ದೇಶ- ವಿದೇಶ

Pahalgam terrorist attack; ಸಂಭಾವ್ಯ ದಾಳಿ : ಭಾರತ ಸೇನೆ ಹೈ ಅಲರ್ಟ್

ಹೊಸದಿಲ್ಲಿ : ಪಹಲ್ಗಾಮ್‍ನ ಘಟನೆಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಆವರಿಸಿದ್ದು, ಯಾವುದೇ ಸಂದರ್ಭದಲ್ಲೂ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ ಸೇನಾ ಪಡೆಯನ್ನು ಹೈಅಲರ್ಟ್‍ನಲ್ಲಿ ಇಡಲಾಗಿದೆ.

ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದ್ದು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಬೇಕೆಂದು ಮೂರು ಸೇನಾ ಪಡೆಗಳ ಮುಖ್ಯಸ್ಥರಿಗೆ ರಕ್ಷಣಾ ಇಲಾಖೆ ಮೌಖಿಕ ಸೂಚನೆ ಕೊಟ್ಟಿದೆ.

ಪಾಕಿಸ್ತಾನದಿಂದ ಸಂಭಾವ್ಯ ದಾಳಿ ನಡೆಯಬಹುದೆಂಬ ಗುಪ್ತಚರ ವಿಭಾಗ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಸೇನಾಪಡೆಗಳನ್ನು ಕಟ್ಟೆಚ್ಚರದಲ್ಲಿ ಇಡಲಾಗಿದೆ.

ಭಾರತೀಯ ವಾಯುಸೇನೆ ದೇಶದ ಎಲ್ಲಾ ಕರಾವಳಿ ತೀರಪ್ರದೇಶಗಳಲ್ಲೂ ಸಮರ ಅಭ್ಯಾಸವನ್ನು ನಡೆಸುತ್ತಿದೆ. ಗುಜರಾತ್, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಕರ್ನಾಟಕ, ಗೋವಾ ಸೇರಿದಂತೆ ಕರಾವಳಿ ತೀರಪ್ರದೇಶಗಳಲ್ಲಿ ಭಾರತೀಯ ಸೇನಾಪಡೆಗೆ ಸೇರಿದ ವಾಯುಸೇನೆಯು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ವಸನ್ನದ್ಧವಾಗಿದೆ.

ಕಳೆದ ಎರಡು ದಿನಗಳಿಂದ ವಾಯುಸೇನೆಯು ನಿರಂತರವಾಗಿ ಸಮರ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಇದೇ ರೀತಿ ಭಾರತೀಯ ನೌಕಾ ಪಡೆಯು ಕೂಡ ಸಮರ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ.

ವಿಶೇಷವಾಗಿ ಮುಂಬೈ, ಕೊಚ್ಚಿ, ಕಾರವಾರ, ಪಣಜಿ ಮತ್ತಿತರ ಕಡೆ ಸಮರಾಭ್ಯಾಸ ನಡೆಸುತ್ತಿವೆ. ಪೂರ್ವ, ಪಶ್ಚಿಮ ಸೇರಿದಂತೆ ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿತೀರ ಪ್ರದೇಶಗಳಲ್ಲಿ ನೌಕಾ ನೆಲೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ.

ಪಾಕಿಸ್ತಾನವು ಕರಾಚಿ ಮತ್ತು ಗುಜರಾತ್ ಕಡೆಯಿಂದ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ಶಂಕಿಸಿದೆ. ಹೀಗಾಗಿ ಈ ತೀರ ಪ್ರದೇಶಗಳಲ್ಲಿ ಗುರುವಾರದಿಂದಲೇ ಹೈಅಲರ್ಟ್ ಘೋಷಿಸಲಾಗಿದೆ.

ಇದೇ ರೀತಿ ಭಾರತೀಯ ವಾಯುಪಡೆಗೆ ಸೇರಿದ ಯುದ್ಧ ವಿಮಾನಗಳನ್ನು ಸಹ ಸನ್ನದ್ದದಲ್ಲಿ ಇಡಲಾಗಿದೆ. ಗುರುವಾರ ಪಾಕಿಸ್ತಾನದ ಕರಾಚಿಯ ಅರಬ್ಬಿ ಸಮುದ್ರದಲ್ಲಿ 480 ಕಿ.ಮೀ.ನಿಂದ 500 ಕಿ.ಮೀ ಗುರಿ ತಲುಪುವ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ನಡೆಸಲಾಗಿತ್ತು.

ಹೀಗಾಗಿ ವಾಯುಪಡೆಯ ಯುದ್ಧ ವಿಮಾನಗಳಾದ ತೇಜಸ್, ರಫೇಲ್, ಸುಖೋಯ್, ನೇತ್ರ, ಸಿ17 ಗ್ಲೋಬ್ ಮಾಸ್ಟರ್, ಸಿ295, ಎಸ್‍ಎಚ್748, ಪ್ರಚಂಡ್, ಡೆಸಾಲ್ಟ, ನಿಕೋಯ್, ಜಾಗ್ವಾರ್, ಬೋಯಿಂಗ್, ರುದ್ರ, ಚಿನೂಕ್, ಧ್ರುವ, ಹಾಕ್, ಕಿರಣ್ ಸೇರಿದಂತೆ ಬಹುತೇಕ ಎಲ್ಲಾ ಯುದ್ಧ ವಿಮಾನಗಳು ಸಜ್ಜುಗೊಂಡಿವೆ.

ಈಗಾಗಲೇ ಒಂದು ಸುತ್ತಿನ ಸಮರ ಅಭ್ಯಾಸವನ್ನು ನಡೆಸಿರುವ ಈ ಯುದ್ಧ ವಿಮಾನಗಳು ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿವೆ.

ಪ್ರಸ್ತುತ ಭಾರತದಲ್ಲಿ 60 ವಾಯುಪಡೆ ನೆಲೆಗಳಿವೆ. ನವದೆಹಲಿ, ಶಿಲ್ಲಾಂಗ್, ಪ್ರಯಾಗ್‍ರಾಜ್, ತಿರುವನಂತಪುರಂ, ಗಾಂಧಿನಗರ, ಬೆಂಗಳೂರಿನ ಯಲಹಂಕ, ನಾಗ್ಪುರ್, ಹಿಂಡನ್ ಸೇರಿದಂತೆ 60 ಕೇಂದ್ರಗಳಲ್ಲೂ ಕೂಡ ಯುದ್ಧ ವಿಮಾನಗಳನ್ನು ಇರಿಸಲಾಗಿದೆ.

ಇವುಗಳನ್ನು ವೆಸ್ಟರ್ನ್ ಎ ಕಮಾಂಡ್, ಈಸ್ಟರ್ನ್ ಎ ಕಮಾಂಡ್, ಸೌಥರ್ನ್ ಎ ಕಮಾಂಡ್, ನಾಥರ್ನ್ ಎ ಕಮಾಂಡ್ ಹಾಗೂ ನೈರುತ್ಯ ವಿಭಾಗ ಎಂದು ವಿಂಗಡಿಸಲಾಗಿದೆ.

ಪಾಕಿಸ್ತಾನ ಪ್ರಚೋದನೆಕಾರಿಯಾಗಿ ದಾಳಿ ನಡೆಸಿದರೆ ಅದರ ಪ್ರತಿರೋಧವನ್ನು ಹಿಮೆಟ್ಟಿಸಿ ತಕ್ಕ ಪಾಠ ಕಲಿಸಬೇಕೆಂದು ಸೇನಾಪಡೆ ಮೌಖಿಕ ಸೂಚನೆಯನ್ನು ನೀಡಿದೆ ಎಂದು ತಿಳಿದು ಬಂದಿದೆ.

ಆಂದೋಲನ ಡೆಸ್ಕ್

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

7 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

20 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

21 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

21 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

21 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

21 hours ago