narrendra modi
ಬಿಕನೇರ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‍ನಲ್ಲಿ ನಡೆದ ನರಮೇಧಕ್ಕೆ ಪ್ರತೀಕಾರವಾಗಿ ಭಾರತೀಯ ಸೇನಾ ಪಡೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಕೇವಲ 22 ನಿಮಿಷದಲ್ಲಿ ಸೇಡು ತೀರಿಸಿಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.
ಪಾಕಿಸ್ತಾನ ಹಾಗೂ ಪಿಒಕೆ ಮೇಲೆ ನಡೆದ ಆಪರೇಷನ್ ಸಿಂಧೂರ್ ನಂತರ ರಾಜಸ್ಥಾನದ ಬಿಕನೇರ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಏಪ್ರಿಲ್.22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತವು 22 ನಿಮಿಷದಲ್ಲೇ ಸೇಡು ತೀರಿಸಿಕೊಂಡಿದೆ. ಇದು ನಮ್ಮ ಸೇನಾ ಪಡೆಯ ತಾಕತ್ತು ಎಂದು ಬಣ್ಣಿಸಿದ್ದಾರೆ.
ಏ.22ರ ದಾಳಿಗೆ ಪ್ರತಿಯಾಗಿ ನಾವು ಭಯೋತ್ಪಾದಕರ 9 ಅಡಗುತಾಣಗಳನ್ನು 22 ನಿಮಿಷದಲ್ಲಿ ನಾಶಪಡಿಸಿದೆವು. ಸಿಂಧೂರವು ಪುಡಿಯಾಗಿ ಬದಲಾದರೆ ಏನಾಗುತ್ತದೆ ಎಂಬುದಕ್ಕೆ ವಿಶ್ವಕ್ಕೆ ಮತ್ತು ನಮ್ಮ ಶತ್ರುಗಳಿಗೆ ತೋರಿಸಿದ್ದೇವೆ ಎಂದು ಸೇನಾಪಡೆಯ ಕಾರ್ಯಾಚರಣೆ ಬಗ್ಗೆ ಕೊಂಡಾಡಿದರು.
ನನ್ನ ರಕ್ತನಾಳಗಳಲ್ಲಿ ಕುದಿಯುತ್ತಿರುವುದು ರಕ್ತವಲ್ಲ. ಅದು ಸಿಂಧೂರ ಎಂದು ಮೋದಿ ಹೇಳುತ್ತಿದ್ದಂತೆ ಜನಸ್ತೋಮದಿಂದ ಮೋದಿ.. ಮೋದಿ.. ಎಂಬ ಜೈಕಾರದ ಘೋಷಣೆಗಳು ಮೊಳಗಿದವು.
ಭಾರತದ ತಂಟೆಗೆ ಬರುವ ಮುನ್ನ ನೂರು ಬಾರಿ ಯೋಚಿಸಿ ಎಂದು ಪಾಕ್‍ಗೆ ಎಚ್ಚರಿಕೆ ಕೊಟ್ಟರು. ವಾಯುಸೇನೆ, ನೌಕಾಸೇನೆ ಮತ್ತು ಭೂಸೇನೆಗಳಿಗೆ ನಾವು ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ. ಸಿಂಧೂರವನ್ನು ಅಳಿಸಿ ಹಾಕಿದ ಪಾತಕಿಗಳನ್ನು ನೆಲದಲ್ಲೇ ಹೂತು ಹಾಕಿ ಎಂದು ಹೇಳಿದ್ದೆವು. ಅದರಂತೆ ಸಶಸ್ತ್ರ ಪಡೆಗಳು ಅದೇ ಕೆಲಸವನ್ನು ಮಾಡಿವೆ ಎಂದು ಪ್ರಸಂಶಿಸಿದರು.
ನಾವು ಯಾವುದೇ ರಾಷ್ಟ್ರದ ಪರಮಾಣುಗಳಿಗೆ ಹೆದರುವುದಿಲ್ಲ. ಹಾಗಂತ ಪರಿಸ್ಥಿತಿ ಕೈ ಮೀರಿದರೆ ಸುಮ್ಮನೆ ಕೂರುವುದಿಲ್ಲ. ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂದು ಪರೋಕ್ಷವಾಗಿ ಶತ್ರು ರಾಷ್ಟ್ರಕ್ಕೆ ಎಚ್ಚರಿಕೆ ಕೊಟ್ಟರು.
ಬೆಂಡರವಾಡಿ ಕೆರೆಗೆ ಹಾರಿ ಮಂಡ್ಯ ಜಿಲ್ಲೆಯ ವ್ಯಕ್ತಿ ಆತ್ಮಹತ್ಯೆ ಚಾಮರಾಜನಗರ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ…
ಹೈದರಾಬಾದ್: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಹೈದರಾಬಾದ್‌ನಲ್ಲಿ ಅವರ ಮನೆಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. 2016ರಲ್ಲಿ ನಿಧನರಾದ ಜಯಲಲಿತಾ…
ಬೆಂಗಳೂರು: ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಪಕ್ಕಾ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ…
ಬೆಂಗಳೂರು: ಇಲ್ಲಿನ ಯಲಹಂಕ ಠಾಣೆ ಪೊಲೀಸರು, ಸುಮಾರು 2 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದು, ನೈಜೀರಿಯಾ ಮೂಲದ…
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಭಾರತೀಯ ಟೆನಿಸ್ ಐಕಾನ್ ಲಿಯಾಂಡರ್ ಪೇಸ್ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.…
ಬೆಂಗಳೂರು: ಖಾಸಗಿ ಶಾಲೆಗಳು ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ 2026-27ನೇ ಸಾಲಿನ ಶುಲ್ಕವನ್ನು 5-10%, ಮತ್ತೆ ಕೆಲವು 10-15% ವರೆಗೆ ಏರಿಕೆ ಮಾಡಿವೆ.…