ವಾಷಿಂಗ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಾಷಿಂಗ್ಟನ್‌ನ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿ ಆರ್‌ಎಸ್‌ಎಸ್ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.
ಆರ್‌ಎಸ್‌ಎಸ್ ಕೆಲ ಧರ್ಮಗಳು, ಭಾಷೆಗಳು ಮತ್ತು ಸಮುದಾಯಗಳನ್ನು ಇತರರಿಗಿಂತ ಕೀಳು ಎಂದು ಪರಿಗಣಿಸುತ್ತದೆ ಎಂದು ಟೀಕಿಸಿದ ರಾಹುಲ್ ಗಾಂಧಿ ಭಾರತದಲ್ಲಿ ಹೋರಾಟ ಇದರ ಬಗ್ಗೆಯೇ ಹೊರತು ರಾಜಕೀಯದ ಬಗ್ಗೆ ಅಲ್ಲ ಎಂದು ಹೇಳಿದರು.
ದೇಶದಲ್ಲಿ ಹೋರಾಟ ರಾಜಕೀಯಕ್ಕೆ ಸಂಬಂಧಿಸಿದ್ದು ಎಂದು ಮೇಲ್ನೋಟಕ್ಕೆ ಕಾಣುತ್ತದೆ ಅಷ್ಟೇ. ಆದರೆ ಹೋರಾಟ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಎಂದ ರಾಹುಲ್ ಗಾಂಧಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ಸಿಖ್ ಧರ್ಮೀಯರೊಬ್ಬರನ್ನು ಮಾತನಾಡಿಸಿ ತನ್ನ ಹೆಸರನ್ನು ಹೇಳುವಂತೆ ಕೇಳಿದರು.
ಟೋಪಿ ತೊಟ್ಟ ಅಣ್ಣ ನಿಮ್ಮ ಹೆಸರೇನು ಎಂದು ಕೇಳಿದ ರಾಗಾ ಭಾರತದಲ್ಲಿ ಸಿಖ್ ಜನರು ಪೇಟವನ್ನು ಧರಿಸಲು ಅನುಮತಿ ನೀಡಬಹುದೇ ಬೇಡವೇ ಅಥವಾ ಅವರು ಗುರುದ್ವಾರಕ್ಕೆ ಹೋಗುವುದು ಸಾಧ್ಯವೇ ಎಂಬುದಕ್ಕಾಗಿ ಹೋರಾಟಗಳು ನಡೆದಿವೆ. ಇದು ಕೇವಲ ಒಂದು ಧರ್ಮದಲ್ಲಿ ಮಾತ್ರವಲ್ಲ ಎಲ್ಲಾ ಧರ್ಮದಲ್ಲೂ ಇಂತಹ ಹೋರಾಟಗಳಿವೆ ಎಂದರು.
ಆರ್‌ಎಸ್‌ಎಸ್ ಕುರಿತು ಮಾತನಾಡಿದ ಅವರು ಕೆಲವು ರಾಜ್ಯಗಳು ಇತರೆ ರಾಜ್ಯಗಳಿಗಿಂತ ಕೀಳು, ಕೆಲವು ಧರ್ಮಗಳು ಇತರೆ ಧರ್ಮಗಳಿಗಿಂತ ಕೀಳು, ಕೆಲವು ಸಮುದಾಯಗಳು ಇತರೆ ಸಮುದಾಯಗಳಿಗಿಂತ ಕೀಳು ಎಂದು ಹೇಳುವುದು ಆರ್‌ಎಸ್‌ಎಸ್‌ನ ಸಿದ್ಧಾಂತವಾಗಿದೆ ಎಂದರು. ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಇಂತಹ ಟೀಕೆಗಳು, ಹೋರಾಟಗಳೇ ಕಂಡುಬರಲಿವೆ ಹೊರತು ಸೈದ್ಧಾಂತಿಕ ಹೋರಾಟಗಳಲ್ಲ ಎಂದರು.
ಅಲ್ಲದೇ ಹೋರಾಟ ನಾವು ಯಾವ ರೀತಿಯ ಭಾರತವನ್ನು ನಿರ್ಮಿಸಲಿದ್ದೇವೆ ಎಂಬುದರ ಕುರಿತು ಇರಬೇಕು. ಜನರು ಯಾವುದೇ ಪ್ರದೇಶಕ್ಕೆ ಸೇರಿದವರಾಗಿದ್ದರೂ, ಅವರಿಗೆ ತಮ್ಮದೇ ಆದ ಇತಿಹಾಸವಿದೆ, ತಮ್ಮದೇ ಆದ ಸಂಪ್ರದಾಯವಿದೆ, ತಮ್ಮದೇ ಆದ ಭಾಷೆ ಇದೆ. ಅವುಗಳೆಲ್ಲವೂ ಇತರರಂತೆ ಮುಖ್ಯ ಎಂದು ರಾಗಾ ಹೇಳಿದರು.
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ಎಂಎಲ್‌ಸಿ ಸಿ.ಟಿ. ರವಿ…
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್…
ಮೈಸೂರು: ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡುತ್ತಿರುವವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ. ಮುಡಾ ಪ್ರಕರಣಕ್ಕೆ…
ನವದೆಹಲಿ: ಸಂಸತ್ ಭವನದ ಸಂಕೀರ್ಣದಲ್ಲಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ…
ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ…
ಬೆಳಗಾವಿ: ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ…