ದೇಶ- ವಿದೇಶ

ಶಬರಿಮಲೆ ಯಾತ್ರೆ ಆರಂಭ

ಶಬರಿಮಲೆ : ಹಿಂದೂಗಳ ಶ್ರದ್ದಾ ಧಾರ್ಮಿಕ ಕೇಂದ್ರವಾದ ಪವಿತ್ರ ಶಬರಿಮಲೆಯ ಅಯ್ಯಪ್ಪ ದೇವಾಲಯದ ವಾರ್ಷಿಕ ಮಂಡಲ-ಮಕರವಿಳಕ್ಕು ಯಾತ್ರೆ ಸೋಮವಾರದಿಂದ ಆರಂಭಗೊಂಡಿದೆ.

ಈ ಯಾತ್ರೆಯು ಒಟ್ಟು 41 ದಿನಗಳ ನಡೆಯಲಿದ್ದು, ಶಬರಿಮಲೆಯಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿನ ವೈರಸ್ ಹಬ್ಬಿರುವ ಬೆನ್ನಲ್ಲೇ ಅಯ್ಯಪ್ಪ ಸ್ವಾಮಿ ಭಕ್ತರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಬೇಕೆಂದು ಕೇರಳ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಶಬರಿಮಲೆಗೆ ಆಗಮಿಸುವ ಭಕ್ತರು ನದಿಯಲ್ಲಿ ತೀರ್ಥ ಸ್ನಾನ ಮಾಡುವಾಗ ಮೂಗಿಗೆ ನೀರು ಹೋಗದಂತೆ ಎಚ್ಚರವಹಿಸಬೇಕು. ಕುಡಿಯಲು ಬಿಸಿ ನೀರು, ಆಗಾಗ್ಗೆ ಕೈಗಳನ್ನು ಸ್ವಚ್ಚಗೊಳಿಸುತ್ತಿರುವುದು, ಎಲ್ಲೆಂದರಲ್ಲಿ ಉಗಿಯದಿರುವುದು, ಹಣ್ಣು, ತರಕಾರಿ, ತಿಂದಿ ಪದಾರ್ಥಗಳನ್ನು ಎಲ್ಲೆಂದರಲ್ಲಿ ತಿನ್ನಬಾರದೆಂದು ಸೂಚಿಸಿದೆ.

ಜೊತೆಗೆ ವಯಸ್ಸಾದವರು, ಹಿರಿಯರು ಬೆಟ್ಟ ಹತ್ತುವಾಗ ಸುಸ್ತಾದರೆ ಎಲ್ಲಿ ಸಾಧ್ಯವೇ ಅಲ್ಲಿಯೇ ವಿಶ್ರಾಂತಿ ಪಡೆಯಬೇಕು. ತಾತ್ಕಾಲಿಕವಾಗಿ ನಿರ್ಮಾಣ ಮಾಡಿರುವ ಶೌಚಾಲಯಗಳನ್ನು ಬಳಸುವುದು ಸೇರಿದಂತೆ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಸೂಚಿಸಲಾಗಿದೆ.

ಇದನ್ನು ಓದಿ: ಮೈಸೂರು| ಶಬರಿಮಲೆ ಯಾತ್ರಾರ್ಥಿಗಳಿಗೆ ಉಚಿತ ಆಂಬುಲೆನ್ಸ್ ವ್ಯವಸ್ಥೆ

ಎರಡು ತಿಂಗಳ ಕಾಲ ನಡೆಯುವ ಈ ವಾರ್ಷಿಕ ತೀರ್ಥಯಾತ್ರೆ ಜನವರಿ 26ರವರೆಗೆ ಮುಂದುವರಿಯುತ್ತದೆ. ಮೊದಲ ದಿನವೇ ಹೆಚ್ಚಿನ ಸಂಖ್ಯೆಯ ಭಕ್ತರು ಪವಿತ್ರ ಬೆಟ್ಟದ ದೇವಾಲಯಕ್ಕೆ ಆಗಮಿಸಿದ್ದಾರೆ.

ಅಧಿಕಾರಿಗಳು ಮರಕೂಟಂನಿಂದ ಸನ್ನಿಧಾನಂವರೆಗಿನ ಚಂದ್ರನಂದನ್ ರಸ್ತೆಯ ಉದ್ದಕ್ಕೂ ಚಾರಣ ಮಾರ್ಗ ಮತ್ತು ಬೆಂಚುಗಳೊಂದಿಗೆ ಸಿದ್ಧರಾಗಿದ್ದಾರೆ.ಭಕ್ತರು ವಿಶ್ರಾಂತಿ ಪಡೆಯಲು ಹೆಚ್ಚುವರಿ ಆಸನ ಸೌಲಭ್ಯಗಳನ್ನು ಒದಗಿಸಲು ವಲಿಯನಾಡಪಂದಲ್ ಮತ್ತು ಸರಮಕುತಿ ನಡುವಿನ ಸರತಿ ಸಾಲಿನ ಸಂಕೀರ್ಣದ ಎರಡೂ ಬದಿಗಳಲ್ಲಿ 400 ಮೀಟರ್ ತಡೆಗೋಡೆಯನ್ನು ನಿರ್ಮಿಸಲಾಗಿದೆ.

ಇದಲ್ಲದೆ, ಪಂಬಾ ಮತ್ತು ಸನ್ನಿಧಾನಂ ನಡುವೆ ಬಿಸಿ ಕುಡಿಯುವ ನೀರಿನ ಕಿಯೋಸ್ಕ್‍ಗಳು ಮತ್ತು 56 ಶುಂಠಿ ನೀರು ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಯಾತ್ರಾರ್ಥಿಗಳ ದೈನಂದಿನ ಸಂಖ್ಯೆಯ ಮೇಲೆ ಮಿತಿ ವಿಧಿಸಲಾಗಿದೆ. ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಒಟ್ಟು 90,000-70,000 ಭಕ್ತರಿಗೆ ಮತ್ತು ಸ್ಪಾಟ್ ಬುಕಿಂಗ್ ಮೂಲಕ 20,000 ಭಕ್ತರಿಗೆ ಪ್ರತಿದಿನ ಅವಕಾಶ ನೀಡಲಾಗುವುದು ಎಂದು ಪಿಟಿಐ ವರದಿ ಮಾಡಿದೆ.

ಆಂದೋಲನ ಡೆಸ್ಕ್

Recent Posts

ವೈರಲ್‌ ಹುಡುಗಿ ʻಮೊನಾಲಿಸಾʼ ಮದುವೆಗೆ ತಂದೆ ವಿರೋಧಿಸಿದ್ದೇಕೆ….. ಯಾರಿ ಈ ಹುಡುಗ?

ತಿರುವನಂತಪುರಂ : 2025ರ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ವೈರಲ್ ಸ್ಟಾರ್ ಮೊನಾಲಿಸಾ ಭೋಸ್ಲೆ ಅವರು ತಮ್ಮ ಪ್ರಿಯಕರ ಮುಹಮ್ಮದ್…

14 mins ago

32 ವರ್ಷಗಳ ನಂತರ ನಾಗರತ್ನಮ್ಮ ಸ್ಮಾರಕಕ್ಕೆ ಅಭಿವೃದ್ಧಿ ಭಾಗ್ಯ

ಸಿಎಂಗೆ ಶಾಸಕ ಗಣೇಶ್ ಪ್ರಸಾದ್ ಮನವಿ; ಸ್ಮಾರಕ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ:…

46 mins ago

ದೇಶಾದ್ಯಂತ ಎಸ್ಮಾ ಜಾರಿ : ಗ್ಯಾಸ್‌ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು!

ಹೊಸದಿಲ್ಲಿ : ಜಾಗತಿಕ ರಾಜಕೀಯ ವಿದ್ಯಮಾನಗಳು ಮತ್ತು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಯುದ್ಧದ ಭೀತಿಯ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ದೇಶದ ಇಂಧನ…

55 mins ago

ಸಫಾರಿಗೆ ಮೊಬೈಲ್‌ ನಿಷೇಧ ; ಪ್ರವಾಸಿಗರ ಬೇಸರ

ವನ್ಯಜೀವಿ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುವ ಅವಕಾಶ ಇಲ್ಲದೆ ಪರಿತಾಪ; ನಿಷೇಧಕ್ಕೆ ಕೆಲವರ ಸಹಮತ • ಚಿರಂಜೀವಿ ಸಿ. ಹುಲ್ಲಹಳ್ಳಿ…

3 hours ago

ಓದುಗರ ಪತ್ರ | ಮೆಜೆಸ್ಟಿಕ್ ಸುಸ್ಥಿರ ನಗರದ ಹೊಸ ದಿಕ್ಕೂಚಿಯಾಗಲಿ

ಬೆಂಗಳೂರಿನ ಹೃದಯಭಾಗದ 32 ಎಕರೆ ವಿಸ್ತೀರ್ಣದಲ್ಲಿ ಪ್ರಾಜೆಕ್ಟ್ ಮೆಜೆಸ್ಟಿಕ್ ಅಡಿಯಲ್ಲಿ ಸಿಂಗಾಪುರ ಮಾದರಿಯ ಇಂಟರ್ ಮಾಡೆಲ್ ಟ್ರಾನ್ಸಿಟ್ ಹಬ್ ನಿರ್ಮಿಸುವ…

4 hours ago

ಓದುಗರ ಪತ್ರ | ಮೆಜೆಸ್ಟಿಕ್ ಸುಸ್ಥಿರ ನಗರದ ಹೊಸ ದಿಕ್ಕೂಚಿಯಾಗಲಿ

ಬೆಂಗಳೂರಿನ ಹೃದಯಭಾಗದ 32 ಎಕರೆ ವಿಸ್ತೀರ್ಣದಲ್ಲಿ ಪ್ರಾಜೆಕ್ಟ್ ಮೆಜೆಸ್ಟಿಕ್ ಅಡಿಯಲ್ಲಿ ಸಿಂಗಾಪುರ ಮಾದರಿಯ ಇಂಟರ್ ಮಾಡೆಲ್ ಟ್ರಾನ್ಸಿಟ್ ಹಬ್ ನಿರ್ಮಿಸುವ…

4 hours ago