರಥಯಾತ್ರೆಯನ್ನು ಉಲ್ಲೇಖಿಸಲಾಗಿದೆ. ಕರ ಸೇವಕರಿಂದ ಬಾಬ್ರಿ ಮಸೀದಿ ಕೆಡವಲಾಗಿದ್ದು, ಆ ಸಂಬಂಧಿತ ಘಟನೆಗಳ ವಿವರ ಕೊಡಲಾಗಿದೆ ಎಂದು ಹೇಳಿದರು.
ಬಿಜೆಪಿಯ ಆಡಳಿತದ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹಾಗೂ ಬಿಜೆಪಯ ವಿಷಾದಗಳ ವಿಷಯಗಳು ಸೇರಿವೆ. ಮೊಘಲರ ಸಾಧನೆಗಳಿಗೆ ಕತ್ತರಿ ಹಾಕಲಾಗಿದ್ದು, ರಾಮಮಂದಿರ ನಿರ್ಮಾಣ ಹಾಗೂ ಹೊಸ ಸಂಸತ್ ಭವನ ನಿರ್ಮಾಣ ವಿಷಯಗಳು ಸೇರಿಕೊಂಡಿವೆ.
ಯಾವುದಾದರೂ ಅಪ್ರಸ್ತುತ ವಿಷಯವಿದ್ದರೆ ಅದನ್ನು ಅಪ್‌ಡೇಟ್ ಮಾಡಬೇಕಾಗುತ್ತದೆ. ಬದಲಾವಣೆ ಮಾಡಬಾರದು ಎನ್ನಲಾಗುವುದಿಲ್ಲ. ನಾವು ಮಕ್ಕಳಿಗೆ ಇತಿಹಾಸ ಹೇಳಿಕೊಡುವುದು ನೈಜ ಜ್ಞಾನವನ್ನು ತುಂಬಲೇ ಹೊರತು ಘರ್ಷಣೆಗೆ ನೂಕುವುದಕ್ಕಲ್ಲ ಎಂದರು.
ರಾಮಮಂದಿರ, ಹೊಸ ಸಂಸತ್ ಭವನದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬಾರದೇಕೆ? ಪ್ರಾಚೀನ ಘಟನೆಗಳ ಜೊತೆಗೆ ಇತ್ತೀಚಿನ ವಿದ್ಯಮಾನವನ್ನು ಮಕ್ಕಳಿಗೆ ತಿಳಿಸುವುದು ನಮ್ಮ ಕರ್ತವ್ಯ ಎಂದು ದಿನೇಶ್ ಪ್ರಸಾದ್ ಸಕ್ಲಾನಿ ಸ್ಪಷ್ಟಪಡಿಸಿದ್ದಾರೆ.
ಹೆಚ್‌ಎನ್‌ಬಿ ಗರ್‌ವಾಲ್ ವಿವಿಯ ಪುರಾತತ್ವ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದ ದಿನೇಶ್ ಪ್ರಸಾದ್ ಅವರನ್ನು 2022 ರಲ್ಲಿ ಎನ್‌ಸಿಇಆರ್‌ಟಿ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಇವರು ಅಧಿಕಾರ ಸ್ವೀಕರಿಸಿದ ನಂತರ ಪಠ್ಯಗಳಲ್ಲಿ ಹಲವು ಬದಲಾವಣೆ ಮಾಡಲಾಗಿದೆ ಎಂದು ಆರೋಪ ಇವರ ಮೇಲಿದೆ.
ಬೆಂಗಳೂರು: ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5.46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕರ್ನಾಟಕಕ್ಕೆ ಮೊದಲ ಬಾರಿ ಶೇ.86.48ರಷ್ಟು ಫಲಿತಾಂಶ ಬಂದಿದೆ…
ದಾವಣಗೆರೆ/ಬಾಗಲಕೋಟೆ: ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.…
ಬೆಂಗಳೂರು: ನಾಡಿನ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ನಡೆಯುತ್ತಿದ್ದ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೈಕೋರ್ಟ್…
ಬೆಂಗಳೂರು: ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಅಧಿಕ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಿಸಿ…
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಜನರಿಗೆ ಆರು ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.…
ಮುಂಬೈ: ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತದ ಧ್ವಜ ಹೊಂದಿರುವ 15,400 ಟನ್ ಎಲ್‌ಪಿಜಿ ಹೊತ್ತ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು…