ದೇಶ- ವಿದೇಶ

ಮೇಕ್‌ ಇನ್‌ ಇಂಡಿಯಾ ವಿರುದ್ಧ ರಾಹುಲ್‌ ಗಾಂಧಿ ಕಿಡಿ

ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮೇಕ್‌ ಇನ್‌ ಇಂಡಿಯಾ ವಿರುದ್ಧ ಕಿಡಿಕಾರಿದ್ದಾರೆ.

ಸಂಸತ್‌ ಭವನದಲ್ಲಿ ಇಂದು(ಫೆಬ್ರವರಿ.3) ಭಾಷಣ ಮಾಡಿದ ಅವರು, ಕೇಂದ್ರ ಬಜೆಟ್‌ ಮಂಡಿಸುವ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣದಲ್ಲಿ ಹೊಸದೇನು ಇಲ್ಲ. ಅವರು ಕಷ್ಟಪಟ್ಟು ಭಾಷಣ ಮಾಡಿದ್ದಾರೆ ಅಷ್ಟೇ. ಅವರು ಹಳೇಯ ವಿಚಾರಗಳನ್ನೇ ಮತ್ತೆ ಉಚ್ಚರಿಸಿದ್ದು, ರಾಷ್ಟ್ರಪತಿ ಅವರ ಭಾಷಣದಲ್ಲಿ ಹೊಸ ವಿಷಯವೇ ಇರಲಿಲ್ಲ ಎಂದರು.

ಕೇಂದ್ರ ಸರ್ಕಾರ ಮೇಕ್‌ ಇನ್‌ ಇಂಡಿಯಾ ಎಂದು ಹೇಳುತ್ತದೆ ಅಷ್ಟೇ. ಆದರೆ ಉತ್ಪಾದನೆಯಲ್ಲಿ ಭಾರತ ದೇಶ ಹಿಂದುಳಿದಿದೆ. ನಿರುದ್ಯೋಗ ನಿವಾರಣೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಉದ್ಯೋಗ ಸೃಷ್ಠಿಸುವಲ್ಲಿ ಕ್ರಮ ಕೈಗೊಂಡಿಲ್ಲ. ಇನ್ನೂ ಉತ್ಪಾದನಾ ಕ್ಷೇತ್ರದಲ್ಲಿ ವಿಫಲವಾಗಿದ್ದು, ಚೀನಾದಲ್ಲಿ ಉತ್ಪಾದನೆ ಗುಣಮಟ್ಟ ಚೆನ್ನಾಗಿದೆ. ಆದರೆ ಭಾರತದಲ್ಲಿ ಉತ್ಪಾದನೆ ಗುಣಮಟ್ಟ ಚೆನ್ನಾಗಿಲ್ಲ ಎಂದು ಆರೋಪಿಸಿದರು.

ಇನ್ನೂ ರಾಹುಲ್‌ ಗಾಂಧಿ ಅವರ ಭಾಷಣಕ್ಕೆ ಎನ್‌ಡಿಎ ಸರ್ಕಾರದ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅರ್ಚನ ಎಸ್‌ ಎಸ್

Recent Posts

ಇಂಧನ ಯೋಜನೆಗಳ ಭೂ ಪರಿವರ್ತನೆ ಇನ್ಮುಂದೆ ಆಟೋಮ್ಯಾಟಿಕ್

ಬೆಂಗಳೂರು : ರಾಜ್ಯದಲ್ಲಿ ಸುಲಲಿತ ವ್ಯವಹಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಅಗತ್ಯ ಇರುವ ಭೂಮಿಯ ಸ್ವಯಂ…

15 mins ago

ಜ.25 ರಂದು ಮೈಸೂರಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ

ಮೈಸೂರು : ಇಲ್ಲಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜ.25 ರಂದು ಬೆಳಗಿನ ಜಾವ 5.30ಕ್ಕೆ 108 ಸಾಮೂಹಿಕ ಸೂರ್ಯ ನಮಸ್ಕಾರ…

31 mins ago

ಕಾಡ್ಗಿಚ್ಚು ತಡೆಗೆ ಮುನ್ನೆಚ್ಚರಿಕೆ ವಹಿಸಿ : ಅರಣ್ಯಾಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು : ರಥಸಪ್ತಮಿಯ ನಂತರ ಬಿಸಿಲು ಹೆಚ್ಚಾಗಿ ಕಾಡ್ಗಿಚ್ಚಿನ ಅಪಾಯವೂ ಹೆಚ್ಚುವ ಕಾರಣ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು…

42 mins ago

ಸಿಲಿಕಾನ್‌ ಸಿಟಿಗೆ ಟ್ರಾಫಿಕ್‌ ಹೊರೆ : ಬೆಂಗಳೂರು ವಿಶ್ವದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಹೊಂದಿರುವ 2ನೇ ನಗರ

ಬೆಂಗಳೂರು : ಸಿಲಿಕಾನ್ ಸಿಟಿ ಎಂಬ ಖ್ಯಾತಿಗೆ ಒಳಗಾಗಿರುವ ರಾಜ್ಯ ರಾಜಧಾನಿ ಬೆಂಗಳೂರು ಇದೀಗ ವಿಶ್ವದಲ್ಲೇ ಅತಿ ಹೆಚ್ಚು ವಾಹನ…

49 mins ago

ಮೈಸೂರಿನ ಒರಿಜಿನಲ್‌ ಮೈಲಾರಿ ಹೋಟೆಲ್‌ ಇದೀಗ ಬೆಂಗಳೂರಲ್ಲೂ ಲಭ್ಯ

ಬೆಂಗಳೂರು : ಮೈಸೂರಿನ ಐತಿಹಾಸಿಕ ರುಚಿಯನ್ನು ಹೊತ್ತು ಬಂದಿರುವ ಪ್ರಸಿದ್ಧ ಒರಿಜಿನಲ್ ವಿನಾಯಕ ಮೈಲಾರಿ-1938 ಹೋಟೆಲ್‍ನ ಬೆಂಗಳೂರು ಶಾಖೆಗೆ ಮುಖ್ಯಮಂತ್ರಿ…

1 hour ago

ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತು: ತನಿಖಾ ತಂಡಕ್ಕೆ 25 ಲಕ್ಷ ನಗದು ಬಹುಮಾನ

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಪರಾಧ ಸಾಬೀತುಪಡಿಸಿದ ತನಿಖಾ ತಂಡಕ್ಕೆ 25 ಲಕ್ಷ ರೂ. ನಗದು ಬಹುಮಾನ…

3 hours ago