ನವದೆಹಲಿ: ಲೋಕಸಭೆ ಸಂಸತ್ತಿನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯ ಭಾಷಣ ಆಡಳಿತ ಪಕ್ಷಗಳಿಗೆ ನುಂಗಲಾದ ತುತ್ತಾಗಿದೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ವೇಳೆ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಹಸ್ತಲಾಘವ ಮಾಡುವ ವೇಳೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ಮೋದಿಯವರಿಗೆ ತಲೆ ಬಾಗಿಸಿದ್ದನ್ನು ರಾಹುಲ್ ಪ್ರಶ್ನಿಸಿದರು. ಈ ವೇಳೆ ಓಂ ಬಿರ್ಲಾ ಹಾಗೂ ರಾಹುಲ್ ನಡುವೆ ಮಾತಿನ ಚಕಮಕಿ ನಡೆಯಿತು.
ಲೋಕಸಭಾ ಸ್ಪೀಕರ್ ಆಯ್ಕೆ ದಿನವನ್ನು ಉಲ್ಲೇಖಿಸಿ, ನಾನು ನಿಮ್ಮೊಂದಿಗೆ ಕೈಕುಲುಕಿದಾಗ ನೀವು ನೇರವಾಗಿ ನಿಂತು ನನ್ನ ಕೈಕುಲುಕಿದ್ದೀರಿ. ಆದರೆ ಮೋದಿಜಿ ಕೈಕುಲುಕಿದಾಗ ತಲೆಬಾಗಿ ನಮಸ್ಕರಿಸಿ ಕೈಕುಲುಕಿದ್ದೀರಿ ಎಂದು ಸ್ಪೀಕರ್ ಓಂ ಬಿರ್ಲಾ ಅವರನ್ನು ರಾಹುಲ್ ಪ್ರಶ್ನಿಸಿದ್ರು.
ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಪೀಕರ್, ಮೋದಿ ಅವರು ನಮಗಿಂತ ಹಿರಿಯರು, ಹಿರಿಯರಿಗೆ ತಲೆಬಾಗಿ ನಮಸ್ಕರಿಸಿ ಗೌರವ ನೀಡುವುದು ನಮ್ಮ ಸಂಸ್ಕೃತಿಯಾಗಿದೆ. ನಾನು ಈ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಅನುಸರಿಸುತ್ತೇನೆ. ಹಿರಿಯರಿಗೆ ನಮಸ್ಕರಿಸುವುದು ಹಾಗೂ ಅಗತ್ಯವಿದ್ದರೆ ಅವರ ಪಾದಗಳನ್ನು ಮುಟ್ಟುವುದು ಕೂಡ ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂದರು.
ಸ್ಪೀಕರ್‌ನ ಈ ಮಾತಿಗೆ ಪ್ರತಿಕ್ರಿಯಿಸಿದ ರಾಗ, ಸ್ಪೀಕರ್ ಅವರ ಮಾತನ್ನು ಗೌರವಿಸುತ್ತೇನೆ. ಆದರೆ ಈ ಸದನದಲ್ಲಿ ನಿಮಗಿಂತ ದೊಡ್ಡವರು ಯಾರಿಲ್ಲ. ಇಲ್ಲಿ ನಿಮ್ಮ ಮಾತೇ ಕೊನೆಯದು. ಎಲ್ಲರೂ ಕೂಡ ನಿಮ್ಮನ್ನು ಗೌರವಿಸಬೇಕು. ಇಡೀ ಪ್ರತಿಪ್ರಕ್ಷಗಳು ನಿಮ್ಮ ಮುಂದೆ ತಲೆಬಾಗುತ್ತವೆ. ಸದನದಲ್ಲಿ ನಿಷ್ಪಕ್ಷಪಾತವಾಗಿರುವುದು ಮುಖ್ಯ ಎಂದು ಹೇಳಿದ್ದಾರೆ.
ಮೈಸೂರು: ರಾಜ್ಯ ಸರ್ಕಾರ ಗ್ಯಾರಂಟಿ ನಿಲ್ಲಿಸಲು ಕಾರಣ ಹುಡುತ್ತಿದ್ದು, ಶೇಕಡಾ 15ರಷ್ಟು ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿ ಮಧ್ಯಮ…
ಪೋರ್ ಬಂದರ್: ಗುಜರಾತ್ನ ಪೋರ್ ಬಂದರ್ನಲ್ಲಿ ಎಎಲ್ಎಚ್ ಧ್ರುವ್ ಎಂಬ ಹೆಸರಿನ ಭಾರತೀಯ ಕರಾವಳಿ ಪಡೆ ಹೆಲಿಕಾಪ್ಟರ್ ಪತನಗೊಂಡಿದ್ದು, ಮೂವರು…
ನವದೆಹಲಿ: ಉತ್ತರ ಪ್ರದೇಶದ ಸಾಹಿಬಾಬಾದ್ನಿಂದ ದೆಹಲಿಯ ನ್ಯೂ ಅಶೋಕ್ ನಗರ ನಿಲ್ದಾಣದವರೆಗೆ ನಮೋ ಭಾರತ್ ರೈಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ…
ಬೆಂಗಳೂರು: ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಏರಿಕೆಯ ಬೆನ್ನಲ್ಲೇ ಇದೀಗ ಆಟೋರಿಕ್ಷಾ ಪ್ರಯಾಣ ದರ ಕೂಡ ಏರಿಕೆ ಮಾಡಬೇಕೆಂದು…
ಆರೋಪ ಮಾಡಿದರೆ ಸಾಬೀತು ಮಾಡಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆ: ವಿರೋಧ ಪಕ್ಷಗಳದ್ದು ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ದಾಖಲಾತಿಗಳ ಸಮೇತ…
ಬೆಂಗಳೂರು : ಕಲಾಸಕ್ತರು ಚಿತ್ರಸಂತೆಗೆ ಭೇಟಿ ನೀಡಿ ಕಲಾಕೃತಿಯನ್ನು ಕೊಂಡು ಕಲಾವಿದರಿಗೆ ಬೆಂಬಲ ನೀಡಬೇಕು. ಮನೆಯಲ್ಲಿ ಕಲಾಕೃತಿಯಿದ್ದರೆ ಚಿತ್ರ ಸಂತೆ ಏರ್ಪಾಡು…