ಬೆಂಗಳೂರು: ಕೋಲ್ಕತ್ತಾ ವೈದ್ಯರ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣವನ್ನು ಸ್ಯಾಂಡಲ್‌ವುಡ್ ನಟ ಧ್ರುವಸರ್ಜಾ ಖಂಡಿಸಿದ್ದಾರೆ.
ಆಗಸ್ಟ್.9ರಂದು ರಾತ್ರಿ ಪಾಳಿಯಲ್ಲಿದ್ದ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ಸುಮಾರು 36 ಗಂಟೆಗಳ ಕಾಲ ನಿರಂತರ ಕೆಲಸ ಮಾಡಿದ್ದ ವೈದ್ಯೆ ವಿಶ್ರಾಂತಿಗೆಂದು ತೆರಳಿದ್ದರು. ಆ ವೇಳೆ ಅತ್ಯಾಚಾರ ಮಾಡಿ, ಹಿಂಸೆ ಕೊಟ್ಟು ಹತ್ಯೆ ಮಾಡಲಾಗಿತ್ತು.
ಕ್ರೂರಿಯ ಈ ಕೃತ್ಯದ ವಿರುದ್ಧ ವೈದ್ಯರು ಪ್ರತಿಭಟನೆ ಮಾಡುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ ಧ್ರುವ ಸರ್ಜಾ ಕೂಡ ಆಕ್ರೋಶ ಹೊರಹಾಕಿದ್ದು, ಕ್ರೂರಿಗೆ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಮಾರ್ಟಿನ್ ಚಿತ್ರದ ಪ್ರಮೋಷನ್‌ನಲ್ಲಿರುವ ನಟ ಧ್ರುವ ಸರ್ಜಾ ಅವರು, ಅದರಿಂದ ಬಿಡುವು ಮಾಡಿಕೊಂಡು ವಿಡಿಯೋ ಮಾಡಿದ್ದಾರೆ. ನಮ್ಮದು ರಾಮಜನ್ಮಭೂಮಿ ಅಂತ ಕರೆಯುತ್ತೇವೆ. ಕೆಲವು ಕಿಡಿಗೇಡಿಗಳು ಮಾಡುತ್ತಿರುವ ಕೃತ್ಯಗಳಿಂದ ನಿಜವಾಗಲೂ ನಮ್ಮ ಭಾರತಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಕಿಡಿಕಾರಿದ್ದಾರೆ.
ಪ್ರತಿಯೊಬ್ಬರ ಮನೆಯಲ್ಲಿಯೂ ಗಂಡು ಮಕ್ಕಳಿಗೆ ಮೂರು ವಿಷಯಗಳನ್ನು ಹೇಳಿಕೊಡಬೇಕು. ಹೇಗೆ ಹೆಣ್ಣು ಮಕ್ಕಳನ್ನು ಪ್ರೊಟೆಕ್ಟ್ ಮಾಡಬೇಕು. ಹೇಗೇ ಸಪೋರ್ಟ್ ಮಾಡುವುದು. ಹೇಗೆ ರೆಸ್ಪೆಕ್ಟ್ ಕೊಡಬೇಕು ಎಂದು ಹೇಳಿಕೊಡಲೇಬೇಕು.
ಅತ್ಯಾಚಾರ ಮಾಡಿದವರನ್ನು ನಡು ರಸ್ತೆಯಲ್ಲಿ ನಿಂತು ಸುಟ್ಟಾಕಿದರೂ ಸಮಾಧಾನ ಆಗಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್…
ಮೈಸೂರು: ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡುತ್ತಿರುವವರು ಯಾರು ಅನ್ನೋದು ಗೊತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದ್ದಾರೆ. ಮುಡಾ ಪ್ರಕರಣಕ್ಕೆ…
ನವದೆಹಲಿ: ಸಂಸತ್ ಭವನದ ಸಂಕೀರ್ಣದಲ್ಲಿ ಬಿಜೆಪಿ ಸಂಸದರು ನನ್ನನ್ನು ತಳ್ಳಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ…
ಬೆಳಗಾವಿ: ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ವಿರುದ್ಧ ದೇಶಾದ್ಯಂತ ವ್ಯಾಪಕ…
ಬೆಳಗಾವಿ: ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ…
ಬೆಳಗಾವಿ: ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಪ್ರಜೆಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ…