ಹೊಸದಿಲ್ಲಿ: jiohotstar.com ಡೊಮೈನ್ ಅನ್ನು ದುಬೈನಲ್ಲಿರುವ ಭಾರತೀಯ ಮೂಲದ ಚಿಣ್ಣರು ರಿಲಯನ್ಸ್‌ಗೆ ಉಚಿತವಾಗಿ ವರ್ಗಾಯಿಸಲು ನಿರ್ಧರಿಸಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಜಿಯೊ ಸಿನಿಮಾ ಮತ್ತು ಡಿಸ್ನಿ+ಹಾಟ್‌ಸ್ಟಾರ್ ಒತ್ತೀಚೆಗೆ ಒಗ್ಗೂಡಿತ್ತು. ಬಳಿಕ ಜಿಯೊ ಒಡೆತನದ ರಿಲಯನ್ಸ್‌ಗೆ ಡೊಮೈನ್ ವಿಚಾರವಾಗಿ ಚಿಂತೆಯು ಇತ್ತು. ಇದಕ್ಕೆ ಕಾರಣ ಜಿಯೊ ಮತ್ತು ಡಿಸ್ನಿ+ ಎರಡು ಕಂಪನಿಯ ವಿಲೀನ ಪ್ರಕ್ರಿಯೆ ಮುನ್ನ ದೆಹಲಿ ಮೂಲದ ವಿದ್ಯಾರ್ಥಿಯೊಬ್ಬ jiohotstar.com ಡೊಮೈನ್ ಅನ್ನು ಖರೀದಿಸಿದ್ದ. ನಂತರ ಈತ ಉನ್ನತ ವ್ಯಾಸಂಗಕ್ಕೆ ಕೇಳಿದಷ್ಟು ಹಣ ನೀಡಿದರೆ ನಿಮಗೆ ವರ್ಗಾಯಿಸುತ್ತೇನೆ ಎಂದು ರಿಲಯನ್ಸ್ ಕಂಪನಿಗೆ ಹಣದ ಬೇಡಿಕೆ ಇಟ್ಟಿದ್ದ.
ಮುಂದಾಗುವ ಸಾವಲುಗಳನ್ನು ಚಿಂತಿಸಿದ ಜಿಯೊ ಕಂಪನಿಯ ಈತನ ಬೇಡಿಕೆಯನ್ನು ತಿರಸ್ಕರಿಸಿತ್ತು. ಆನಂತರ ಆ ವಿದ್ಯಾರ್ಥಿ ದುಬೈನಲ್ಲಿರುವ ಭಾರತ ಮೂಲದ ಜೈನಾಮ್ ಜೈನ್(13) ಜೈವಿಕಾ ಜೈನ್(10) ಎಂಬ ಚಿಣ್ಣರಿಗೆ jiohotstar.com ಡೊಮೈನ್ ಅನ್ನು ಮಾರಿದ್ದ.
ಇದೀಗ ಈ ಚಿಣ್ಣರು jiohotstar.com ಡೊಮೈನ್ ಅನ್ನು ರಿಲಯನ್ಸ್ ಕಂಪನಿಗೆ ಉಚಿತವಾಗಿ ನೀಡಲು ನಿರ್ಧರಿಸಿದ್ದಾರೆ. ಈ ಕುರಿತು ವಿಡಿಯೊ ಹಂಚಿಕೊಂಡಿರುವ ಅವರು, ರಿಲಯನ್ಸ್ ಐಪಿ ಲೀಗಲ್ ಟೀಮ್ ನಮ್ಮನ್ನು ಸಂಪರ್ಕಿಸಿದೆ. ಈ ಸಂಬಂಧ ಒಪ್ಪಂದಗಳಿಗೆ ಸಹಿಹಾಕಲು ಮುಂಬೈಗೆ ಬರಲಿದ್ದೇವೆ. ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ. ನಮ್ಮಿಂದ ಅವರಿಗೆ ಸಹಾಯವಾಗಲಿ ಎಂದಷ್ಟೇ ನಾವು ಉಚಿತವಾಗಿ ನೀಡಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಈ ಇಬ್ಬರು ಚಿಣ್ಣರು ದುಬೈನಲ್ಲಿ ಶೈಕ್ಷಣಿಕ ಸಂಬಂಧ ಚಾರಿಟಿ ನಡೆಸುತ್ತಿದದ್ದು, ಸೇವಾ ಆರ್ಮಿ ಎಂಬ ವೆಬ್‌ಸೈಟ್ ಅನ್ನು ಸಹ ಇದಕ್ಕಾಗಿ ರೂಪಿಸಿದ್ದಾರೆ.
ಚಾಮರಾಜನಗರ : ತಾಲ್ಲೂಕಿನ ಬೇಡರಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇನ್ನೂ ಒಂದು ಚಿರತೆ ಸೆರೆಯಾಗಿದೆ. ಗ್ರಾಮದ ಮಲ್ಲಣ್ಣ…
ಬೆಂಗಳೂರು : 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಅಭಿಯಾನ ಯಶಸ್ವಿಯಾಗಿ ನಡೆಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು…
ಸಿದ್ದಾಪುರ : ಎರಡು ಬೈಕ್‌ಗಳು ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ…
ಹೊಸದಿಲ್ಲಿ : ಎಲ್‌ಪಿಜಿ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು…
ಟೆಹ್ರಾನ್ : ಇರಾನ್‌ನ ಡ್ರೋನ್ ಉತ್ಪಾದನಾ ಘಟಕದ ಮೇಲೆ ಅಮೆರಿಕ ಸೇನೆ ನಡೆಸಿದ ನಿಖರ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಉಪಗ್ರಹ…
ಮೈಸೂರು : ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ…