ಬೀಜಿಂಗ್: ಆಗ್ನೇಯ ಚೀನಾದ ಜಿಯಾಂಕ್ಸಿ ಪ್ರಾಂತ್ಯದ ಶಿಶುವಿಹಾರದಲ್ಲಿ ಬುಧವಾರ ನಡೆದ ಚಾಕು ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯ ಸಮಯ ಬೆಳಗ್ಗೆ 10:00 ಗಂಟೆಗೆ (0200 GMT) ಆನ್‌ಫು ಕೌಂಟಿಯ ಖಾಸಗಿ ಶಿಶುವಿಹಾರಕ್ಕೆ ಕ್ಯಾಪ್ ಮತ್ತು ಮಾಸ್ಕ್ ಧರಿಸಿದ ದುಷ್ಕರ್ಮಿ ಪ್ರವೇಶಿಸಿದ್ದನು ಎಂದು ಚೀನಾದ ವೈಬೊದಲ್ಲಿ ಪ್ರಕಟವಾದ ಹೇಳಿಕೆಯಲ್ಲಿ ಪೊಲೀಸರು ತಿಳಿಸಿದ್ದಾರೆ. 48 ವರ್ಷದ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕ ಭದ್ರತಾ ಸಂಸ್ಥೆಗಳು ಶಂಕಿತನನ್ನು ಸೆರೆಹಿಡಿಯಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ. ಬೀಜಿಂಗ್ ಡೈಲಿ ಹಂಚಿಕೊಂಡ ವಿಡಿಯೊದಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ತನ್ನ ತೋಳುಗಳಲ್ಲಿ ಪುಟ್ಟ ಮಗುವನ್ನು ಆಂಬ್ಯುಲೆನ್ಸ್‌ಗೆ ಸಾಗಿಸುತ್ತಿರುವುದನ್ನು ಕಾಣಬಹುದು. ಹತ್ಯೆಯಾದ ಮಕ್ಕಳ ವಯಸ್ಸು ಬಹಿರಂಗ ಪಡಿಸಿಲ್ಲ.
ಚೀನಾದಲ್ಲಿ ಸಾಮೂಹಿಕ ಹಿಂಸಾತ್ಮಕ ಅಪರಾಧ ತುಂಬಾನೇ ಕಡಿಮೆ. ಇಲ್ಲಿನ ನಾಗರಿಕರು ಬಂದೂಕುಗಳನ್ನು ಹೊಂದುವುದನ್ನು ಸರ್ಕಾರ ಕಟ್ಟುನಿಟ್ಟಾಗಿ ನಿಷೇಧಿಸಿದ್ದು ಇತ್ತೀಚಿನ ವರ್ಷಗಳಲ್ಲಿ ಸಾಮೂಹಿಕ ಇರಿತ ಪ್ರಕರಣಗಳು ನಡೆಯುತ್ತಿಲೆ. ನಿರ್ದಿಷ್ಟವಾಗಿ ಶಿಶುವಿಹಾರ ಮತ್ತು ಶಾಲಾ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮಾರಣಾಂತಿಕ ಚಾಕು ದಾಳಿಗಳು ರಾಷ್ಟ್ರವ್ಯಾಪಿ ಸಂಭವಿಸಿವೆ.
ಕಳೆದ ಏಪ್ರಿಲ್‌ನಲ್ಲಿ, ದಕ್ಷಿಣ ಚೀನಾದ ಶಿಶುವಿಹಾರದಲ್ಲಿ ನಡೆದ ಚಾಕು ದಾಳಿಯಲ್ಲಿ ಇಬ್ಬರು ಮಕ್ಕಳು ಹತ್ಯೆಯಾಗಿದ್ದು 16 ಮಂದಿ ಗಾಯಗೊಂಡಿದ್ದರು.
ಮೈಸೂರು : ಕೇಳಿದ ತಕ್ಷಣ ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಸ್ನೇಹಿತನ ಮೇಲೆ ಯುವಕನೊಬ್ಬ ಚಾಕುವಿನಿಂದ ಇರಿದಿರುವ ಘಟನೆ ನಗರದಲ್ಲಿ…
ಮೈಸೂರು : ಲೈಂಗಿಕವಾಗಿ ಸಹಕರಿಸಿದಲ್ಲಿ ಚೆನ್ನಾಗಿ ನೋಡಿಕೊಳ್ಳುತ್ತೀನಿ ಎಂದು ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ…
ಮೈಸೂರು : ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವಿಯ ದರ್ಶನ ಹಾಗೂ ಸಮೂಹ ದೇವಾಲಯಗಳ ಸೇವೆಗಳ ಶುಲ್ಕಗಳನ್ನು ಏರಿಸಿರುವ ರಾಜ್ಯ…
ಬೆಳಗಾವಿ : ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮೂರು ತಿಂಗಳ…
ಬೆಂಗಳೂರು : ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯ ಒದಗಿಸುವಂತೆ…
ಟೋಕಿಯೋ : ಜಪಾನ್‌ನ ಪೂರ್ವ ಮತ್ತು ಉತ್ತರ ಕರಾವಳಿ ತೀರದಲ್ಲಿ ೭.೬ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಡೀ ಪ್ರದೇಶವನ್ನೇ…