ದೇಶ- ವಿದೇಶ

ಚಳಿಗಾಲದ ಸಂಸತ್‌ ಅಧಿವೇಶನ: ವಿಮಾ ತಿದ್ದಪಡಿ ಮಸೂದೆ ಮಂಡನೆ ಅಸಾಧ್ಯ

ನವದೆಹಲಿ: ಕೇಂದ್ರ ಸರ್ಕಾರ ವಿಮಾ ವಲಯದಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲು ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದ ವಿಮಾ ತಿದ್ದುಪಡಿ ಮಸೂದೆಯನ್ನು ಚಳಿಗಾಲದ ಸಂಸತ್‌ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಕಡಿಮೆ ಇದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಈ ಕುರಿತು ಕೇಂದ್ರ ಹಣಕಾಸು ಸೇವೆಗಳ ಇಲಾಖೆಯೂ ವಿಮಾ ತಿದ್ದುಪಡಿ ಕರಡು ಮಸೂದೆ ಬಗ್ಗೆ ಜನರಿಂದ ಅಭಿಪ್ರಾಯಪಡೆಯಲು ಡಿಸೆಂಬರ್‌ 10ರವರೆಗೆ ಆಹ್ವಾನಿಸಲಾಗಿದೆ. ಆದರೆ ಅದನ್ನು ವಿಮಾ ವಲಯದ ಪ್ರತಿನಿಧಿಗಳಿಂದ ಅಭಿಪ್ರಾಯ ಸ್ವೀಕರಿಸಿ ಪರಾಮರ್ಶೆ ನಡೆಸಿದ ನಂತರವೇ ಮಸೂದೆಯನ್ನು ಅಂತಿಮಗೊಳಿಸಲಾಗುವುದು. ಹೀಗಾಗಿ ಈ ಪ್ರಕ್ರಿಯೆಯನ್ನು ಚಳಿಗಾಲದ ಅಧಿವೇಶನದಲ್ಲಿ ಪೂರ್ಣಗೊಳಿಸಲು ಸಮಯದ ಅಭಾವವಿರುವುದರಿಂದ ವಿಮಾ ತಿದ್ದುಪಡಿ  ಮಸೂದೆ ಮಂಡನೆಯನ್ನು ಬಜೆಟ್‌ ಅಧಿವೇಶನದಲ್ಲಿ  ಮಂಡನೆ ಮಾಡುವ ಸಾಧ್ಯತೆ ಇವೆ ಎಂದು ಮಾಹಿತಿ ಲಭ್ಯವಾಗಿದೆ.

ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯವು ವಿಮಾ ಕಾಯ್ದೆ 1938ರ ಅನ್ವಯ ತಿದ್ದುಪಡಿ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾಪಿಸಿದ್ದು, ವಿಮಾ ಕಂಪನಿಗಳಲ್ಲಿ ಎಫ್‌ಡಿಐ ಹೂಡಿಕೆ, ಒಂದೇ ಕಂಪನಿಗೆ ಜೀವ ವಿಮೆ ಹಾಗೂ ಆರೋಗ್ಯ ಅಥವಾ ಸಾಮಾನ್ಯ ಸೌಲಭ್ಯ ನೀಡಲು ಸಂಯೋಜಿತ ಪರವಾಗಿ ವಿಮಾ ಮಸೂದೆ ತಿದ್ದುಪಡಿಯನ್ನು ಸಲ್ಲಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

 

ಅರ್ಚನ ಎಸ್‌ ಎಸ್

Recent Posts

ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ : ಸಚಿವ ದಿನೇಶ್‌ ಗುಂಡೂರಾವ್‌

ಬೆಂಗಳೂರು : ಶಾಸಕರು ಸಚಿವ ಸ್ಥಾನ ಕೇಳೋದು ತಪ್ಪಲ್ಲ. ಸಂಪುಟ ಪುನರ್‌ ರಚನೆ ಆಗಲಿ ಎಂದು ಸಚಿವ ದಿನೇಶ್‌ ಗುಂಡೂರಾವ್‌…

33 mins ago

ನಾಳೆ ದಿಲ್ಲಿಗೆ ಸಿಎಂ, ಡಿಸಿಎಂ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಾಳೆ(ಏ.16) ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಕಾಂಗ್ರೆಸ್‍ನಲ್ಲಿ ಚಟುವಟಿಕೆಗಳು ಮತ್ತಷ್ಟು…

51 mins ago

ಶಾಸಕ ವಿನಯ್‌ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ನಾಳೆ ಶಿಕ್ಷೆ ಪ್ರಮಾಣ ಪ್ರಕಟ: ಆದೇಶ ಕಾಯ್ದಿರಿಸಿದ ಕೋರ್ಟ್‌

ಬೆಂಗಳೂರು: ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಅಪರಾಧಿಗಳಿಗೆ ವಿಶೇಷ ನ್ಯಾಯಾಲಯ ನಾಳೆ ಶಿಕ್ಷೆಯ…

1 hour ago

ಎಚ್.ಡಿ.ಕೋಟೆ| ಕಾಡಾನೆ ದಾಳಿ: ಮಹಿಳೆ ಸ್ಥಿತಿ ಗಂಭೀರ

ಮಂಜು ಕೋಟೆ: ಎಚ್.ಡಿ.ಕೋಟೆ ತಾಲ್ಲೂಕು ವರದಿಗಾರರು  ಎಚ್.ಡಿ.ಕೋಟೆ: ಜಮೀನಿಗೆ ಸೌದೆ ತರಲು ಹೋದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ…

2 hours ago

ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಎಫ್‌ಐಆರ್‌ ದಾಖಲು

ಮಂಗಳೂರು: ಯಕ್ಷಗಾನ ಕಲಾವಿದರಿಗೆ ಬೆದರಿಕೆ ಹಾಕಿದ ಆರೋಪದಡಿ ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಠಾಣೆಯಲ್ಲಿ…

2 hours ago

ಬೆಂಗಳೂರಿನಲ್ಲಿ 11.86 ಕೋಟಿ ರೂ ಮೌಲ್ಯದ ಮಾದಕ ವಸ್ತು ಜಪ್ತಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು 11.86 ಕೋಟಿ ರೂ ಮೌಲ್ಯದ ಮಾದಕವಸ್ತು ಜಪ್ತಿ ಮಾಡಿ ಇಬ್ಬರು ವಿದೇಶಿ ಮಹಿಳೆಯರು…

3 hours ago