kailasa manasa sarovara yatra resumption
ನವದೆಹಲಿ: ಕೊರೊನಾ ವೈರಸ್ ಪರಿಣಾಮದಿಂದಾಗಿ ಸರಿಸುಮಾರು ಕಳೆದ ಐದು ವರ್ಷಗಳಿಂದ ನಿಂತು ಹೋಗಿದ್ದ ಕೈಲಾಸ ಮಾನಸ ಸರೋವರ ಯಾತ್ರೆ ಇದೀಗ ಮತ್ತೆ ಜೂನ್.30 ರಿಂದ ಪುನರಾರಂಭವಾಗಲಿದೆ.
ಉತ್ತರಾಖಂಡ ಸರ್ಕಾರ ಮತ್ತು ಭಾರತೀಯ ವಿದೇಶಾಂಗ ಸಚಿವಾಲಯದ ಆಶ್ರಯದಲ್ಲಿ ಯಾತ್ರೆಯ ಕುರಿತು ನಡೆದ ಸಭೆಯಲ್ಲಿ, ತೀರ್ಥಯಾತ್ರೆಯನ್ನು ಪುನರಾರಂಭಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.
ಕೈಲಾಸ ಮಾನಸ ಸರೋವರ ಯಾತ್ರೆಯು ಉತ್ತರಾಖಂಡದ ಪಿಥೋರಗಢ ಜಿಲ್ಲೆಯಲ್ಲಿ 17,000 ಅಡಿ ಎತ್ತರದಲ್ಲಿರುವ ಲಿಪುಲೇಖ್ ಪಾಸ್ ಮೂಲಕ ಹಾದು ಹೋಗಲಿದೆ. ಹಿಂದೂ ನಂಬಿಕೆಗಳ ಪ್ರಕಾರ ಕೈಲಾಸ ಪರ್ವತವು ಶಿವನ ವಾಸಸ್ಥಾನವಾಗಿದ್ದು, ಅದನ್ನು ಪ್ರದಕ್ಷಿಣೆ ಹಾಕಿ ಮಾನಸ ಸರೋವರದಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ.
ಪ್ರತಿ ವರ್ಷ ಆಯೋಜಿಸಲಾಗುತ್ತಿದ್ದ ಈ ಯಾತ್ರೆಯನ್ನು 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲಾಗಿತ್ತು. ಅಂದಿನಿಂದ ಅದನ್ನು ನಡೆಸಲು ಸಾಧ್ಯವಾಗಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಪ್ರಯತ್ನದಿಂದಾಗಿ ಈ ವರ್ಷ ಯಾತ್ರೆ ಪುನರಾರಂಭಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಜೂನ್.30ರಂದು ದೆಹಲಿಯಿಂದ ಯಾತ್ರೆ ಪ್ರಾರಂಭವಾಗಲಿದ್ದು, ತಲಾ 50 ಜನರ ಐದು ಗುಂಪುಗಳಿದ್ದು, ಒಟ್ಟು 250 ಭಕ್ತರು ಭಾಗವಹಿಸಲಿದ್ದಾರೆ. ಕೈಲಾಸ ಮಾನಸ ಸರೋವರ ಯಾತ್ರೆಯ ಮೊದಲ ಗುಂಪು ಜುಲೈ.10 ರಂದು ಲಿಪುಲೇಖ್ ಪಾಸ್ ಮೂಲಕ ಚೀನಾವನ್ನು ಪ್ರವೇಶಿಸಲಿದ್ದು, ಕೊನೆಯ ಗುಂಪು ಆಗಸ್ಟ್.22ರಂದು ಚೀನಾದಿಂದ ಭಾರತಕ್ಕೆ ತೆರಳಲಿದೆ.
ಪ್ರತಿ ತಂಡವು ದೆಹಲಿಯಿಂದ ಹೊರಟು ಉತ್ತರಾಖಂಡದ ಚಂಪಾವತ್ ಜಿಲ್ಲೆಯ ತನಕಪುರದಲ್ಲಿ ಒಂದು ರಾತ್ರಿ, ಪಿಥೋರಗಢ ಜಿಲ್ಲೆಯ ಧಾರ್ಚುಲಾದಲ್ಲಿ ಒಂದು ರಾತ್ರಿ, ಗುಂಜಿಯಲ್ಲಿ ಎರಡು ರಾತ್ರಿ ಮತ್ತು ನಭಿದಂಗ್‍ನಲ್ಲಿ ಎರಡು ರಾತ್ರಿ ತಂಗುವ ಮೂಲಕ ಚೀನಾದ ತಕ್ಲಕೋಟ್‍ಗೆ ಪ್ರವೇಶಿಸಲಿದೆ.
ಕೈಲಾಸಕ್ಕೆ ಭೇಟಿ ನೀಡಿದ ನಂತರ, ಪ್ರಯಾಣಿಕರು ಚೀನಾದಿಂದ ಹೊರಟು ಪಿಥೋರಗಢ ಜಿಲ್ಲೆಯ ಬುಂಡಿಯಲ್ಲಿ ಒಂದು ರಾತ್ರಿ, ಚೌಕೋರಿಯಲ್ಲಿ ಒಂದು ರಾತ್ರಿ ಮತ್ತು ಅಲ್ಮೋರಾದಲ್ಲಿ ಒಂದು ರಾತ್ರಿ ತಂಗುವ ಮೂಲಕ ದೆಹಲಿ ತಲುಪಲಿದ್ದಾರೆ. ಹೀಗಾಗಿ, ಪ್ರತಿ ತಂಡವು ಒಟ್ಟು 22 ದಿನಗಳವರೆಗೆ ಪ್ರಯಾಣಿಸುತ್ತದೆ. ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗುವ ಎಲ್ಲಾ ಯಾತ್ರಿಕರ ಆರೋಗ್ಯ ತಪಾಸಣೆಯನ್ನು ಮೊದಲು ದೆಹಲಿಯಲ್ಲಿ ಮತ್ತು ನಂತರ ಗುಂಜಿಯಲ್ಲಿ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…
ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…
ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…
ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…
ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…