ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬಕ್ಕೆ ಸೋಮವಾರ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಶಂಕಿತ ಆರೋಪಿಯನ್ನು ದಕ್ಷಿಣ ಮುಂಬೈಯ ಜ್ಯುವೆಲ್ಲರ್, ವಿಷ್ಣು ಭೌಮಿಕ್ ಎಂದು ಗುರುತಿಸಲಾಗಿದೆ. ಈತ ಕರೆ ಮಾಡುವಾಗ ಅಫ್ಜಲ್ ಎಂದು ಹೆಸರು ಹೇಳಿದ್ದ. ಸೋಮವಾರ ಎರಡು ಗಂಟೆ ಅವಧಿಯಲ್ಲಿ ಭೌಮಿಕ್ 8 ಬಾರಿ ಕರೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ. 56ರ ಹರೆಯದ ಭೌಮಿಕ್ ಒಂದು ಬಾರಿ ಕರೆ ಮಾಡಿದಾಗ ಧೀರೂಬಾಯಿ ಅಂಬಾನಿ ಹೆಸರನ್ನೂ ಉಲ್ಲೇಖಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ದಹೀಸರ್ ನಿವಾಸಿಯಾಗಿದ್ದು ಈತನ ಕ್ರಿಮಿನಲ್ ರೆಕಾರ್ಡ್ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸೋಮವಾರ ಅಂಬಾನಿ ಕುಟುಂಬಕ್ಕೆ ಹಲವಾರು ಬೆದರಿಕೆ ಕರೆಗಳು ಬಂದಿತ್ತು.ರಿಲಯನ್ಸ್ ಫೌಂಡೇಷನ್ ನ ಹರ್ಕಿಸನ್ ದಾಸ್ ಆಸ್ಪತ್ರೆಯ ಫೋನ್ ನಂಬರ್ ಗೆ ಬೆಳಗ್ಗೆ 10.30ರ ಹೊತ್ತಿಗೆ ಕರೆ ಬಂದಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮತ್ತು ಕುಟುಂಬಕ್ಕೆ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ರಿಲಯನ್ಸ್ ಫೌಂಡೇಷನ್ ದೂರು ದಾಖಲಿಸಿತ್ತು. ಆಸ್ಪತ್ರೆಯ ಸಂಖ್ಯೆಗೆ ಮೂರಕ್ಕಿಂತ ಹೆಚ್ಚು ಬಾರಿ ಕರೆ ಬಂದಿತ್ತು. ತನಿಖೆ ಪ್ರಗತಿಯಲ್ಲಿದೆ ಎಂದು ಮುಂಬೈ ಪೊಲೀಸ್ ಹೇಳಿದ್ದಾರೆ.
ಈ ಪ್ರಕರಣ ಬಗ್ಗೆ ಕೆಲವು ಕೇಂದ್ರೀಯ ಸಂಸ್ಥೆಗಳು ಮಾಹಿತಿ ಕೇಳಿವೆ ಎಂದು ಪೊಲೀಸರು ಹೇಳಿದ್ದಾರೆ. ಶಂಕಿತ ಆರೋಪಿ ಮುಖೇಶ್ ಅಂಬಾನಿಗೆ ಬೆದರಿಕೆ ಕರೆ ನೀಡ ನಿಂದಿಸಿದ್ದಾನೆ. ಬೆದರಿಕೆ ಮತ್ತು ಅಪರಾಧ ಕೃತ್ಯವೆಸಗಿದ್ದಕ್ಕಾಗಿ ಸೆಕ್ಷನ್ 506(2) ಅಡಿಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ನಿಲೋತ್ಪಲ್ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಕಳೆದ ವರ್ಷ ಅಂಬಾನಿ ನಿವಾಸದ ಬಳಿ ಸ್ಕಾರ್ಪಿಯೊ ಕಾರಿನಲ್ಲಿ 20 ಸ್ಫೋಟಕ ಜೆಲೆಟಿನ್ ಕಡ್ಡಿ ಮತ್ತು ಬೆದರಿಕೆ ಪತ್ರ ಪತ್ತೆಯಾಗಿತ್ತು. ಪೊಲೀಸರು ಇದರ ಬಗ್ಗೆ ತನಿಖೆ ನಡೆಸಿದಾಗ ಕಾರಿನ ಮಾಲೀಕ ಥಾಣೆ ಮೂಲದ ಮನ್ಸುಖ್ ಹಿರೇನ್ ಎಂಬುದು ತಿಳಿದುಬಂದಿದ್ದು, ಈತನ ಶವ ಪತ್ತೆಯಾಗಿತ್ತು. ಅಂತಿಮವಾಗಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪೊಲೀಸ್ ಅಧಿಕಾರಿಗಳು ಸೇರಿದಂತೆ ಮಾಸ್ಟರ್ ಮೈಂಡ್ ಅನ್ನು ಬಂಧಿಸಲಾಯಿತು.
ಬೆಂಗಳೂರು: ಸಿಇಟಿ ಕೇಂದ್ರದಲ್ಲಿ ಜನಿವಾರ ತೆಗೆಸಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್…
ಬೆಂಗಳೂರು: ರಾಜ್ಯದ ವಿವಿಧ ನಗರಗಳಲ್ಲಿ ಸುಡುತ್ತಿರುವ ಬಿಸಿಲು ಮತ್ತು ಹೆಚ್ಚುತ್ತಿರುವ ಧೂಳಿನ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಪೊಲೀಸರ ನೆರವಿಗೆ…
ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ…
ಬೆಂಗಳೂರು: ಒಳಮೀಸಲಾತಿ ಬಗ್ಗೆ ಹಲವು ವರ್ಷಗಳಿಂದ ಇದ್ದ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತೆರೆ ಎಳೆದಿದೆ. ಸಿಎಂ ಸಿದ್ದರಾಮಯ್ಯ…
ಸೋಮವಾರಪೇಟೆ: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮದಲ್ಲಿನ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.…