ದೇಶ- ವಿದೇಶ

ಪ್ರಕರಣಗಳ ಬಾಕಿ ಉಳಿಯುವಿಕೆಯಿಂದ ಸಣ್ಣ, ಮಧ್ಯಮ ಕೈಗಾರಿಕೆಗಳು ಮುಚ್ಚುತ್ತಿವೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೌಲ್

ನವದೆಹಲಿ: ಅಭಿವೃದ್ಧಿಯನ್ನೇ ಕುರುಡಾಗಿ ಧ್ಯಾನಿಸಿದರೆ ಉದ್ಯೋಗ ಸೃಷ್ಟಿಯ ತನ್ನ ಪ್ರಯತ್ನದಲ್ಲಿ ಭಾರತ ಸಾಫಲ್ಯ ಕಾಣಲು ಸಾಧ್ಯವಿಲ್ಲ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು (ಎಂಎಸ್‌ಎಂಇ) ಉತ್ತೇಜಿಸುವ ಮೂಲಕ ಸರ್ವತೋಮುಖ ಬೆಳವಣಿಗೆಗೆ ಮುಂದಾಗುವುದು ಈಗಿನ ಅಗತ್ಯ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ತಿಳಿಸಿದರು.

ವಕೀಲರಾದ ಅಮಿತ್ ಜಾರ್ಜ್ ಮತ್ತು ತಾರಿಕ್ ಖಾನ್ ಅವರು ರಚಿಸಿರುವ ʼಲಾ ರಿಲೇಟಿಂಗ್‌ ಟು ಮೈಕ್ರೊ, ಸ್ಮಾಲ್‌ ಅಂಡ್‌ ಮೀಡಿಯಂ ಎಂಟರ್‌ಪ್ರೈಸ್‌ʼ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂತಹ ಉದ್ದಿಮೆಗಳು ಉದ್ಯೋಗ ಸೃಷ್ಟಿಗೆ ಕಾರಣವಾಗುವುದಲ್ಲದೆ, ದೇಶದ ಶ್ರೀಮಂತ ಮತ್ತು ಬಡ ಪ್ರದೇಶಗಳ ನಡುವಿನ ಅಂತರ ಕಡಿಮೆ ಮಾಡುತ್ತವೆ ಎಂದು ಅವರು ತಿಳಸಿದರು. ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜೀವ್ ಶಕ್ಧೆರ್ ಮತ್ತು ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನ್ಯಾ. ಕೌಲ್‌ ಅವರ ಭಾಷಣದ ಪ್ರಮುಖಾಂಶಗಳು

ಕೇಂದ್ರೀಕೃತ ಕೈಗಾರಿಕೀಕರಣದಲ್ಲಿ ಕುರುಡು ನಂಬಿಕೆ ಇರಿಸುವುದು ಏಕಸ್ವಾಮ್ಯವನ್ನು ಹೆಚ್ಚಿಸುತ್ತದೆ. ಬಹುಶಃ ಅದು ಪ್ರಗತಿಯ ಹಾದಿಯಲ್ಲ.

ತೊಂಬತ್ತರ ದಶಕದ ಸುಧಾರಣೆಗಳು ಅಭಿವೃದ್ಧಿ ಕಾರ್ಯಸೂಚಿಯನ್ನು ಪ್ರೋತ್ಸಾಹಿಸಿದರೂ ನೀತಿ ನಿರೂಪಕರಿಗೆ ಉದ್ಯೋಗ ಸೃಷ್ಟಿ ಪ್ರಮುಖ ಸವಾಲಾಗಿ ಉಳಿದಿದೆ. ಅತಿಸಣ್ಣ ಆರ್ಥಿಕತೆಯಲ್ಲಿ ಒಂದೇ ಗಾತ್ರ ಸರ್ವಾನ್ವಯ ಎಂಬ ಸೂತ್ರ ಎಷ್ಟು ಅಸಮರ್ಥವಾಗಿದೆ ಎಂಬುದನ್ನು ಚೀನಾ ಆರ್ಥಿಕತೆಯಿಂದ ನಾವು ಅರಿಯಬೇಕು.

ಭಾರತ ಒಂದು ಅನನ್ಯ ದೇಶವಾಗಿದ್ದು, ಭೌಗೋಳಿಕವಾಗಿ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಇಲ್ಲಿನ ನೆಲಕ್ಕೆ ಅನುಗಣವಾಗಿ ಪರಿಹಾರ ವಿಶಿಷ್ಟ ರೀತಿಯಲ್ಲಿ ದೊರೆಯಬೇಕು.

ತಮ್ಮ ಪ್ರದೇಶಗಳಲ್ಲಿ ಉದ್ಯೋಗದ ಕೊರತೆಯಿಂದಾಗಿ ಹಳ್ಳಿಗಳಿಂದ ನಗರಗಳಿಗೆ ದೊಡ್ಡ ಪ್ರಮಾಣದಲ್ಲಿ ಜನ ವಲಸೆ ಹೋಗುತ್ತಿದ್ದಾರೆ. ಅವರು ಹಳ್ಳಿಗಳಲ್ಲೇ ಉಳಿದು ತಾವು ಮಾಡುವ ಕೆಲಸದಿಂದ ಹಣ ಗಳಿಸಲು ಅತಿಸಣ್ಣ, ಸಣ್ಣ, ಮಧ್ಯಮ ಉದ್ದಿಮೆಗಳು ಅನುಕೂಲ ಮಾಡಿಕೊಡಬೇಕು. ಅವಕಾಶಗಳು ಇದ್ದಲ್ಲಿ ಯಾರೂ ತಮ್ಮ ಊರುಗಳಿಂದ ದೂರ ಹೋಗುವುದಿಲ್ಲ

ಅಸಮರ್ಥ ವ್ಯಾಜ್ಯ ಪರಿಹಾರ ವಿಧಾನಗಳಿಂದಾಗಿ ಇಂತಹ ಉದ್ದಿಮೆಗಳ ಪ್ರವರ್ಧಮಾನಕ್ಕೆ ಅಡ್ಡಿಯಾಗಿದೆ. ನ್ಯಾಯಾಂಗ ಪರಿಹಾರಕ್ಕೆ ಕೆಲಸ ಮಾಡುವುದು ಶಾಸಕಾಂಗ ಪರಿಹಾರಕ್ಕೆ ಕೆಲಸ ಮಾಡುವಷ್ಟೇ ಮುಖ್ಯ.

ನಿರಂತರವಾಗಿ ಪ್ರಕರಣಗಳು ಬಾಕಿ ಉಳಿಯುತ್ತಿರುವುದು ಎಂಎಸ್‌ಎಂಇ ಬೆಳವಣಿಗೆಗೆ ಅಡ್ಡಿಯಾಗಿದೆ. ವ್ಯಾಜ್ಯ ಇತ್ಯರ್ಥ ವಿಳಂಬವಾಗುತ್ತಿರುವುದರಿಂದ ಸಣ್ಣ ಕಂಪೆನಿಗಳು ಸ್ಥಗಿತವಾಗಿ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ.

ಎಂಎಸ್‌ಎಂಇ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬಹುದೇ ಅಥವಾ ತಾತ್ಕಾಲಿಕ ಆಧಾರದ ಮೇಲೆ ಪರಿಣಿತ ಸದಸ್ಯರೊಂದಿಗೆ ವಿಶೇಷ ನ್ಯಾಯಮಂಡಳಿಗಳನ್ನು ರಚಿಸಬಹುದೇ ಎಂಬ ಕುರಿತು ಚಿಂತಿಸಬೇಕಿದೆ. ಈ ಕುರಿತು ಎಂಎಸ್‌ಎಂಇ ವಲಯದ ಪಾಲುದಾರರೇ ಪರಿಹಾರ ಕಂಡುಕೊಳ್ಳಬೇಕು.

ನ್ಯಾಯಮೂರ್ತಿ ರಾಜೀವ್ ಶಕ್ದೆರ್‌ ಅವರು ಮಾತನಾಡಿ ಎಂಎಸ್‌ಎಂಇಗಳು ಹೊಸ ಪರಿಕಲ್ಪನೆಯಲ್ಲ. ಸ್ವಾತಂತ್ರ್ಯ ದೊರೆತ ಸಮಯದಿಂದಲೇ ಸಣ್ಣ ಕೈಗಾರಿಕೆಗಳ ಚಿಂತನೆ ಬೇರೂರಿದೆ. ಆರ್ಥಿಕತೆಯ ಉದಾರೀಕರಣದವರೆಗೆ ಸಣ್ಣ ಕೈಗಾರಿಕೆಗಳು ರಕ್ಷಾಕವಚಗಳಾಗಿ ಕೆಲಸ ಮಾಡುತ್ತಿದ್ದವು ಎಂದು ಹೇಳಿದರು. ಪುಸ್ತಕದ ಕುರಿತು ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.

ಎಂಎಸ್‌ಎಂಇಗಳ ಅನುಕೂಲಗಳ ಕುರಿತು ಮಾತನಾಡಿದ ಸಿದ್ಧಾರ್ಥ್‌ ಲೂತ್ರಾ 6.33 ಕೋಟಿ ಎಂಎಸ್‌ಎಂಇಗಳು 11 ಕೋಟಿಗೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿವೆ. ನಮ್ಮ ಆರ್ಥಿಕತೆ ಬೆಳೆಯುತ್ತಿದ್ದರೂ, ಉದ್ಯೋಗದ ಪ್ರಮಾಣ ಕಡಿಮೆಯಾಗುತ್ತಿದೆ. ಈ ಸವಾಲಿಗೆ ಪರಿಹಾರವೆಂದರೆ ಎಂಎಸ್‌ಎಂಇಗಳು ಉದ್ಯೋಗಗಳನ್ನು ಜನರ ಬಳಿಗೆ ಒಯ್ಯುವುದಾಗಿದೆ.

andolana

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

11 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

12 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

13 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

15 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

19 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

19 hours ago