ದೇಶ- ವಿದೇಶ

ಆರೋಪ ಸಾಬೀತಾದರೆ ರಾಜೀನಾಮೆ: ಮಲ್ಲಿಕಾರ್ಜುನ ಖರ್ಗೆ ಸವಾಲು

ನವದೆಹಲಿ: ವಕ್ಫ್‌ ಜಮೀನು ಕಬಳಿಕೆ ಆರೋಪ ಸಾಬೀತಾದರೆ ರಾಜೀನಾಮೆ ನೀಡುತ್ತೇನೆ. ಇಲ್ಲ ಅಂದರೆ ನೀವು ರಾಜೀನಾಮೆ ನೀಡಬೇಕು ಎಂದು ಹೇಳುವ ಮೂಲಕ ಸಂಸದ ಅನುರಾಗ್‌ ಠಾಕೂರ್‌ ಹೇಳಿಕೆಗೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.

ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಅವರು, ಅನುರಾಗ್‌ ಠಾಕೂರ್‌ ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ. ಇದರಿಂದ ನನ್ನ ಚಾರಿತ್ರ್ಯ ಗೌರವಕ್ಕೆ ಧಕ್ಕೆಯಾಗಿದೆ. 60 ವರ್ಷದ ರಾಜಕೀಯದಲ್ಲಿ ಇಂತಹ ಆರೋಪ ನಿರೀಕ್ಷಿಸಿರಲಿಲ್ಲ. ಅನುರಾಗ್‌ ಠಾಕೂರ್‌ ಅವರ ಹೇಳಿಕೆ ವಿರೋಧಿಸಬೇಕಿದೆ ಎಂದರು.

ವಿಧಾನಸಭೆಯಲ್ಲಿ ಯಾರು ನನಗೆ ಬೆರಳೆತ್ತಿ ಮಾತನಾಡಲ್ಲ. ಬಿಜೆಪಿ ಮಾತ್ರ ನನ್ನ ಎದುರಿಸುವ ಪ್ರಯತ್ನ ಮಾಡುತ್ತಿದೆ. ಇಂತಹ ಬೆದರಿಕೆಗೆ ನಾನು ಹೆದರುವುದಿಲ್ಲ. ವಕ್ಫ್‌ ಭುಮಿಯನ್ನು ಒಂದಿಂಚೂ ಕಬಳಿಸಿಲ್ಲ. ಹೀಗಾಗಿ ಠಾಕೂರ್‌ ಕ್ಷಮೆ ಕೇಳಲೆಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದರು.

ಆಂದೋಲನ ಡೆಸ್ಕ್

Recent Posts

IPL2025: ಪಂಜಾಬ್‌ ವಿರುದ್ಧ ರಾಜಸ್ತಾನಕ್ಕೆ 50 ರನ್‌ಗಳ ಜಯ

ಚಂಡೀಗಢ: ಯಶಸ್ವಿ ಜೈಸ್ವಾಲ್‌ 67(45) ಅಬ್ಬರದ ಅರ್ಧಶತಕ ಹಾಗೂ ಬೌಲರ್‌ಗಳ ಬಿಗು ಬೌಲಿಂಗ್‌ ದಾಳಿಯಿಂದ ರಾಜಸ್ತಾನ ರಾಯಲ್ಸ್‌ ತಂಡ ಪಂಜಾಬ್‌…

5 hours ago

ವಿದೇಶಿ ಪದವಿಗೆ ಮಾನ್ಯತೆ ನೀಡಲು ಯುಜಿಸಿ ಹೊಸ ನಿಯಮ

ನವದೆಹಲಿ: ವಿದೇಶದಲ್ಲಿನ ಶೈಕ್ಷಣಿಕ ಸಂಸ್ಥೆಗಳಿಂದ ಪದವಿ ಪಡೆದ ವಿದ್ಯಾರ್ಥಿಗಳಿಗೆ ಮಾನ್ಯತೆ ನೀಡುವ ಉದ್ದೇಶದಿಂದ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಹೊಸ…

6 hours ago

“ಏಕರೂಪ ನಾಗರಿಕ ಸಂಹಿತೆ” ಜಾರಿಯ ಅಗತ್ಯವಿದೆ: ಹೈಕೋರ್ಟ್‌

ಬೆಂಗಳೂರು: ಸಂವಿಧಾನದ ಮೂಲಭೂತ ಆಶಯಗಳನ್ನು ಸಾಕಾರಗೊಳಿಸಲು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಯ ಅವಶ್ಯಕತೆ ಇದೆ ಎಂದು ಹೈಕೋರ್ಟ್‌…

7 hours ago

ʼಹೈʼ ಸೂಚಿಸಿದರೆ ಕೆಪಿಸಿಸಿ ಸ್ಥಾನ ಬಿಡಲು ಡಿಕೆಶಿ ಸಿದ್ದ: ಬಾಲಕೃಷ್ಣ

ರಾಮನಗರ: ಕಾಂಗ್ರೆಸ್‌ ಹೈಕಮಾಂಡ್‌ ಹೇಳಿದರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ತೊರೆಯಲು ಸಿದ್ದರಿದ್ದಾರೆ ಎಂದು ಕಾಂಗ್ರೆಸ್‌…

7 hours ago

3.80 ಕೋಟಿ ವೆಚ್ಚದಲ್ಲಿ ಬಾಬು ಜಗಜೀವನರಾಮ್‌ ಭವನ: ಎನ್‌. ಚೆಲುವರಾಯಸ್ವಾಮಿ

ಮಂಡ್ಯ: 3.80 ಕೋಟಿ ವೆಚ್ಚದಲ್ಲಿ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಮ್‌ ಭವನ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ…

8 hours ago

ಏ.7 ರಂದು ಮೇಲುಕೋಟೆ ವೈರಮುಡಿ ಬ್ರಹ್ಮೋತ್ಸವ| ಜಿಲ್ಲಾಡಳಿದಿಂತ ಸಕಲ ಸಿದ್ಧತೆ ಆಗಿದೆ: ಎನ್‌.ಚಲುವರಾಯಸ್ವಾಮಿ

ಮಂಡ್ಯ: ಜಿಲ್ಲೆಯ ಪಾಂಡಪುರ ತಾಲ್ಲೂಕಿನ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಏಪ್ರಿಲ್‌.7 ರಂದು ಅದ್ದೂರಿಯಾಗಿ ಜರುಗಲಿದ್ದು, ಇದಕ್ಕೆ ಜಿಲ್ಲಾಡಳಿತದಿಂದ…

9 hours ago