ದೇಶ- ವಿದೇಶ

ನೌಕಾಪಡೆ ಸಿಬ್ಬಂದಿಗಳ ಜೊತೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಗೋವಾ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ವರ್ಷದಂತೆ ಈ ವರ್ಷವೂ ಭಾರತೀಯ ನೌಕಾಪಡೆಯೊಂದಿಗೆ ದೀಪಾವಳಿ ಹಬ್ಬ ಆಚರಿಸಿದ್ದಾರೆ.

ಗೋವಾ ಮತ್ತು ಕಾರವಾರ ಕರಾವಳಿಯಲ್ಲಿ ಸಶಸ್ತ್ರ ಪಡೆಗಳ ಸದಸ್ಯರೊಂದಿಗೆ ಐಎನ್‌ಎಫ್‌ ವಿಕ್ರಾಂತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಆಚರಣೆ ಮಾಡಿ ಖುಷಿಪಟ್ಟರು.

ಬಳಿಕ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆ ಕ್ಷಣವನ್ನು ಆಳವಾಗಿ ಸಾಂಕೇತಿಕ ಮತ್ತು ಸ್ಮರಣೀಯ ಎಂದು ಬಣ್ಣಿಸಿದರು. ಇಂದು ಅದ್ಬುತ ದಿನ. ಈ ದೃಶ್ಯ ಸ್ಮರಣೀಯ. ಒಂದು ಕಡೆ ನನಗೆ ಸಾಗರವಿದೆ. ಮತ್ತೊಂದೆಡೆ ಭಾರತ ಮಾತೆಯ ವೀರ ಸೈನಿಕರ ಶಕ್ತಿ ಇದೆ.

ಸ್ಥಳೀಯ ವಿಮಾನವಾಹಕ ನೌಕೆಯ ಡೆಕ್‌ ಮೇಲೆ ನಿಂತು ಮಾತನಾಡಿದ ಪ್ರಧಾನಿ ಮೋದಿ ಇಂದು ಒಂದು ಕಡೆ ನನಗೆ ಅನಂತ ದಿಗಂತಗಳು ಮತ್ತು ಅವಕಾಶವಿದೆ. ಇನ್ನೊಂದು ಕಡೆ ಅನಂತ ಶಕ್ತಿಯನ್ನು ಸಾಕಾರಗೊಳಿಸುವ ಐಎನ್‌ಎಸ್‌ ವಿಕ್ರಾಂತ್‌ ನಿಂತಿದೆ. ಸಾಗರದ ನೀರಿನ ಮೇಲೆ ಸೂರ್ಯನ ಕಿರಣಗಳ ಹೊಳಪು ನಮ್ಮ ವೀರ ಸೈನಿಕರು ಬೆಳಗಿನ ದೀಪಾವಳಿ ದೀಪಗಳಂತೆ ಭಾಸವಾಗುತ್ತದೆ ಎಂದು ಹೇಳಿದರು.

ಆಂದೋಲನ ಡೆಸ್ಕ್

Recent Posts

ಮುಂದುವರಿದ ಇರಾನ್‌-ಇಸ್ರೇಲ್‌ ಸಂಘರ್ಷ: ಬೆಂಗಳೂರಿನಲ್ಲಿ 17 ವಿಮಾನಗಳ ಹಾರಾಟ ರದ್ದು

ಬೆಂಗಳೂರು: ಇರಾನ್‌-ಇಸ್ರೇಲ್‌ ಯುದ್ಧ ಮತ್ತೆ ತೀವ್ರಗೊಂಡ ಪರಿಣಾಮ ಬೆಂಗಳೂರಿಗೆ ಆಗಮಿಸಬೇಕಿದ್ದ 8 ಮತ್ತು ನಿರ್ಗಮಿಸಬೇಕಿದ್ದ 9 ವಿಮಾನಗಳ ಹಾರಾಟ ರದ್ದಾಗಿದೆ.…

20 mins ago

ಡಿ.ಕೆ.ಶಿವಕುಮಾರ್‌ ಅತ್ಯಂತ ಯಶಸ್ವಿ ಅಧ್ಯಕ್ಷ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಇವತ್ತಿಗೆ ಆರು ವರ್ಷಗಳಾಗಿದ್ದು, ಅತ್ಯಂತ ಯಶಸ್ವಿ ಅಧ್ಯಕ್ಷ ಎನಿಸಿಕೊಂಡಿದ್ದಾರೆ ಎಂದು ಸಚಿವೆ…

42 mins ago

ಸ್ಮೃತಿ ಇರಾನಿ ಕಾಣುತ್ತಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ವ್ಯಂಗ್ಯ

ಬೆಂಗಳೂರು: ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಮೂಲಕ ಮಹಿಳೆಯರಿಗೆ ಉಡುಗೊರೆ ನೀಡಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಬಯಸುವೆ.…

48 mins ago

ಮೃಗಾಲಯದ ಆನೆ ಅಭಿ ಮತ್ತಿಗೋಡಿನಲ್ಲಿ ಕೊನೆಯುಸಿರು

ಮೈಸೂರು: ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿದ್ದ 23 ವರ್ಷದ ಜೂನಿಯರ್ ಅಭಿ ಆನೆ ಅನಾರೋಗ್ಯದಿಂದ ಮೃತಪಟ್ಟಿದೆ.‌ ನಾಗರಹೊಳೆ ರಾಷ್ಟ್ರೀಯ…

57 mins ago

ರಾಜ್ಯದ ಹಲವೆಡೆ ತಾಪಮಾನ ಹೆಚ್ಚಳ: ಹೀಟ್‌ ಸ್ಟ್ರೋಕ್‌ ಭೀತಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚುತ್ತಿದ್ದು, ಹೀಟ್‌ ಸ್ಟ್ರೋಕ್‌ ಭೀತಿ ಎದುರಾಗಿದೆ. ಹಲವೆಡೆ…

1 hour ago

ಚಾಮರಾಜನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಬೆಂಕಿ ಅವಘಡ

ಚಾಮರಾಜನಗರ: ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ನಡೆದಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ ಚಾಮರಾಜನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ…

2 hours ago