ದೇಶ- ವಿದೇಶ

ಉತ್ತರ ಸಿಕ್ಕಿಂನಲ್ಲಿ ಭೂಕುಸಿತ : ಚುಂಗಾಥಾಂಗ್‌ನಲ್ಲಿ ಸಿಲುಕಿದ 200 ಪ್ರವಾಸಿಗರು

ಸಿಕ್ಕಿಂ : ಉತ್ತರ ಸಿಕ್ಕಿಂನಲ್ಲಿ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿ, ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸುಮಾರು 200 ಪ್ರವಾಸಿಗರು ಚುಂಗ್‌ಥಾಂಗ್‌ನಲ್ಲಿ ಸಿಲುಕಿಕೊಂಡಿದ್ದಾರೆ.

ಮಂಗಳವಾರ ರಾತ್ರಿ (ಮಾ.24) ಚುಂಗ್‌ಥಾಂಗ್-ಲಾಚೆನ್ ಮಾರ್ಗದ ಹಲವೆಡೆ ಭೂಕುಸಿತ ಸಂಭವಿಸಿದೆ. ಇದರಿಂದ ಲಾಚೆನ್‌ಗೆ ತೆರಳುತ್ತಿದ್ದ ಪ್ರವಾಸಿಗರು ಮಧ್ಯದಲ್ಲಿ ಸಿಲುಕಿಕೊಂಡಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ಪ್ರವಾಸಿಗರಿಗೆ ಚುಂಗ್‌ಥಾಂಗ್‌ನಲ್ಲಿರುವ ಐಟಿಬಿಪಿ ಶಿಬಿರ ಮತ್ತು ಗುರುದ್ವಾರದಲ್ಲಿ ವಸತಿ ಕಲ್ಪಿಸಲಾಗಿದೆ ಎಂದು ಮಂಗನ್ ಜಿಲ್ಲಾಧಿಕಾರಿ ಅನಂತ್ ಜೈನ್ ಮಾಹಿತಿ ನೀಡಿದ್ದಾರೆ.

ರಸ್ತೆಗಳಲ್ಲಿ ಬಿದ್ದಿರುವ ಕಲ್ಲು ಹಾಗೂ ಮಣ್ಣಿನ ತೆರವು ಕಾರ್ಯ ನಡೆಯುತ್ತಿದೆ. ಅಧಿಕಾರಿಗಳು ಭೂಕುಸಿತದ ಸ್ಥಳಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ ಹವಾಮಾನ ಪರಿಸ್ಥಿತಿಗಳನ್ನು ಅವಲಂಬಿಸಿ ಈ ಮಾರ್ಗಗಳು ಸಂಚಾರಕ್ಕೆ ಸುರಕ್ಷಿತವೆಂದು ಘೋಷಿಸಿದ ನಂತರ ಪ್ರವಾಸಿಗರಿಗೆ ಅವಕಾಶ ನೀಡಬಹುದು ಎಂದು ಅವರು ಹೇಳಿದ್ದಾರೆ.

ಈ ಪ್ರದೇಶದಲ್ಲಿ ನಿರಂತರ ಮಳೆಯಾಗುವುದರಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಭಾರೀ ಹಿಮಪಾತದಿಂದಾಗಿ ತ್ಸೊಮ್ಗೊ ಸರೋವರ ಮತ್ತು ನಾಥುಲಾದಂತಹ ಪ್ರಮುಖ ಪ್ರವಾಸಿ ತಾಣಗಳು ಮುಚ್ಚಲ್ಪಟ್ಟಿವೆ.

2023ರ ಹಿಮನದಿ ಸರೋವರ ಪ್ರವಾಹದಿಂದ ತೀವ್ರವಾಗಿ ಹಾನಿಗೊಳಗಾದ ಲಾಚೆನ್ ಮಾರ್ಗವು ಇತ್ತೀಚೆಗೆ ಮಾರ್ಚ್ 9 ರಂದು ಮತ್ತೆ ತೆರೆಯಲ್ಪಟ್ಟಿತ್ತು.

ಆಂದೋಲನ ಡೆಸ್ಕ್

Recent Posts

ಹನೂರು | ಪಶುವೈದ್ಯಾಧಿಕಾರಿಗಳ ನಿರ್ಲಕ್ಷದಿಂದ ಸಾವಿಗೀಡಾದ 500 ನಾಟಿ ಕೋಳಿಗಳು

ಹನೂರು : ತಾಲೂಕಿನ ಲೊಕ್ಕನಹಳ್ಳಿ ಗ್ರಾಮದ ಮನೋಹರ್ ಎಂಬುವರಿಗೆ ಸೇರಿದ 500ಕ್ಕೂ ಹೆಚ್ಚು ನಾಟಿ ಕೋಳಿಗಳಿಗೆ ರೋಗ ತಗುಲಿ ಮೃತಪಟ್ಟಿದ್ದರು,…

11 mins ago

ಕಾಂತಾರಾ ಮಿಮಿಕ್ರಿ ವಿವಾದ : ಚಾಮುಂಡಿ ಬೆಟ್ಟಕ್ಕೆ ಭೇಡಿ ನೀಡಲಿದ್ದಾರೆ ನಟ ರಣವೀರ್‌ ಸಿಂಗ್‌

ಮುಂಬೈ : ‘ಕಾಂತಾರ’ ಸಿನಿಮಾದಲ್ಲಿ ದೈವದ ಕುರಿತು ವೇದಿಕೆ ಮೇಲೆ ಅನುಕರಣೆ ಮಾಡಿ ‘ಫೀಮೇಲ್ ಗೋಸ್ಟ್’ ಎಂದು ಕರೆದು ವಿವಾದಕ್ಕೆ…

1 hour ago

ಸಂಘರ್ಷ ಶಮನಕ್ಕೆ 15 ಅಂಶ ಮುಂದಿಟ್ಟ ಟ್ರಂಪ್‌ ; ಸಂಧಾನ ಅಣಕಿಸಿದ ಇರಾನ್‌

ವಾಷಿಂಗ್ಟನ್‌ : ಪಶ್ಚಿಮ ಏಪ್ಯಾ ಸಂಘರ್ಷ ಶಮನಕ್ಕೆ ನಡೆಯುತ್ತಿರುವ ಪ್ರಯತ್ನಗಳ ಮಧ್ಯೆ, ಟ್ರಂಪ್ ಆಡಳಿತ 15 ಅಂಶಗಳ ಪ್ರಸ್ತಾವನೆಯನ್ನು ಇರಾನ್…

2 hours ago

ಹನೂರು | ಬಾವಿಗೆ ಬಿದ್ದ ಶ್ವಾನ, ಅಗ್ನಿಶಾಮಕ ಠಾಣಾ ಸಿಬ್ಬಂದಿಗಳಿಂದ ರಕ್ಷಣೆ

ಹನೂರು : ನೀರಿರುವ ಬಾವಿಗೆ ಬಿದ್ದಿದ್ದ ಶ್ವಾನವನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಘಟನೆಯ ವಿವರ ಹನೂರು…

3 hours ago

ಎಲ್‌ಪಿಜಿ ಕೊರತೆ ಪರಿಸ್ಥಿತಿ ; ಹಾಲಿನ ವಹಿವಾಟು ಯಥಾಸ್ಥಿತಿ

ಕೆ.ಬಿ.ರಮೇಶ ನಾಯಕ ಮೈಸೂರು : ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವಯುದ್ಧದ ಪರಿಣಾಮದಿಂದಾಗಿ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಗೆ ದೊಡ್ಡ ಹೊಡೆತ ಬಿದ್ದು…

3 hours ago

ಓದುಗರ ಪತ್ರ | ಶಾಸನಸಭೆಗಳಲ್ಲಿ ಹೊಸ ಯೋಜನೆಗಳ ಚರ್ಚೆಯಾಗಲಿ

ಕರ್ನಾಟಕ ವಿಧಾನಸಭೆ ಹಾಗೂ ಸಂಸತ್‌ ಮೇಲನೆ ಹಾಗೂ ಕೆಳಮನೆಗಳಲ್ಲಿ 2026ರ (ಬಜೆಟ್ ಮೇಲಿನ ಚರ್ಚೆ) ಮುಂದುವರಿದ ಅಧಿವೇಶನಗಳು ನಡೆಯುತ್ತಿವೆ. ಬಜೆಟ್…

3 hours ago