ದೇಶ- ವಿದೇಶ

ಜಿನ್ನಾ,ಕಾಂಗ್ರೆಸ್‌, ಮೌಂಟ್‌ ಬ್ಯಾಟರ್‌ ದೇಶ ವಿಭಜನೆಗೆ ಕಾರಣ : NCERT ಪಠ್ಯದಲ್ಲಿ ಉಲ್ಲೇಖ

ಹೊಸದಿಲ್ಲಿ : ದೇಶ ವಿಭಜನೆಯ ಕರಾಳ ನೆನಪಿನ ದಿನವನ್ನು ಗುರುತಿಸಲು, NCERT ಶಾಲೆಗಳಿಗೆ ವಿಶೇಷ ಶೈಕ್ಷಣಿಕ ಪಠ್ಯವನ್ನು ಅನ್ನು ಪರಿಚಯಿಸಿದ್ದು, ದೇಶ ವಿಭಜನೆಗೆ ಮೊಹಮ್ಮದ್‌ ಅಲಿ ಜಿನ್ನಾ, ಕಾಂಗ್ರೆಸ್‌ ಮತ್ತು ಅಂದಿನ ವೈಸ್‌ರಾಯ್‌ ಮೌಂಟ್‌ ಬ್ಯಾಟನ್‌ ಕಾರಣ ಎಂದು ಪಠ್ಯದಲ್ಲಿ ವಿವರಿಸಿದೆ.

ವಿಭಜನೆಯ ಬಳಿಕ ಕಾಶ್ಮೀರ ವಿವಾದ ಶುರುವಾಯಿತು. ಇದು ಇಂದಿಗೂ ದೇಶದ ವಿದೇಶಾಂಗ ನೀತಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಕಾಶ್ಮೀರ ವಿವಾದವನ್ನು ಮುಂದೆ ಇಟ್ಟುಕೊಂಡು ಈಗಲೂ ಕೆಲ ರಾಷ್ಟ್ರಗಳು ಪಾಕಿಸ್ತಾನಕ್ಕೆ ನೆರವು ನೀಡುತ್ತಿವೆ ಎಂದು ವಿವರಿಸಿದೆ.

“ಆಗಸ್ಟ್ 15, 1947 ರಂದು, ಭಾರತ ವಿಭಜನೆಯಾಯಿತು. ಆದರೆ ಇದು ಯಾವುದೇ ಒಬ್ಬ ವ್ಯಕ್ತಿಯ ಕೃತ್ಯವಲ್ಲ. ಭಾರತದ ವಿಭಜನೆಗೆ ಕಾರಣವಾದ ಮೂರು ಅಂಶಗಳಿದ್ದವು: ಅದನ್ನು ಒತ್ತಾಯಿಸಿದ ಜಿನ್ನಾ; ಎರಡನೆಯದಾಗಿ ಅದನ್ನು ಒಪ್ಪಿಕೊಂಡ ಕಾಂಗ್ರೆಸ್ ಮತ್ತು ಮೂರನೆಯದಾಗಿ, ಅದನ್ನು ಜಾರಿಗೆ ತಂದ ಮೌಂಟ್ ಬ್ಯಾಟನ್,” ಎಂದು NCERT ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.

ವಿಭಜನೆಯ ದೀರ್ಘಕಾಲೀನ ಪರಿಣಾಮವನ್ನು ಪಠ್ಯದಲ್ಲಿ ಎತ್ತಿ ತೋರಿಸಲಾಗಿದೆ. ವಿಭಜನೆ ವೇಳೆ ದೇಶದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಭಾರತ ನಿಜಕ್ಕೂ ಯುದ್ಧ ಭೂಮಿಯಾಗಿತ್ತು. ಗಾಂಧಿ ಅವರು ವಿಭಜನೆಯನ್ನು ವಿರೋಧಿಸಿದ್ದರು, ಹಿಂಸಾಚಾರದ ಮೂಲಕ ಕಾಂಗ್ರೆಸ್‌ ನಿರ್ಧಾರವನ್ನು ವಿರೋಧಿಸುವಲ್ಲಿ ಅವರು ವಿಫಲರಾದರೂ ಎಂದು ಹೇಳಲಾಗಿದೆ.

6–8 ತರಗತಿಗಳು ಮತ್ತು 9–12 ತರಗತಿಗಳಿಗೆ ಪ್ರತ್ಯೇಕ ಪಠ್ಯಗಳನ್ನು ಎನ್‌ಸಿಇಆರ್‌ಟಿ ಸಿದ್ಧಪಡಿಸಿದೆ. ದೇಶ ವಿಭಜನಗೆಯ ಕರಾಳ ನೆನಪಿನ ದಿನದ ಅಂಗವಾಗಿ 2021ರಲ್ಲಿ ಪ್ರಧಾನಿ ಮೋದಿ ಅವರ ಸಂದೇಶದೊಂದಿಗೆ ಈ ಎರಡು ಪುಸ್ತಕಗಳು ಆರಂಭಗೊಳ್ಳುತ್ತವೆ.

ಆಂದೋಲನ ಡೆಸ್ಕ್

Recent Posts

ನಿಲ್ಲದ ಚಿನ್ನದ ನಾಗಾಲೋಟ : 1.61ಲಕ್ಷ ರೂ.ತಲುಪಿದ ಬಂಗಾರ

1 ಕೆ.ಜಿ.ಬೆಳ್ಳಿಗೆ 3.30 ಲಕ್ಷ ರೂಪಾಯಿ ಹೈದರಾಬಾದ್ : ಚಿನ್ನ ಮತ್ತು ಬೆಳ್ಳಿ ಬೆಲೆಗಳ ಏರಿಕೆ ನಿಲ್ಲುತ್ತಿಲ್ಲ. ಬುಧವಾರ ಹಳದಿ…

4 hours ago

ಯುವಕನ ಕೊಲೆ ಪ್ರಕರಣ : ಮೂವರು ಆರೋಪಿಗಳ ಬಂಧನ

ಮೈಸೂರು : ಸೋಮವಾರ ತಡರಾತ್ರಿ ಯುವಕನೋರ್ವನನ್ನು ಐವರ ಗುಂಪು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ…

4 hours ago

ಪಾದಯಾತ್ರೆ ವೇಳೆ ಚಿರತೆ ದಾಳಿಗೆ ವ್ಯಕ್ತಿ ಬಲಿ ಪ್ರಕರಣ : ಚಿರತೆ ಸೆರೆಗೆ ಅರಣ್ಯ ಇಲಾಖೆ ಕ್ರಮ

ಹನೂರು : ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ವ್ಯಕ್ತಿ ಮೃತಪಟ್ಟಿರುವುದರಿಂದ ಚಿರತೆ…

6 hours ago

ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣ : ಜಿ.ಟಿ.ದಿನೇಶ್‌ಗೆ ಹೈಕೋರ್ಟ್ ಶಾಕ್

ಇಡಿ ಬಂಧನದಿಂದ ಬಿಡುಗಡೆ ಕೋರಿ ಮಾಜಿ ಆಯುಕ್ತ ಸಲ್ಲಿಸಿದ್ದ ಅರ್ಜಿ ತಿರಸ್ಕಾರ ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ…

6 hours ago

ಸಮೀಕ್ಷೆ | ಫೆ.10ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಕೆ

ಬೆಂಗಳೂರು : ಜನವರಿ ಅಂತ್ಯ ಅಥವಾ ಫೆಬ್ರವರಿ 10ರೊಳಗೆ ಮಧುಸೂದನ್ ನಾಯಕ್ ಅವರ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ…

6 hours ago

ಅಕ್ರಮ ರೆಸಾರ್ಟ್‌ ವಿರುದ್ದದ ಅನಿರ್ದಿಷ್ಟ ಪ್ರತಿಭಟನೆ ಅಂತ್ಯ

ಹೆಚ್.ಡಿ.ಕೋಟೆ : ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶ, ನಾಗರಹೊಳೆ-ಬಂಡೀಪುರ ಅರಣ್ಯ ವ್ಯಾಪ್ತಿ ಹಾಗೂ ಪರಿಸರ ಸಂವೇದಿ ವಲಯಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ…

6 hours ago