plane crash
ಹಲವು ಸಾವು-ನೋವು ಸಂಭವಿಸಿರುವ ಶಂಕೆ
ಅಹಮದಾಬಾದ್ : ಗುರುವಾರ ಮಧ್ಯಾಹ್ನ ಏರ್‌ಇಂಡಿಯಾದ AI-171 ವಿಮಾನವು ಹಾಸ್ಟಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದ ಬಳಿಕ ಪತನಗೊಂಡಿದೆ. ಹಾಸ್ಟಲ್ ಕಟ್ಟಡದ ಟೆರೇಸ್‌ನಲ್ಲಿ ವಿಮಾನದ ಅವಶೇಷಗಳು ಬಿದ್ದಿರುವ ವಿಡಿಯೊ ದೃಶ್ಯಾವಳಿಗಳು ಎಲ್ಲೆಡೆ ಹರಿದಾಡುತ್ತಿವೆ.
ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆದ ಏರ್ ಇಂಡಿಯಾ ವಿಮಾನ ಲಂಡನ್‌ಗೆ ತೆರಳುತ್ತಿತ್ತು. ಟೇಕ್ ಆಫ್ ಆದ ಕೆಲ ಹೊತ್ತಿನಲ್ಲಿ ಈ ದುರಂತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ, ಪೊಲೀಸ್ ಸೇರಿದಂತೆ ರಕ್ಷಣಾ ತಂಡ ಆಗಮಿಸಿದ್ದು, ಕಾರ್ಯಾಚರಣೆ ನಡೆಯುತ್ತಿದೆ.
ಇದನ್ನೂ ಓದಿ:- Plane crash | 825 ಅಡಿ ಎತ್ತರದಿಂದ ಪತನಗೊಂಡ ವಿಮಾನ.!
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಕೇಂದ್ರದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಪತನಕ್ಕೆ ಕಾರಣ ಮತ್ತು ಪ್ರಯಾಣಿಕರ ಸ್ಥಿತಿಗತಿ ಬಗ್ಗೆ ಇನ್ನಷ್ಟೇ ವಿವರಗಳು ಲಭಿಸಬೇಕಿದೆ.
ಬೆಂಗಳೂರು: ಮೈಸೂರು ಮುಡಾ ಅಕ್ರಮ ಸೈಟ್ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ…
ಉಡುಪಿ : ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲೂ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು…
ಮೈಸೂರು : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಆಲಿಕಲ್ಲು ಮಳೆ ಏ.1ರವರೆಗೆ ಮುಂದುವರಿಯಲಿದೆ ಎಂದು…
ಹೊಸದಿಲ್ಲಿ : ಭಾರತ ಸೇರಿದಂತೆ ಮಿತ್ರ ರಾಷ್ಟ್ರಗಳಿಗೆ ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲಾಗಿದೆ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ…
ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆದಿತ್ಯ ಬಿರ್ಲಾ ಗ್ರೂಪ್ ನೇತೃತ್ವದ ಒಕ್ಕೂಟ 16,700 ಕೋಟಿಗೆ ಖರೀದಿಸಿದ ಬಳಿಕ…
ಮೈಸೂರು : ಮೋಸದಿಂದ ಕಾರುಗಳನ್ನು ಖರೀದಿಸಿ, ಯಾವುದೇ ದಾಖಲೆ ನೀಡದೆ ಕಡಿಮೆ ಹಣ ಪಡೆದು ಬೇರೆಯವರಿಗೆ ಹೆಚ್ಚು ಬೆಲೆಗೆ ಮಾರಾಟ…