ದೇಶ- ವಿದೇಶ

ಜಾತಿ ಗಣತಿಗೆ ಆರ್‌ಎಸ್‌ಎಸ್‌ ಬೆಂಬಲ

ಪಾಲಕ್ಕಾಡ್:‌ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಒತ್ತಾಯಿಸುವಂತೆ ಜಾತಿ ಗಣತಿ ವಿಚಾರವಾಗಿ ಆರ್‌ಎಸ್‌ಎಸ್‌ ಮೊದಲ ಬಾರಿಗೆ ಪ್ರತಿಕ್ರಿಯಿಸಿದೆ. ಜಾತಿ ಆಧಾರಿತ ಗಣತಿಗೆ ಆರ್‌ಎಸ್‌ಎಸ್‌ ಬೆಂಬಲ ಸೂಚಿಸಿದೆ.

ಕೇರಳದ ಪಾಲಕ್ಕಾಡ್‌ ನಲ್ಲಿ ನಡೆದ ʻಸಮನ್ವೇ ಬೈಠಕ್‌ʼ ಎಂಬ ಮೂರು ದಿನಗಳ ಸಮನ್ವಯ ಸಮಾವೇಶದ ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್‌ ಅಖಿಲ ಭಾರತೀಯ ಪ್ರಚಾರ ಪ್ರಮುಖ ಸುನೀಲ್‌ ಅಂಬೇಕರ್‌, ಜಾತಿ ಆಧಾರತಿಯ ಗಣತಿಗೆ ಬೆಂಬಲವಿದೆ. ಆದರೆ, ಇದು ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕೇ ವಿನಾ, ಚುನಾವಣಾ ಲಾಭಕ್ಕಾಗಿ ದುರ್ಬಳಕೆಯಾಗಬಾರದು ಎಂದು ಹೇಳಿದ್ದಾರೆ.

ಮುಂದುವರೆದು, ಜಾತಿ ಗಣತಿ ಬಹಳ ಸೂಕ್ಷ್ಮ ಸಂಗತಿ. ಹಿಂದೂ ಸಮಾಜದಲ್ಲಿ ನಾವು ಜಾತಿ ಹಾಗೂ ಜಾತಿ ಸಂಬಂಧಗಳ ಸೂಕ್ಷ್ಮ ಸಂಗತಿ ಹೊಂದಿದ್ದೇವೆ. ಹಾಗೆಯೇ ಇದು ನಮ್ಮ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಮುಖ್ಯವಾಗಿದೆ. ಇದನ್ನು ಬಹಳ ಗಂಭೀರವಾಗಿ ನಿಭಾಯಿಸಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸರ್ಕಾರಕ್ಕೆ ಅಂಕಿ ಅಂಶಗಳು ಅಗತ್ಯವಾಗಿರುತ್ತದೆ. ಈ ಹಿಂದೆಯೂ ಇಂತಹ ಚಟುವಟಿಕೆಗಳನ್ನು ನಡೆಸಲಾಗಿತ್ತು ಎಂದು ಹೇಳಿದ್ದಾರೆ.

ಪರಿಣಾಮಕಾರಿ ನೀತಿ ನಿರೂಪಣೆಗಾಗಿ ಜಾತಿ ಗಣತಿಯನ್ನು ನಡೆಸಲು ಬಯಸುತ್ತಿರುವ ಕಾಂಗ್ರೆಸ್‌, ಸಮಾಜವಾಗಿ ಪಕ್ಷ ಮತ್ತು ಇತರ ಇಂಡಿಯಾ ಒಕ್ಕೂಟ ಮಿತ್ರಪಕ್ಷಗಳ ಒತ್ತಾಯದ ನಡುವೆ ಸುನೀಲ್ ಅಂಬೇಕರ್‌ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

 

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಧೋನಿ ಲಭ್ಯ?

ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ಸ್ನಾಯು ಸೆಳೆತದಿಂದ…

2 mins ago

24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಜೆಟ್‌ಗಳನ್ನು ಹೊಡೆದುರುಳಿಸಿದ್ದೇವೆ : ಇರಾನ್

ಟೆಹ್ರಾನ್ : ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಸ್ಟೆಲ್ತ್…

34 mins ago

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು : ಮುಖ್ಯಮಂತ್ರಿ ಟೀಕೆ

ಬಾಗಲಕೋಟೆ : ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.…

49 mins ago

ಹೊಸ ಸುಂಕ ಸಾರಿದ ಅಮೆರಿಕ, ಈ ಬಾರಿ ಯಾವುದರ ಮೇಲೆ ಟ್ರಂಪ್‌ ಕಣ್ಣು?

ವಾಷಿಂಗ್ಟನ್ : ಇರಾನ್ ವಿರುದ್ಧದ ಯುದ್ಧದ ನಡುವೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಸದಾಗಿ ಸುಂಕ ಸಮರ ಆರಂಭಿಸಿದ್ದಾರೆ.…

54 mins ago

HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಲ್ಲ

ಬೆಂಗಳೂರು : ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರೆಜಿಸ್ಟ್ರೇಷನ್ ಪ್ಲೇಟ್ (HSRP) ಅಳವಡಿಸುವುದು ಇನ್ನು ಮುಂದೆ ಕಡ್ಡಾಯವಿರುವುದಿಲ್ಲ ಎಂದು ಕರ್ನಾಟಕ…

1 hour ago

ಕೊಡಗು | ಟ್ರೆಕ್ಕಿಂಗ್ ಹೊರಟಿದ್ದ 36 ವರ್ಷದ ಮಹಿಳೆ ನಾಪತ್ತೆ

ಮಡಿಕೇರಿ : ಕೊಡಗು ಜಿಲ್ಲೆಯ ಅತ್ಯುನ್ನತ ಶಿಖರವಾದ ತಾಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ಮಾಡಲು ಹೊರಟಿದ್ದ 36 ವರ್ಷದ ಮಹಿಳೆ ಶರಣ್ಯ…

3 hours ago