ಒಡಿಶಾ: ಪುರಾಣ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ್ ಓಪನ್ ಮಾಡಲಾಗಿದೆ.
ಬರೋಬ್ಬರಿ 46 ವರ್ಷಗಳ ಬಳಿಕ ರತ್ನಗಳ ಭಂಡಾರವನ್ನು ಸೂಕ್ತ ಭದ್ರತೆ ಮತ್ತು ಧಾರ್ಮಿಕ ಕಾರ್ಯದ ಜೊತೆ ತೆರೆಯಲಾಗಿದೆ. 1978ರಲ್ಲಿ ಭಂಡಾರದ ಕೊಠಡಿ ತೆರೆಯಲಾಗಿತ್ತು. ಇದಾದ ನಂತರ ಕೊಠಡಿ ತೆರೆದಿರಲಿಲ್ಲ. ಇದೀಗ ನಕಲಿ ಕೀಲಿ ಕೈ ಬಳಸಿ ಇಂದು ಭಂಡಾರವನ್ನು ಓಪನ್ ಮಾಡಲಾಗಿದೆ. ನಿರೀಕ್ಷೆಯಂತೆಯೇ ರತ್ನ ಭಂಡಾರದೊಳಗೆ ಚಿನ್ನಾಭರಣಗಳಿರುವ 15 ಪೆಟ್ಟಿಗೆ ಸೇರಿದಂತೆ ಅತ್ಯಮೂಲ್ಯ ಸಂಪತ್ತು ಸಿಕ್ಕಿದೆ ಎನ್ನಲಾಗಿದೆ.
ಮೊದಲಿಗೆ ಬಾಗಿಲು ಓಪನ್ ಮಾಡುವುದಕ್ಕೂ ಮುನ್ನ ಜಗನ್ನಾಥನಿಗೆ ಪೂಜೆ ಸಲ್ಲಿಸಿ, ಆಡಳಿತ ಮಂಡಳಿ ಸದಸ್ಯರು ರತ್ನ ಭಂಡಾರದ ಬಾಗಿಲು ತೆರೆದರು.
ಈ ಹಿಂದೆ 1978ರಲ್ಲಿ ಪುರಿ ಜಗನ್ನಾಥನ ರತ್ನ ಭಂಡಾರ ಓಪನ್ ಮಾಡಲಾಗಿತ್ತು. ಇದೀಗ ಬರೋಬ್ಬರಿ 46 ವರ್ಷಗಳ ಬಳಿಕ ರತ್ನ ಭಂಡಾರವನ್ನು ಮತ್ತೊಮ್ಮೆ ತೆರೆಯಲಾಗಿದೆ. ರತ್ನ ಭಂಡಾರದ ಬಾಗಿಲು ಓಪನ್ ಮಾಡಿದ ಬಳಿಕ ಶಿಫ್ಟಿಂಗ್ ಸ್ಟ್ರಾಂಗ್ ರೂಮ್‌ಗೆ ರತ್ನಭಂಡಾರ ರವಾನೆ ಮಾಡಲಾಗಿದೆ. ಬೆಲೆಬಾಳುವ ರತ್ನ ಭಂಡಾರಕ್ಕೆ ಬಿಗಿ ಭದ್ರತೆಯನ್ನೂ ಸಹ ಒದಗಿಸಲಾಗಿದೆ.
ಕಾರ್ಯಾಚರಣೆ ವಿಡಿಯೋ ಗೌಪ್ಯತೆ ಕಾಪಾಡಲಾಗುತ್ತೆ. ದಾಖಲೆಗಾಗಿ ಕಾರ್ಯಾಚರಣೆ ವಿಡಿಯೋ ರೆಕಾರ್ಡ್ ಮಾಡಲಾಗಿದ್ದು, ದೇಗುಲದ ಪ್ರತಿನಿಧಿಗಳು, ಅಧಿಕಾರಿಗಳು ಭಾಗಿಯಾಗಿದ್ದರು. ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ ಮಾರ್ಗಸೂಚಿಯಂತೆ ಬಾಗಿಲು ಓಪನ್ ಮಾಡಲಾಗಿದೆ.
ಇನ್ನು ಪುರಿ ಜಗನ್ನಾಥನ ರತ್ನ ಭಂಡಾರದಲ್ಲಿ ಅಪಾರ ಪ್ರಮಾಣದ ಸಂಪತ್ತು ಸಿಕ್ಕಿದೆ ಎನ್ನಲಾಗಿದೆ. ಚಿನ್ನಾಭರಣಗಳಿರುವ 9 ಅಡಿ ಅಗಲ ಮತ್ತು 3 ಅಡಿ ಎತ್ತರದ ಪೆಟ್ಟಿಗೆ, 128 ಕೆಜಿ ತೂಕದ 454 ಚಿನ್ನದ ಆಭರಣಗಳು, 221 ಕೆಜಿ ತೂಕದ 293 ಬೆಳ್ಳಿ ಆಭರಣಗಳು ಭಂಡಾರದಲ್ಲಿ ಸಿಕ್ಕಿವೆ. ಇನ್ನು 12,800ಕ್ಕೂ ಹೆಚ್ಚು ರತ್ನಖಚಿತ ಆಭರಣಗಳು, ಅಮೂಲ್ಯ ಹರಳುಗಳು, 22 ಸಾವಿರಕ್ಕೂ ಹೆಚ್ಚು ಬೆಳ್ಳಿ ವಸ್ತುಗಳು ಸಿಕ್ಕಿವೆ ಎಂಬ ಮಾಹಿತಿ ಲಭ್ಯವಾಗಿದೆ.
ದಾ.ರಾ. ಮಹೇಶ್ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…
ಮಂಡ್ಯ: ಇಂದಿನಿಂದ ( ಡಿಸೆಂಬರ್ 20 ) ಮೂರು ದಿನಗಳ ಕಾಲ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ…
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್‌ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…