ದೇಶ- ವಿದೇಶ

ಜಮ್ಮು-ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: ನಾಲ್ವರು ಸಾವು

ಜಮ್ಮು-ಕಾಶ್ಮೀರ: ಜಮ್ಮ ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸಂಭವಿಸಿದ ಮೇಘಸ್ಪೋಟದಿಂದ ಹಠಾತ್‌ ಪ್ರವಾಹ ಉಂಟಾಗಿ ನಾಲ್ವರು ಮೃತಪಟ್ಟಿದ್ದಾರೆ.

ಪ್ರವಾಹದಿಂದ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಥುವಾ, ಸಾಂಬಾ, ದೋಡಾ, ಜಮ್ಮು, ರಾಂಬನ್‌ ಮತ್ತು ಕಿಶ್ತ್ವಾನ್‌ ಜಿಲ್ಲೆಗಳು ಸೇರಿದಂತೆ ಜಮ್ಮು ಪ್ರದೇಶದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ.

ಅನೇಕ ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಮೀರಿ ಹರಿಯುತ್ತಿದ್ದು, ರಾತ್ರಿಯಿಡೀ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಜಮ್ಮು ಪ್ರದೇಶದಲ್ಲಿ ಪ್ರವಾಹದ ಎಚ್ಚರಿಕೆ ನೀಡಲಾಗಿದ್ದು, ಜನರು ಜಲಮೂಲಗಳು ಹಾಗೂ ಭೂಕುಸಿತ ಪೀಡಿತ ಪ್ರದೇಶಗಳಿಂದ ದೂರವಿರಲು ಸೂಚನೆ ನೀಡಲಾಗಿದೆ.

ಆಂದೋಲನ ಡೆಸ್ಕ್

Recent Posts

ಜಮೀನುಗಳಲ್ಲಿ ಹುಲಿ ಹಾವಳಿ: ಕೂಲಿ ಕೆಲಸಕ್ಕೆ ಕಾರ್ಮಿಕರ ಹಿಂದೇಟು

ಚಾಮರಾಜನಗರ: ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಚಿರತೆ ಮತ್ತು ಆನೆಗಳ ದಾಳಿಯ ಬೆನ್ನಲ್ಲೇ, ಈಗ ಹುಲಿರಾಯನ…

34 mins ago

ಚಿರತೆ ದಾಳಿ: ಕೂಲಿ ಕಾರ್ಮಿಕನಿಗೆ ಗಾಯ

ಹುಣಸೂರು: ಕೂಲಿ ಕಾರ್ಮಿಕನ ಮೇಲೆ ಚಿರತೆ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಹನಗೋಡು ಹೋಬಳಿಯ ಕಣಗಾಲು ಗ್ರಾಮದ…

4 hours ago

ಓದುಗರ ಪತ್ರ: ಡಾಂಬರು ಕಾಣದ ಕಾಳಿಹುಂಡಿ ರಸ್ತೆ

ಸರಗೂರು ತಾಲ್ಲೂಕಿನ ಕಾಳಿಹುಂಡಿ ಗ್ರಾಮದ ರಸ್ತೆ ಡಾಂಬರು ಕಾಣದೆ ಹಲವು ವರ್ಷಗಳೇ ಆಗಿವೆ. ಈ ರಸ್ತೆಯು ಹಳ್ಳಕೊಳ್ಳಗಳಿಂದ ಕೂಡಿದೆ. ಈ…

4 hours ago

ಓದುಗರ ಪತ್ರ: ಬಿರು ಬೇಸಿಗೆಯಲ್ಲಿ ಇರಲಿ ಎಚ್ಚರ

ಬೇಸಿಗೆ ಶುರುವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸುಮಾರು ೩೪ ಸೆಲ್ಸಿಯಸ್‌ಗೂ ಹೆಚ್ಚು ಪ್ರಮಾಣದಲ್ಲಿ ಬಿಸಿಲಿನ ತಾಪ ಮಾನ ಏರಿಕೆಯಾಗಿರುವ…

4 hours ago

ಜಾ.ದಳ ತಾಲ್ಲೂಕು ಅಧ್ಯಕ್ಷ ಸ್ಥಾನಕ್ಕೆ ಮುಖಂಡರ ಪೈಪೋಟಿ

ಮಂಜು ಕೋಟೆ ಕೋಟೆ: ರಾಜೇಂದ್ರ, ಸಿ.ವಿ.ನಾಗರಾಜು, ಯೋಗಾನರಸಿಂಹೇಗೌಡ, ಗುಂಡತ್ತೂರು ಪ್ರಕಾಶ್ ಪ್ರಬಲ ಆಕಾಂಕ್ಷಿಗಳು ಎಚ್.ಡಿ.ಕೋಟೆ: ಜಾ.ದಳ ತಾಲ್ಲೂಕು ಅಧ್ಯಕ್ಷರನ್ನು ನೇಮಕ…

4 hours ago

ಎಲ್ಲೆಂದರಲ್ಲಿ ಕಸ ಸುರಿದರೆ ಬೀಳಲಿದೆ ದಂಡ!

ಪುರಸಭೆಯಿಂದ ಹಲವು ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆ; ಸ್ವಚ್ಛ ಪಟ್ಟಣಕ್ಕೆ ಸಹಕರಿಸಲು ಮನವಿ ಗುಂಡ್ಲುಪೇಟೆ: ಪಟ್ಟಣದ ಕೆಲವೆಡೆ ಕಸ ಸುರಿಯದಂತೆ ಎಚ್ಚರಿಕೆ…

4 hours ago