ದೇಶ- ವಿದೇಶ

ಮಂದಿರ-ಮಸೀದಿಗಳ ಹೊಸ ವಿವಾದ: ಮೋಹನ್ ಭಾಗವತ್‌ ಕಳವಳ

ಪುಣೆ: ದೇಶದಲ್ಲಿ ಹೊಸದಾಗಿ ಮಂದಿರ-ಮಸೀದಿಗಳ ವಿವಾದಗಳನ್ನು ಹುಟ್ಟುಹಾಕುತ್ತಿರುವುದಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಕೆಲವು ವ್ಯಕ್ತಿಗಳು, ಅಯೋಧ್ಯೆಯ ರಾಮಮಂದಿರ ನಿರ್ಮಾಣದ ನಂತರ, ಅಂತಹ ವಿವಾದಗಳನ್ನು ಕೆರಳಿಸುವ ಮೂಲಕ ಹಿಂದುಗಳ ನಾಯಕರಾಗಬಹುದೆಂದು ಭಾವಿಸಿದ್ದಾರೆ. ಆದರೆ, ಅದು ಸ್ವೀಕಾರಾರ್ಹವಲ್ಲ ಎಂದು ಹರಿಹಾಯ್ದಿದ್ದಾರೆ.

ಎಲ್ಲರನ್ನು ಒಳಗೊಳ್ಳುವ ಸಮಾಜದ ಅಗತ್ಯವಿದೆ. ದೇಶವು ಸಾಮರಸ್ಯದಿಂದ ಬದುಕಬಹುದು ಎಂಬುದನ್ನು ಜಗತ್ತಿಗೆ ತೋರಿಸಬೇಕಾಗಿದೆ ಎಂದರು.

ನಾವು ಅನಾದಿ ಕಾಲದಿಂದಲೂ ಬದುಕುತ್ತಿದ್ದೇವೆ. ಈ ಸೌಹಾರ್ದವನ್ನು ನಾವು ಜಗತ್ತಿಗೆ ನೀಡಬೇಕಾದರೆ, ನಾವು ಅದರ ಮಾದರಿಯನ್ನು ರೂಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಂದುಗಳ ನಂಬಿಕೆಯ ವಿಷಯವಾಗಿದ್ದರಿಂದ ರಾಮಮಂದಿರವನ್ನು ನಿರ್ಮಿಸಲಾಗಿದೆ ಎಂದು ಹೇಳಿರುವ ಭಾಗವತ್‌ ಅವರು, ಪ್ರತಿದಿನ ಹೊಸ ವಿವಾದ ಉದ್ಭವಿಸುತ್ತಿವೆ. ಇದಕ್ಕೆ ಹೇಗೆ ಅನುಮತಿಸುವುದು? ಇಂತಹದ್ದನ್ನು ಮುಂದುವರಿಸಲು ಸಾಧ್ಯವಿಲ್ಲ. ನಾವೆಲ್ಲರೂ ಒಟ್ಟಿಗೆ ಬದುಕಬಲ್ಲೆವು ಎಂಬುದನ್ನು ಭಾರತವು ತೋರಿಸಬೇಕಾಗಿದೆ ಎಂದು ಯಾವುದೇ ನಿರ್ದಿಷ್ಟ ವಿವಾದಿತ ಸ್ಥಳ ಉಲ್ಲೇಖಿಸದೇ ಹೇಳಿದರು.

ಈ ಮೂಲಕ ಮಂದಿರ-ಮಸೀದಿಗಳ ಹೊಸ ವಿವಾದದ ಬಗ್ಗೆ ಮೋಹನ್‌ ಭಾಗವತ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಏಪ್ರಿಲ್‌ 21 ಮಂಗಳವಾರ

10 mins ago

ಕೊಳ್ಳೇಗಾಲ| ಹಳೆ ವೈಷಮ್ಯ ಓರ್ವನ ಕೊಲೆ

ಕೊಳ್ಳೇಗಾಲ: ರಾತ್ರಿ ಕಂಠಪೂರ್ತಿ ಕುಡಿದ ಇಬ್ಬರ ನಡುವೆ ಹಳೇ ವೈಷಮ್ಯದಿಂದ ಕಲಹ ನಡೆದು ಓರ್ವನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ…

9 hours ago

ಮುಂದಿನ ಒಂದು ವಾರದವರೆಗೆ ರಾಜ್ಯದಲ್ಲಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ಆರ್ಭಟ ಜೋರಾಗಿರುವ ಬೆನ್ನಲ್ಲೇ ಮುಂದಿನ ಒಂದು ವಾರದವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

11 hours ago

ಕರ್ನಾಟಕದಲ್ಲಿ ರಾತ್ರಿ ವೇಳೆಯೂ ಬೀಸಲಿದೆ ಉಷ್ಣ ಅಲೆ: ಜನತೆಗೆ ಆರೋಗ್ಯ ಇಲಾಖೆ ಸೂಚನೆ

ಬೆಂಗಳೂರು: ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ತಾಪಮಾನ ಹೆಚ್ಚಾಗಿದ್ದು, ಜನರು ಹೈರಾಣಾಗಿದ್ದಾರೆ. ಸುಡು ಬಿಸಿಲು ಹಾಗೂ ಸೆಖೆಯಿಂದಾಗಿ ಕರುನಾಡ ಜನರು…

11 hours ago

ಮುತ್ತತ್ತಿಯಲ್ಲಿ ನೀರಿಗಿಳಿದ ಯುವಕ ಸಾವು

ಮುತ್ತತ್ತಿಯಲ್ಲಿ ನೀರಿಗಿಳಿದ ಯುವಕ ಸಾವು ಹಲಗೂರು: ಇಲ್ಲಿಗೆ ಸಮೀಪದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ತೀವ್ರ ಸೆಳೆತಕ್ಕೆ…

12 hours ago

ಛತ್ತೀಸ್‌ಗಢದಲ್ಲಿ ಖಾಸಗಿ ವಿಮಾನ ಪತನ: ಪೈಲಟ್‌ ಹಾಗೂ ಕೋ ಪೈಲಟ್‌ ಸಾವು

ರಾಯ್ಪುರ: ಛತ್ತೀಸ್‌ಗಢದಲ್ಲಿ ಖಾಸಗಿ ವಿಮಾನವೊಂದು ಪತನವಾಗಿದ್ದು, ಪೈಲಟ್‌ ಹಾಗೂ ಸಹ ಪೈಲಟರ್‌ ಇಬ್ಬರೂ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಛತ್ತೀಸ್‌ಗಢದ…

12 hours ago