ಹೊಸದಿಲ್ಲಿ : ಸಂಸತ್ ಭವನದಲ್ಲಿ ನಡೆದ ವಿಶೇಷ ಘಟನೆಯೊಂದು ಗಮನ ಸೆಳೆದಿದೆ. ಭುಜದ ನೋವಿನಿಂದ ಬಳಲುತ್ತಿದ್ದ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಹುಲ್ ಗಾಂಧಿಯವರು ಭುಜವನ್ನು ಒತ್ತಿ ವಿಶ್ರಾಂತಿ ನೀಡಿದ್ದಾರೆ. ಈ ದೃಶ್ಯದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಪ್ರಿಯಾಂಕಾ ಗಾಂಧಿಯವರೂ ಖರ್ಗೆಯವರಿಗೆ ಭುಜದ ಮಸಾಜ್‌ನ ಮಹತ್ವ ತಿಳಿಸಿದ್ದಾರೆ. ಈ ಘಟನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಮಾರಂಭವೊಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಅವರ ನಡೆಯೊಂದು ಸಂಸತ್ ಭವನದಲ್ಲಿ ಡಿ. 3ರಂದು ಒಂದು ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಭುಜದ ನೋವಿನಿಂದ ಬಳಲುತ್ತಿದ್ದ ರಾಜ್ಯಸಭೆಯ ವಿಪಕ್ಷಗಳ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಲೋಕಸಭಾ ಸದಸ್ಯ ರಾಹುಲ್ ಗಾಂಧಿಯವರು ಭುಜ ಒತ್ತುತ್ತಿರುವುದು ಕಂಡುಬಂತು. ಮಾಧ್ಯಮದವರು ಅದರ ವಿಡಿಯೋವನ್ನು ಮಾಡಿದ್ದು ಅದು ಉತ್ತಮ ಶೀರ್ಷಿಕೆಯೊಂದಿಗೆ ನಾನಾ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇಂಟರ್ ನೆಟ್ ಓದುಗರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದನ್ನು ಓದಿ: ಇಂದು ಸಂಜೆ ಪುಟಿನ್ ಭಾರತಕ್ಕೆ ಆಗಮನ : ಮೋದಿಯಿಂದ ಖಾಸಗಿ ಔತಣಕೂಟ
ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನಾಚರಣೆಯ ಅಂಗವಾಗಿ, ಸಂಸತ್ ಭವನದಲ್ಲಿ ಅವರ ಫೋಟೋಕ್ಕೆ ಪುಷ್ಪನಮನ ಸಲ್ಲಿಸಲು ಏರ್ಪಾಟು ಮಾಡಲಾಗಿತ್ತು. ಸರದಿ ಸಾಲಿನಲ್ಲಿ ಪುಷ್ಪನಮನ ಸಲ್ಲಿಸಿ ಬರಬೇಕಿತ್ತು. ಆ ಸಂದರ್ಭದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಆಸನದಲ್ಲಿ ಕುಳಿತುಕೊಂಡರು. ಅಲ್ಲಿಗೆ ಬಂದ ರಾಹುಲ್ ಗಾಂಧಿ, ಖರ್ಗೆಯವರ ಹಿಂದೆ ನಿಂತು ಅವರ ಭುಜಗಳ ಮೇಲೆ ತಮ್ಮೆರಡೂ ಕೈಗಳನ್ನಿಟ್ಟು ನಿಧಾನವಾಗಿ ಒತ್ತಲಾರಂಭಿಸಿದರು.
ಬಹುಶಃ ಅದು ಖರ್ಗೆಯವರಿಗೆ ಆರಾಮ ಎನಿಸಿರಬೇಕು. ಆಗ ಖರ್ಗೆಯವರೂ ತಮ್ಮ ಭುಜಗಳನ್ನು ಮಸಾಜ್ ಗೆ ತಕ್ಕಂತೆ ಸರಿಯಾಗಿ ಹೊಂದಿಸುತ್ತಾ ಕೊಂಚ ರಿಲ್ಯಾಕ್ಸ್ ಆದರು. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಕೇರಳದ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ, ಖರ್ಗೆಯವರ ಭುಜವನ್ನು ರಾಹುಲ್ ಒತ್ತುತ್ತಿರುವುದನ್ನು ನೋಡಿ ನಸುನಕ್ಕರಲ್ಲದೆ, ಖರ್ಗೆಯವರ ಬಳಿ ಭುಜದ ಮಸಾಜ್ ನ ಅನುಕೂಲಗಳ ಬಗ್ಗೆ ಒಂದಿಷ್ಟು ಮಾತನಾಡಿದರು. ತಮ್ಮ ಕೈಗಳಿಂದ ತಮ್ಮ ಬಲಭುಜವನ್ನು ತೋರಿಸುತ್ತಾ ಭುಜದ ಯಾವ ಖಂಡಗಳು ಹೇಗೆ ಕೆಲಸ ಮಾಡುತ್ತವೆ, ಭುಜದ ಮಸಾಜ್ ನಿಂದ ಬೆನ್ನು, ಪಕ್ಕೆಲುಬುಗಳಿಗೆ ಹೇಗೆ ಆರಾಮವಾಗುತ್ತದೆ ಎಂಬುದನ್ನು ಅವರು ತೋರಿಸಿದರು. ದೂರದಿಂದ ಇವರ ಮಾತುಕತೆಯನ್ನು ಗಮನಿಸುತ್ತಿದ್ದ ಮಾಧ್ಯಮಗಳು ಈ ದೃಶ್ಯಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದಿವೆ. ಇದರ ವಿಡಿಯೋ ಕ್ಲಿಪ್ ಗಳು ನಾನಾ ವೆಬ್ ಸೈಟ್ ಗಳಲ್ಲಿ ಪ್ರಕಟವಾಗಿದ್ದು ಆ ದೃಶ್ಯಾವಳಿಗಳು ಇಂಟರ್ ನೆಟ್ ನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರ ಬಗ್ಗೆ ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ.
ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…
ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…
ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…